ಪ್ರಾಚೀನ ಪಪೈರಸ್‌ನಲ್ಲಿ ಜೆರುಸಲೇಂ ಉಲ್ಲೇಖ
ಇಷ್ಟಾಗಿಯೂ ಈ ಪಪೈರಸ್‌ನ ಪ್ರಸ್ತುತಿ ಸುತ್ತ ಹುಟ್ಟಿಕೊಂಡಿರುವ ವಿವಾದಗಳು, ಇದು ಬೆಳಕಿಗೆ ತಂದಿರುವ ಅಂಶಗಳನ್ನು ಮಬ್ಬುಗೊಳಿಸುವಂಥವು. ಜೂಧ್ ರಾಜ ತನ್ನ ವೈಯಕ್ತಿಕ ದಾಸ್ತಾನಿನಿಂದ ಜೆರುಸಲೇಂಗೆ ವೈನ್ ತರಲು ಕೇಳಿದ್ದನೇ? ಅಥವಾ ಆತನ ಅಧೀನದಲ್ಲಿರುವವರು ಆತನಿಗೆ ವೈನ್ ಅನ್ನು ಉಡುಗೊರೆ ಅಥವಾ ತೆರಿಗೆಯಾಗಿ ನೀಡಿದ್ದರೇ? ಅಥವಾ ನೆರೆಯ ರಾಜನೊಬ್ಬ ಈ ರಾಜನಿಗೆ ಅತ್ಯುತ್ತಮ ವೈನ್ ನೀಡಲು ಮುಂದಾಗಿದ್ದನೇ? ಹಿಂದಿನ ಸಾಲುಗಳು ಏನು ಹೇಳುತ್ತವೆ?
ಇಸ್ರೇಲ್ ಪ್ರಾಚ್ಯವಸ್ತು ಪ್ರಾಧಿಕಾರ ಇತ್ತೀಚೆಗೆ, ಜೆರುಸಲೇಂ ಉಲ್ಲೇಖವಿರುವ 2700 ವರ್ಷ ಹಳೆಯ ಪಪೈರಸ್(ಒಂದು ಬಗೆಯ ಸಸ್ಯ) ಪತ್ತೆ ಮಾಡಿದೆ.
ಕುತೂಹಲಕಾರಿ ಅಂಶವೆಂದರೆ ಇದು ಅಧಿಕೃತ ಉತ್ಖನನ ವೇಳೆ ಕಂಡುಬಂದದ್ದಲ್ಲ. ಆದ್ದರಿಂದ ಇದರ ಮೂಲ ಅನಿಶ್ಚಿತ. ಇದು ಡೆಡ್‌ಸೀ ಪಶ್ಚಿಮ ಕಿನಾರೆಯಲ್ಲಿರುವ ಜ್ಯೂಡಿಯನ್ ಮರುಭೂಮಿಯ ಅಸಂಖ್ಯಾತ ಗವಿಗಳಿಂದ ಇದು ಬಂದಿದೆ ಎಂದು ಹೇಳಲಾಗಿದೆ. ಖಂಡಿತವಾಗಿಯೂ ಇದು ಸಂಗ್ರಹಯೋಗ್ಯ ದಾಖಲೆ. ಸುಮಾರು 1000 ಪ್ರಾಚ್ಯ ಹಸ್ತಪ್ರತಿಗಳನ್ನು ಈ ಪ್ರದೇಶದಲ್ಲಿ ಪಪೈರಸ್‌ನಲ್ಲಿ ನಕಲು ಮಾಡಿರುವುದು ಪತ್ತೆಯಾಗಿದೆ.
ಈ ಪೈಕಿ ಬಹುತೇಕ ಹಸ್ತಪ್ರತಿಗಳನ್ನು ಸ್ಥಳೀಯ ಬೆಡೊಯುನ್ ಜನರು ಪತ್ತೆ ಮಾಡಿದ್ದಾರೆ. ಈ ಜನಾಂಗ ಇತರ ಎಲ್ಲರಿಗಿಂತ ಚೆನ್ನಾಗಿ ಈ ಗುಹೆಗಳ ಬಗ್ಗೆ ಮಾಹಿತಿ ಹೊಂದಿದೆ, ಈ ಪ್ರಾಚ್ಯವಸ್ತುಗಳಿಗೆ ಮಾರುಕಟ್ಟೆಯಲ್ಲಿ ಇರುವ ವೌಲ್ಯದ ಅರಿವೂ ಅವರಿಗೆ ಇದೆ. ಆದರೆ ಈ ಬಾರಿ ಹೊಸ ಪಪೈರಸ್ ಮಾರಾಟಕ್ಕೆ ಇದೆ ಎಂಬ ಅಂಶ ಇಸ್ರೇಲಿ ಅಧಿಕಾರಿಗಳಿಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ದಿಢೀರ್ ಕಾರ್ಯಾಚರಣೆ ಕೈಗೊಂಡು, ಈ ಅಮೂಲ್ಯ ವಸ್ತುವನ್ನು ವಶಪಡಿಸಿಕೊಂಡರು.
ಇಸ್ರೇಲಿನ ಪ್ರಾಚ್ಯವಸ್ತು ಪ್ರಾಧಿಕಾರಕ್ಕೆ ಇದು ಹೊಸದಲ್ಲ. ಇವರು ಇಂಥ ಪ್ರಾಚೀನ ವಸ್ತುಗಳ ಮಾರಾಟ ವಿರುದ್ಧ ದಾಳಿ ಮಾಡುತ್ತಲೇ ಇರುತ್ತಾರೆ. ಕೆಲವು ಬಾರಿ ವಿಜ್ಞಾನಿಗಳೂ ಇದರಲ್ಲಿ ಶಾಮೀಲಾಗಿ ನಕಲಿ ಉತ್ಪನ್ನವನ್ನು ತಯಾರಿಸುವುದರಿಂದ ಕಾರ್ಯಾಚರಣೆ ನಿರರ್ಥಕವಾಗುವುದೂ ಇದೆ.
ಇದೀಗ ಲಭ್ಯವಾಗಿರುವ ಪಪೈರಸ್‌ನಲ್ಲಿ ಹೆಬ್ರೂ ಲಿಪಿಯಲ್ಲಿ ಮೂರು ಸಾಲುಗಳಿವೆ. ಇದು 10.9 ಸೆಂಟಿಮೀಟರ್ ಉದ್ದ ಹಾಗೂ 3.2 ಸೆಂ.ಮೀ. ಅಗಲವಿದೆ. ತುದಿ ಹಾಗೂ ಕೊನೆಯನ್ನು ಹರಿಯಲಾಗಿದ್ದು, ಇದು ಈ ದಾಖಲೆಯ ಸಾಲು ಕೊನೆಗೊಳ್ಳುವುದನ್ನು ಸೂಚಿಸುತ್ತದೆ. ಈ ಗರಿಯಲ್ಲಿದ್ದ ಸಾಲುಗಳು ಹೀಗಿವೆ.
2) ðú.äîìê îîòøúä.ðáìéí.éé
3) ï.éøùìîä
ಇದರ ಕನ್ನಡ ಭಾಷಾಂತರ ಹೀಗಿದೆ:
‘‘ರಾಜ ತನ್ನ ಗುಹೆಯಿಂದ ಎರಡು ಹೂಜಿ ವೈನ್‌ನೊಂದಿಗೆ ಜೆರುಸಲೇಂ ಕಡೆಗೆ ಬರುತ್ತಿದ್ದಾನೆ’’
ಈ ಗರಿಯ ಮೇಲ್ತುದಿಯಲ್ಲಿನ ಕೆಲ ಅಕ್ಷರಗಳನ್ನು ಪತ್ತೆ ಮಾಡುವುದು ಮತ್ತು ಮೊದಲ ಸಾಲನ್ನು ಪುನರ್ ನಿರ್ಮಿಸುವುದು ಕಷ್ಟಕರವಾಗಿದೆ. ಎರಡನೆ ಸಾಲಿನ ಮೊದಲ ಎರಡು ಅಕ್ಷರಗಳು ಅಪೂರ್ಣವಾಗಿರುವುದು ಕೂಡಾ ಹೀಗೆ ಅನಿಶ್ಚಿತವಾಗಿಯೇ ಇದೆ. ಆ ಬಳಿಕ ರಾಜ ಎಂಬ ಪದವಿದ್ದು, ಇಸ್ರೇಲಿ ಸಹೋದ್ಯೋಗಿ ಇದನ್ನು ‘‘ನಾರಟ ಪ್ರದೇಶದಿಂದ’’ ಎಂದು ವಿಶ್ಲೇಷಿಸಿದ್ದಾರೆ.
ಆದರೆ ನಾನು ಅದನ್ನು ‘‘ನಾರಟದಿಂದ’’ ಎಂದು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಮೊದಲ ಅಕ್ಷರ ಸ್ಪಷ್ಟವಾಗಿ ಎಂ ಆಗಿರುವುದರಿಂದ ನಾರಟದಿಂದ ಅಥವಾ ಗುಹೆಯಿಂದ ಎಂದು ಅದನ್ನು ವಿಶ್ಲೇಷಿಸಬೇಕಾಗುತ್ತದೆ.
ನಾರಟ್ ಎನ್ನುವುದು ಜುದಾಹಿತ್ ನಗರವಾಗಿದ್ದು, ಬೈಬಲ್‌ನಲ್ಲಿ ಇದರ ಉಲ್ಲೇಖವಿದೆ. ಇದೇ ಪದಕ್ಕೆ ಗವಿ ಎಂಬ ಅರ್ಥವೂ ಇರುವುದರಿಂದ ಎರಡೂ ಸಾಧ್ಯತೆಗಳು ಇವೆ. ಹಾಗಾದರೆ ಗುಹೆಯನ್ನು ವೈನ್‌ನ ಸುರಂಗ ಎಂದು ವಿಶ್ಲೇಷಿಸಬಹುದು. ಆದರೆ ಎಷ್ಟು ಹೂಜಿಗಳಲ್ಲಿ ವೈನ್ ಇತ್ತು ಎನ್ನುವುದು ಅಸ್ಪಷ್ಟ. ನಾನು ಅದನ್ನು ಎರಡು ಹೂಜಿ ಎಂದು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಹೂಜಿಗಳು ಎಂದೂ ಇದನ್ನು ಓದಬಹುದು.
ಈ ಹೂಜಿಗಳನ್ನು ಎಲ್ಲಿಗೆ ಒಯ್ಯಲಾಗುತ್ತಿದೆ ಎಂಬ ಉಲ್ಲೇಖ ಸ್ಪಷ್ಟವಾಗಿ ಜೆರುಸಲೇಂ ಎಂದು ನಮೂದಿಸಲಾ ಗಿದೆ. ಈ ಶಬ್ದ ಮಾಧ್ಯಮಗಳ ಗಮನ ಸೆಳೆದಿದೆ. ಪಪೈರಸ್ ನಲ್ಲಿ ಈ ಪವಿತ್ರ ನಗರದ ಉಲ್ಲೇಖ ಇರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಜೆರುಸಲೇಂ ಉಲ್ಲೇಖ
ಇಸ್ರೇಲಿನ ಪ್ರಾಚ್ಯವಸ್ತು ಪ್ರಾಧಿಕಾರದ ರೇಡಿಯೊ ಕಾರ್ಬನ್ ಕಾಲಾವಧಿ ನಿರ್ಣಯದ ಪ್ರಕಾರ, ಈ ಪಪೈರಸ್ ಕ್ರಿಸ್ತಪೂರ್ವ ಏಳನೆ ಶತಮಾನದ್ದು. ಆದರೆ ವಾಸ್ತವವಾಗಿ ಕಾರ್ಬನ್-14 ಆಧರಿತ ಕಾಲ ನಿರ್ಣಯ ನಿಖರವಾದ ಅವಧಿಯನ್ನು ತೋರಿಸಿಲ್ಲ. ಆದ್ದರಿಂದ ಇದು ಹಿಂದಿನ ಅಥವಾ ಮುಂದಿನ ಶತಮಾನದ್ದೂ ಇರಬಹುದು.
ಇಷ್ಟಾಗಿಯೂ ಅಂಥ ದುರ್ಬಲ ಅಥವಾ ಶಿಥಿಲಾವಸ್ಥೆಯ ದಾಖಲೆ ಇಷ್ಟು ದೀರ್ಘಕಾಲ ಉಳಿದುಕೊಂಡಿರುವುದೇ ಸೋಜಿಗದ ಸಂಗತಿ. ಕಳೆದ ವರ್ಷ ಪತ್ತೆಯಾದ ನೂರಾರು ಬಳಪದ ಮೊಹರುಗಳಲ್ಲೂ ಪಪೈರಸ್‌ಗಳ ಬಳಕೆ ಬಗ್ಗೆ ಉಲ್ಲೇಖವಿದೆ. ಇವುಗಳನ್ನು ಪಪೈರಸ್‌ನ ಹಿಂದೆ ದಾಸ್ತಾನು ಮಾಡಿ ಇಡಲಾಗುತ್ತಿತ್ತು.
ಇದೇ ಅವಧಿಯ ಇನ್ನೊಂದು ಪಪೈರಸ್ 1952ರಲ್ಲಿ ಜುಡಿಯನ್ ಮರುಭೂಮಿಯ ಮುರಬ್ಬಾತ್ ಗುಹೆಯಲ್ಲಿ ಪತ್ತೆಯಾಗಿತ್ತು. ಆದರೆ ಇಂಥ ಸಂಶೋಧನೆಗಳು ಅಪರೂಪದ್ದಾಗಿಯೇ ಉಳಿದಿವೆ.
ಈ ಕಾರಣದಿಂದ ಈ ಪಪೈರಸ್‌ನಲ್ಲಿ ಇರುವ ಜೆರುಸಲೇಂ ಉಲ್ಲೇಖ ಸಜಹವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟಾಗಿಯೂ ಪ್ರಾಚ್ಯ ಇತಿಹಾಸದಲ್ಲಿ ಈ ನಗರದ ಉಲ್ಲೇಖ ಇರುವುದು ಇದೇ ಮೊದಲಲ್ಲ. ಉದಾಹರಣೆಗೆ ಪಶ್ಚಿಮ ಹೆಬ್ರೋನ್‌ನ ಖಿರ್‌ಬೆಟ್ ಬೀಟ್ ಲೀ ಗುಹೆಯಲ್ಲಿ ಪತ್ತೆಯಾದ ಹೆಬ್ರೂ ಶಾಸನಗಳಲ್ಲೂ ಈ ಉಲ್ಲೇಖವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಕ್ರಿಸ್ತಪೂರ್ವ 14ನೆ ಶತಮಾನದ ವೇಳೆಯದ್ದು ಎನ್ನಲಾಗಿದ್ದು, ಪರೋಹ್ ಅಕೆಂಥನ್ ಹಾಗೂ ಆತನ ಜೆರುಸಲೇಂ ಹಡಗುಗಳ ನಡುವೆ ವಿನಿಮಯವಾದ ಪತ್ರಗಳು ಎಂದು ಹೇಳಲಾಗಿದೆ. ಇದಕ್ಕೂ ಹಿಂದಿನ ಈಜಿಪ್ಟಿಯನ್ ಬರಹಗಳಲ್ಲಿ ಇದರ ಉಲ್ಲೇಖ ಇರಬಹುದು.
ಅಂತೆಯೇ ಜೂಧ್ ಸಾಮ್ರಾಜ್ಯದ ಉಲ್ಲೇಖ ಸ್ಪಷ್ಟವಾಗಿ ಒಂಬತ್ತನೆ ಶತಮಾನದಲ್ಲಿ ಕಾಣಸಿಗುತ್ತದೆ. ಬೆಬಿಲೋನಿಯನ್ನರ ಕೈಯಲ್ಲಿ ಸೋತು ಅವರ ರಾಜಧಾನಿಯಾಗಿದ್ದ ಜೆರುಸಲೇಂನ ಪತನವಾದ ಅವಧಿಯನ್ನು ಸುಮಾರು ಕ್ರಿಸ್ತಪೂರ್ವ 587 ಎಂದು ಉಲ್ಲೇಖಿಸಲಾಗಿದೆ. ಐತಿಹಾಸಿಕ ಹಾಗೂ ಪ್ರಾಚ್ಯವಸ್ತು ದೃಷ್ಟಿಕೋನದಿಂದ, ಜೆರುಸಲೇಂ ಪಟ್ಟಣ ಜೂಧ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.
ನಕಲಿ ಪಪೈರಸ್?
ಈ ಹಿನ್ನೆಲೆ ಬಹುಶಃ ಪಪೈರಸ್‌ನ ಅಧಿಕೃತತೆಗೆ ಮಾರಕವಾಗಬಹುದು. 2700 ವರ್ಷ ಹಳೆಯ ಹೆಬ್ರೂ ಬರಹದಲ್ಲಿ ಜೆರುಸಲೇಂ ಉಲ್ಲೇಖವಿರುವುದು ಪತ್ತೆಯಾದ ದಿನವೇ ಯುನೆಸ್ಕೊ, ಫೆಲಸ್ತೀನ್ ಪರ ನಿರ್ಣಯದ ಪರ ಮತ ಚಲಾಯಿಸಿರುವುದು ಕಾಕತಾಳೀಯ.
ಈಗ ಅದರ ಅಧಿಕೃತತೆಯನ್ನು ಸಾಬೀತುಪಡಿಸಲಾಗದು. ಏಕೆಂದರೆ ಸ್ವತಂತ್ರ ರಾಜಕೀಯ ವಿಚಾರಗಳಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕು. ನಾವು ಎಚ್ಚರಿಕೆಯಿಂದ ಇದ್ದರೂ, ಇಂಥ ಸಂಶೋಧನೆಗಳ ಅಧಿಕೃತತೆಯನ್ನು ವ್ಯವಸ್ಥಿತವಾಗಿ ಪ್ರಶ್ನಿಸಬಹುದಾಗಿದೆ.
ಈ ಬಗ್ಗೆ ಅತ್ಯಂತ ಸರಳ ನಿಲುವು ತೆಗೆದುಕೊಳ್ಳಬಹುದು. ಇದು ನಕಲಿಯಾಗಿದ್ದರೆ, ಹೀಗೆ ಉಲ್ಲೇಖಿಸಿರುವ ಮೊಟ್ಟಮೊದಲ ದಾಖಲೆ ಎಂದು ಹೇಳಿಕೊಳ್ಳಬಹುದಿತ್ತು. ಇದು ಅಧಿಕೃತ ಎನ್ನಬೇಕಾದರೆ ಹೆಚ್ಚು ಎಚ್ಚರವಿರಬೇಕು.
ಆದರೆ ವಾಸ್ತವವಾಗಿ ಇಂಥ ಸಂಶೋಧನೆಗಳು ಎಷ್ಟು ಅಧಿಕೃತ ಎಂದು ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯ. ಕೆಲ ತಿಂಗಳ ಹಿಂದೆ, ಡೆಡ್‌ಸೀ ಬರಹಗಳ ಬಗ್ಗೆ ನಾನು ಸಂಶಯ ವ್ಯಕ್ತಪಡಿಸಿದ್ದೆ. ನನ್ನ ಪ್ರಕಾರ ಅದು ನಕಲಿ.
ಇದೀಗ ಈ ಪಪೈರಸ್‌ಗೆ ಸಂಬಂಧಿಸಿದಂತೆ ಕೂಡಾ ಇದು ನಕಲಿ ಎಂಬ ವಾದಗಳು ನಡೆಯುತ್ತಿವೆ. ಆದರೆ ಇದ್ಯಾವುದೂ ಒಪ್ಪುವಂಥದ್ದಲ್ಲ. ನನಗೂ ಅದರ ಅಧಿಕೃತತೆ ಬಗ್ಗೆ ಸಂಶಯವಿದೆ. ಆದರೆ ಇನ್ನೊಂದೆಡೆ, ಅದರಲ್ಲಿ ಶೀಟುಗಳ ಮಾರ್ಜಿನ್ ಬಿಟ್ಟಿರುವುದನ್ನು ನೋಡಿದರೆ ಹಾಗೂ ಬರಹದ ಸಂರಚನೆ ನೋಡಿದರೆ, ಇನ್ನಷ್ಟು ವಿಶ್ಲೇಷಣೆ ಅಗತ್ಯ ಎನಿಸುತ್ತದೆ.
ಇಷ್ಟಾಗಿಯೂ ಈ ಪಪೈರಸ್‌ನ ಪ್ರಸ್ತುತಿ ಸುತ್ತ ಹುಟ್ಟಿಕೊಂಡಿರುವ ವಿವಾದಗಳು, ಇದು ಬೆಳಕಿಗೆ ತಂದಿರುವ ಅಂಶಗಳನ್ನು ಮಬ್ಬುಗೊಳಿಸುವಂಥವು. ಜೂಧ್ ರಾಜ ತನ್ನ ವೈಯಕ್ತಿಕ ದಾಸ್ತಾನಿನಿಂದ ಜೆರುಸಲೇಂಗೆ ವೈನ್ ತರಲು ಕೇಳಿದ್ದನೇ? ಅಥವಾ ಆತನ ಅಧೀನದಲ್ಲಿರುವವರು ಆತನಿಗೆ ವೈನ್ ಅನ್ನು ಉಡುಗೊರೆ ಅಥವಾ ತೆರಿಗೆಯಾಗಿ ನೀಡಿದ್ದರೇ? ಅಥವಾ ನೆರೆಯ ರಾಜನೊಬ್ಬ ಈ ರಾಜನಿಗೆ ಅತ್ಯುತ್ತಮ ವೈನ್ ನೀಡಲು ಮುಂದಾಗಿದ್ದನೇ? ಹಿಂದಿನ ಸಾಲುಗಳು ಏನು ಹೇಳುತ್ತವೆ?
ಈ ಪಪೈರಸ್ ಅಧಿಕೃತ ಅಥವಾ ಅಲ್ಲವೋ ಎಂಬ ರಹಸ್ಯ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಯುನೆಸ್ಕೊ ಪ್ರವೇಶ
ಹಾಗಾದರೆ ಇದು ಪತ್ತೆಯಾದಾಗ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಏಕೆ ಈ ಪಪೈರಸ್‌ನ ದೈತ್ಯ ಚಿತ್ರವುಳ್ಳ ಪೋಸ್ಟರ್ ಪ್ರದರ್ಶಿಸಿದರು? ಇದಕ್ಕೆ ಕಾರಣವೆಂದರೆ, ಅದೇ ದಿನ ಯುನೆಸ್ಕೊ ಆಕ್ರಮಿತ ಫೆಲಸ್ತೀನ್‌ಗೆ ಕುರಿತ ಕರಡು ನಿರ್ಣಯದ ಮೇಲೆ ಮತ ಹಾಕಿತ್ತು. ಇದರಲ್ಲಿ ಇಸ್ರೇಲ್ ದೇಶವನ್ನು ಆಕ್ರಮಿಸಿಕೊಂಡಿರುವ ದೇಶ ಎಂದು ಉಲ್ಲೇಖಿಸಲಾಗಿದೆ.
ಈ ನಿರ್ಣಯದ ಮೊದಲ ಅವತರಣಿಗೆ, ಉತ್ತರದಲ್ಲಿ ದೊಡ್ಡ ಹಗರಣಕ್ಕೆ ಕಾರಣವಾಗಿದೆ. ಪರಿಷ್ಕೃತ ಅವತರಣಿಕೆ ಹೆಚ್ಚು ಸೌಮ್ಯವಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಜೆರುಸಲೇಂನ ಮಹತ್ವದ ಉಲ್ಲೇಖವಿದೆ. ಇದು ಮೂರು ರಾಜವಂಶದ ಧರ್ಮಗಳಿಂದಾಗಿ ಹೆಚ್ಚಿನ ಮಹತ್ವ ಪಡೆದಿದೆ. ಇಷ್ಟಾಗಿಯೂ, ಇದು ಕೇವಲ ಮುಸ್ಲಿಂ ಪರಂಪರೆಯನ್ನು ಎತ್ತಿಹಿಡಿದಿದ್ದು, ಯಹೂದಿ ಹಾಗೂ ಕ್ರಿಶ್ಚಿಯನ್ ಸಂಪ್ರದಾಯವನ್ನು ಕೈಬಿಟ್ಟಿದೆ.
ಇಸ್ಲಾಮಿಕ್ ದೇಶವಾಗಿರುವುದರಿಂದ, ಪ್ರಾಚ್ಯವಸ್ತು ತಾಣಗಳನ್ನು ಧ್ವಂಸಗೊಳಿಸಲು ಯಾವುದೇ ಹಿಂಜರಿಕೆ ತೋರದು. ಈ ಹಿನ್ನೆಲೆಯಲ್ಲಿ ಯುನೆಸ್ಕೊ ಇದರ ರಾಜಕೀಯ ಹಾಗೂ ಧಾರ್ಮಿಕ ಸಂಘರ್ಷವನ್ನು ಗಣನೆಗೆ ತೆಗೆದುಕೊಂಡು, ಮಾನವತೆಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಜೆರುಸಲೇಂನ ಈ ಪರಂಪರೆಯಲ್ಲಿ ಮುಖ್ಯವಾಗಿ ಎರಡನೆ ಸಹಸ್ರಮಾನದ ಆರಂಭದಿಂದ ಹಿಡಿದು 16ನೆ ಶತಮಾನದವರೆಗಿನ ಕೋಟೆಗಳು, ಒಟ್ಟೊಮನ್ ಸುಲ್ತಾನ್ ಸುಲೈಮಾನ್ ಕಟ್ಟಿದ ಗೋಡೆ, ಹೆರೋಡ್ ದ ಗ್ರೇಟ್ ದೇವಾಲಯಗಳು ಹಾಗೂ ಪವಿತ್ರ ಸಮಾಧಿಯ ಚರ್ಚ್ ಸೇರುತ್ತವೆ. ಇದು ಇಡೀ ಸಹಸ್ರಮಾನದ ಪರಂಪರೆಯಾಗಿದ್ದು, ಯುನೆಸ್ಕೊ ಇದನ್ನು ಯಾವುದೇ ಬಗೆಯ ರಾಜಕೀಯ ಕಾರ್ಯಸೂಚಿಗಳಿಂದ ಸಂರಕ್ಷಿಸಬೇಕು.