ಆನಂದ ಆಚಾರಿ
Update: 2016-11-21 17:59 IST
ಉಪ್ಪಿನಂಗಡಿ, ನ.21: ಕಳೆದ 40 ವರ್ಷಗಳಿಂದ ತನ್ನನ್ನು ವಾಹನ ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಂಡು 'ಡ್ರೈವರ್ ಆನಂದಣ್ಣ' (70)ಎಂದೇ ಖ್ಯಾತರಾಗಿದ್ದ ಆನಂದ ಆಚಾರಿ ಇತ್ತೀಚೆಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ, ಎರಡು ಹೆಣ್ಣು ಮತ್ತು ಓರ್ವ ಗಂಡು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸ್ನೇಹ ಜೀವಿಯಾಗಿದ್ದ ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. 2010 ರಿಂದ ಮರಣದ ವರೆಗೂ ಸುಮಾರು ಆರು ವರ್ಷಗಳ ಕಾಲ ಉಪ್ಪಿನಂಗಡಿಯ ಆತೂರಿನ ಆಯಿಶಾ ವಿದ್ಯಾಸಂಸ್ಥೆ ಯ ಶಾಲಾ ವಾಹನದಲ್ಲಿ ಚಾಲಕರಾಗಿದ್ದು ಎಲ್ಲಾ ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿಷಯ ತಿಳಿದ ತಕ್ಷಣ ಅವರ ಮನೆಗೆ ತೆರಳಿದ ಪ್ರಾಂಶುಪಾಲೆ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಸಂತಾಪ ಸೂಚಿಸಿ ಆರ್ಥಿಕ ಸಹಾಯವನ್ನೂ ನೀಡಿದರು.