ಮಕಾವು ಓಪನ್: ಸೈನಾ ಸವಾಲು ಅಂತ್ಯ

Update: 2016-12-02 17:27 GMT

ಮಕಾವು, ಡಿ.2: ಮಕಾವು ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಚೀನಾದ ಝಾಂಗ್ ಯಿಮಾನ್ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಶರಣಾಗಿ ಟೂರ್ನಿಯಿಂದ ಹೊರ ನಡೆದರು.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಸೈನಾ ಅವರು ಝಾಂಗ್ ವಿರುದ್ಧ 21-12, 21-17 ಗೇಮ್‌ಗಳ ಅಂತರದಿಂದ ಸೋತರು.

ಕಳೆದ ತಿಂಗಳು ಗಂಭೀರ ಮಂಡಿನೋವಿಗೆ ತುತ್ತಾದ ಬಳಿಕ ಮೊದಲಿನ ಲಯಕ್ಕೆ ಮರಳಲು ಸೈನಾ ಪರದಾಡುತ್ತಿದ್ದಾರೆ. ಮೊದಲ ಗೇಮ್‌ನಲ್ಲಿ ಸೈನಾ ಕಳಪೆ ಆರಂಭ ಪಡೆದರು. ಎರಡನೆ ಗೇಮ್‌ನಲ್ಲಿ ಇಬ್ಬರು ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು.

ಅಂತಿಮವಾಗಿ ಝಾಂಗ್ 21-17 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ 2016ರ ಆವೃತ್ತಿಯ ಮಕಾವು ಓಪನ್‌ನಲ್ಲಿ ಸೈನಾರ ಅಭಿಯಾನ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News