ಡಿ. 3 ಕ್ಕೆ ಯುಪಿಎಸ್ಸಿ ಮೈನ್ಸ್ ಪರೀಕ್ಷೆ

Update: 2016-12-02 06:08 GMT

ಯುಪಿಎಸ್ಸಿ ಡಿಸೆಂಬರ್ 3ರಂದು ಮೈನ್ಸ್ ಪರೀಕ್ಷೆ ನಡೆಸುತ್ತಿದೆ. ಇದರಲ್ಲಿ ಟಾಪ್ ಬರಬೇಕೆಂದರೆ ಕಳೆದ ಬಾರಿಯ ಯುಪಿಎಸ್ಸಿ ಟಾಪರ್ ಟೀನಾ ಡಾಬಿ ಬಳಿ ಮಾಹಿತಿ ಪಡೆದುಕೊಳ್ಳಿ.

ರಾಜಕೀಯ ವಿಜ್ಞಾನ ವಿದ್ಯಾರ್ಥಿ ತನ್ನ ಯಶಸ್ಸಿಗೆ ಕಠಿಣ ಶ್ರಮ ಮತ್ತು ಬದ್ಧತೆ ಕಾರಣ ಎನ್ನುತ್ತಾರೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಅಥಾರ್ ಅಮೀರ್ ಯಲ್ ಸಾಫಿ ಖಾನ್ ದ್ವಿತೀಯ ಸ್ಥಾನ ಮತ್ತು ಜಸ್ಮೀತ್ ಸಿಂಗ್ ಸಂಧು ತೃತೀಯ ಸ್ಥಾನ ಪಡೆದಿದ್ದಾರೆ. ಟೀನಾ ತನ್ನ ಸಿದ್ಧಾಂತವನ್ನು ಹಂಚಿಕೊಂಡಿದ್ದಾರೆ. “ನನ್ನ ರಹಸ್ಯ ಶಕ್ತಿ ನನ್ನ ತಾಯಿ. ನನಗೆ ದ್ವಿತೀಯ ಪಿಯುಸಿಯಿಂದಲೇ ಅವರು ಮಾರ್ಗದರ್ಶನ ನೀಡಿದರು. ಐಎಎಸ್‌ಗಾಗಿ ಸಿದ್ಧ ಮಾಡಿದರು. ಎಲ್ಲಾ ಸಾಧ್ಯವಾದ ಮಾರ್ಗದರ್ಶನ ಮತ್ತು ಬೆಂಬಲವನ್ನು ಕೊಟ್ಟಿದ್ದಾರೆ” ಎಂದು ಮಾಜಿ ಐಇಎಸ್ ಅಧಿಕಾರಿಯಾಗಿ ನಿವೃತ್ತ ಜೀವನ ನಡೆಸುತ್ತಿರುವ ಅಮ್ಮನಿಗೆ ತಮ್ಮ ಯಶಸ್ಸನ್ನು ಅರ್ಪಿಸಿದ್ದಾರೆ.

ದೆಹಲಿಯ ಈ ಯುವತಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಪಡೆದಿದ್ದಾರೆ. “ನಾನು ಆಯ್ಕೆಯಾಗುತ್ತೇನೆ ಎನ್ನುವ ವಿಶ್ವಾಸವೇನೋ ಇತ್ತು. ಆದರೆ ಮೊದಲ ಸ್ಥಾನ ಬರುವುದು ನನ್ನ ಕನಸಿನಿಂದಲೂ ದೂರವಾಗಿತ್ತು” ಎನ್ನುತ್ತಾರೆ. ಟೀನಾ ಮರುದಿನ ಪರೀಕ್ಷೆ ಇದೆ ಎಂದರೆ ಸತತವಾಗಿ 14 ಗಂಟೆಗಳ ಕಾಲ ಓದಿದ್ದಾರೆ. ಆದರೆ ನಿತ್ಯವೂ 8ರಿಂದ 9 ಗಂಟೆ ಮಾತ್ರ ಓದುತ್ತಾರೆ. ಟೀನಾ ತಮ್ಮ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಂ ಕಾಲೇಜ್‌ನಿಂದ ಪಡೆದಿದ್ದರು. ಐಇಎಸ್ ಅಧಿಕಾರಿಯಾಗಿರುವ ಟೀನಾಳ ತಂದೆಗೆ ಮಗಳ ಮೇಲೆ ಹೆಮ್ಮೆ ಇದೆ. ಪದವಿಯಲ್ಲೂ ವರ್ಷದ ವಿದ್ಯಾರ್ಥಿಯಾಗಿ ಟಾಪ್ ಸ್ಥಾನ ಪಡೆದಿದ್ದಾರೆ ಎಂದು ಅವರು ಹೇಳುತ್ತಾರೆ.

ಕೃಪೆ: http://indiatoday.intoday.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News