ಕಳೆದ ಮೂರುವರೆ ವರ್ಷಗಳಲ್ಲಿ ಬ್ಯಾಂಕ್, ಎಟಿಎಂ ಗಳು ವಿತರಿಸಿರುವ ಖೋಟಾ ನೋಟುಗಳು ಎಷ್ಟು ಗೊತ್ತೇ?
ಬೆಂಗಳೂರು, ನ.28: ಕಳೆದ ಮೂರುವರೆ ವರ್ಷಗಳಲ್ಲಿ ದೇಶದಾದ್ಯಂತವಿರುವ ಬ್ಯಾಂಕುಗಳು ಹಾಗೂ ಎಟಿಎಂ ಗಳು ರೂ 14.97 ಕೋಟಿ ಮೌಲ್ಯದ ಬರೋಬ್ಬರಿ 19 ಲಕ್ಷ ನಕಲಿ ನೋಟುಗಳನ್ನು ವಿತರಿಸಿವೆಯೆಂದು ``ನಕಲಿ ಭಾರತೀಯ ನೋಟುಗಳನ್ನು ಬ್ಯಾಂಕುಗಳ ಮೂಲಕ ಪತ್ತೆ'' ಬಗೆಗಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿಯೊಂದು ಹೇಳಿದೆ.
ಈಗಲೂ ಕೂಡ ಕೈ ಬದಲಾವಣೆಗೊಳ್ಳುವ ನೋಟುಗಳ ನಿಖರ ಮೌಲ್ಯ ಹೇಳಲು ಸಾಧ್ಯವಿಲ್ಲವೆನ್ನಲಾಗಿದೆ. ಒಂದು ವಿಶ್ಲೇಷಣೆಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 100 ರೂ ಮುಖಬೆಲೆಯ ರೂ 54.21 ಲಕ್ಷ ಮೌಲ್ಯದ 5.42 ಲಕ್ಷ ನಕಲಿ ನೋಟುಗಳು, 500 ರೂ ಮುಖಬೆಲೆಯ ರೂ 42.8 ಕೋಟಿ ಮೌಲ್ಯದ 8.56 ಲಕ್ಷ ನೋಟುಗಳು ಹಾಗೂ ರೂ 47 ಕೋಟಿ ಮೌಲ್ಯದ 4.7 ಲಕ್ಷ 1000 ರೂ ಮುಖಬೆಲೆಯ ನಕಲಿ ನೋಟುಗಳನ್ನು ಬ್ಯಾಂಕಿಂಗ್ ಮೂಲಕ ವಿತರಿಸಲಾಗಿದೆ ಎಂದು ಹೇಳಲಾಗಿದೆ.
ಈ ವರ್ಷದ ಅಕ್ಟೋಬರ್ 2008 ರಲ್ಲಿ ಕೆನರಾ ಬ್ಯಾಂಕ್ ಎಟಿಎಂ ಒಂದರಿಂದ ರೂ 5000 ಹಿಂಪಡೆದಾಗ 500 ರೂ ಮುಖಬೆಲೆಯ 9 ನಕಲಿ ನೋಟುಗಳು ಎಲ್ ಐ ಸಿ ಉದ್ಯೋಗಿಯೊಬ್ಬರಿಗೆ ದೊರಕಿತ್ತು. ಪ್ರಸ್ತುತ ನಿಯಮಗಳ ಪ್ರಕಾರ ಒಂದು ಹಣಕಾಸಿನ ವ್ಯವಹಾರ ಸಂಬಂಧ ಐದು ಯಾ ಅದಕ್ಕಿಂತ ಹೆಚ್ಚು ನಕಲಿ ನೋಟುಗಳು ಪತ್ತೆಯಾದರೆ ಮಾತ್ರ ಎಫ್ಐಆರ್ ದಾಖಲಿಸಲಾಗುತ್ತದೆ. ಆರ್ ಬಿ ಐ ನಿಯಮಗಳ ಪ್ರಕಾರ ನೋಟುಗಳು ನೈಜವೇ ಅಥವಾ ನಕಲಿಯೇ ಎಂದು ಪತ್ತೆ ಹಚ್ಚುವ ಕರೆನ್ಸಿ ತಪಾಸಣಾ ಮೆಶೀನುಗಳನ್ನು ಹೊಂದುವುದು ಅಗತ್ಯವಾಗಿದೆ