ವ್ಯಾಸರಾಜ ಮಠದ ಸ್ವಾಮೀಜಿ ಆಪ್ತ ಸಹಾಯಕನ ಬಂಧನ
Update: 2016-11-25 19:46 IST
ಬೆಂಗಳೂರು,ನ,25: ತಮಿಳುನಾಡಿನ ಚೆನ್ನೈನ ವಾಸರಾಜ ಮಠದಲ್ಲಿ ನಡೆದಿರುವ 23 ಲಕ್ಷ ರೂ. ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಸ್ವಾಮೀಜಿಯೊಬ್ಬರ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ರಾಜಾಜಿನಗರದ ವ್ಯಾಸರಾಜ ಮಠದ ವಿದ್ಯಾ ಮನೋಹರತೀರ್ಥ ಸ್ವಾಮೀಜಿ ಅವರ ಆಪ್ತ ಸಹಾಯಕ ಪ್ರಕಾಶ್ ಎಂಬಾತನನ್ನು ತಮಿಳುನಾಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ರಾಜಾಜಿನಗರದಲ್ಲಿದ್ದ ಆರೋಪಿಯನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರ ಸಹಾಯದೊಂದಿಗೆ ಚೆನ್ನೈನ ಢಿತ್ರಿ ಠಾಣೆ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ
ಘಟನೆ ಹಿನ್ನಲೆ: ಕಳೆದ ಎಂಟು ವರ್ಷಗಳಿಂದ ವಿದ್ಯಾ ಮನೋಹರತೀರ್ಥ ಸ್ವಾಮೀಜಿಯವರ ಸಹಾಯಕನಾಗಿದ್ದ ಆರೋಪಿ ಪ್ರಕಾಶ್ ಚೆನ್ನೈನ ವ್ಯಾಸರಾಜ ಮಠದಲ್ಲಿ ನಡೆದಿರುವ 23 ಲಕ್ಷ ಹಣದ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಚೆನ್ನೈನ ವ್ಯಾಸರಾಜ ಮಠದ ಆಡಳಿತಾಧಿಕಾರಿ ಜಯರಾಜ್ ಢಿತ್ರಿ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.