ಬಾಗ್ದಾದ್ ನಲ್ಲಿ ಗುಜರಾತ್ ಚಪ್ಪಲಿ

Update: 2016-12-04 10:16 GMT

ಚಾಂಬೆ ಪಟ್ಟಣ ಸಾಗರ ವ್ಯಾಪಾರದ ಗೌಜು ಗದ್ದಲದ ಪಟ್ಟಣ. 13ನೆ ಶತಮಾನದ ಕೊನೆಯಲ್ಲಿ ಮಾರ್ಕೊ ಪೋಲೊ ಕೂಡಾ ಈ ಪಟ್ಟಣವನ್ನು ಇದೇ ರೀತಿ ಗುರುತಿಸಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಅರೇಬಿಯನ್ ಜಗತ್ತು ಭಾರತದ ಜತೆ ಸಂಪರ್ಕ ಹೊಂದಿದ್ದುದು ಕೇವಲ ಅರಬಿ ಸಮುದ್ರದ ಮೂಲಕ ನಡೆಯುವ ವ್ಯಾಪಾರದ ಕಾರಣದಿಂದ ಮಾತ್ರವಲ್ಲ. ಜನರ ಸಕ್ರಿಯ ವಿನಿಮಯ ಕೂಡಾ ಈ ಕಾಲದಲ್ಲಿ ಇತ್ತು. ಸೂಫಿ ಮನ್ಸೂರ್ ಹಲ್ಲಾಜ್ ಕೂಡಾ ಭಾರತಕ್ಕೆ, ಅದರಲ್ಲೂ ಪ್ರಮುಖವಾಗಿ ಸಿಂಧ್ ಪ್ರದೇಶಕ್ಕೆ ಭೇಟಿ ನೀಡಿದ ಗಣ್ಯಪುರುಷರಲ್ಲೊಬ್ಬರು ಎಂಬ ಐತಿಹಾಸಿಕ ದಾಖಲೆಯನ್ನು ನಾವು ಇಲ್ಲಿ ಉಲ್ಲೇಖಿಸಬಹುದು.

ಹತ್ತನೆ ಶತಮಾನದ ಖ್ಯಾತ ಇತಿಹಾಸಕಾರ ಹಾಗೂ ಭೂಗೋಳ ಶಾಸ್ತ್ರಜ್ಞ ಅಬುಲ್ ಹಸನ್ ಅಲ್ ಮಸೂದಿ ತಮ್ಮ ‘‘ಮೆಡೋಸ್ ಆಫ್ ಗೋಲ್ಡ್ ಆ್ಯಂಡ್ ಮೈನ್ಸ್ ಆಫ್ ಜೆಮ್ಸ್ಸ್’’ ಕೃತಿಯಲ್ಲಿ ಹಿಂದೂ ಮಹಾಸಾಗರದ ಪ್ರಮುಖ ಬಂದರು ನಗರ ಗುಜತಾನ್‌ನ ಕ್ಯಾಂಬೆ ಪಟ್ಟಣದ ಬಗ್ಗೆ ಉಲ್ಲೇಖಿಸಿದ್ದಾರೆ. ತಮ್ಮ ಹುಟ್ಟೂರು ಬಾಗ್ದಾದ್‌ನಲ್ಲಿ ಈ ಪಟ್ಟಣ ಚಿರಪರಿಚಿತ ಎಂದು ವಿವರಿಸಿದ್ದಾರೆ.

ಇದಕ್ಕೆ ನಿರ್ದಿಷ್ಟ ಕಾರಣವನ್ನೂ ನೀಡುತ್ತಾರೆ. ಈ ದಟ್ಟಣೆಯ ಬಂದರು ನಗರಕ್ಕೆ ತಾನು ಭೇಟಿ ನೀಡಿದ್ದು, ಅಬ್ಬಾಸಿದ್ ರಾಜಧಾನಿಯ ಜನರಿಗೆ ಚಿರಪರಿಚಿತವಾಗಲು ಕಾರಣವೆಂದರೆ, ಅಲ್ಲಿ ತಯಾರಾಗುವ ಹಾಗೂ ರಫ್ತಾಗುವ ಉತ್ತಮ ಗುಣಮಟ್ಟದ ಚಪ್ಪಲಿಗಳು. ಬಾಗ್ದಾದ್‌ನಲ್ಲಿ ಗುಜರಾತಿ ಚಪ್ಪಲಿ!!? ಹೌದು. ಇದು ಕುತೂಹಲಕರ ಮಾತ್ರವಲ್ಲದೇ, ಐತಿಹಾಸಿಕವಾಗಿಯೂ ಮಹತ್ವದ್ದು. ಇದು ಮಧ್ಯಕಾಲೀನ ಭಾರತದ ಇತಿಹಾಸದ ತುಣುಕುಗಳ ಮೇಲೆ ಬೆಳಕು ಚೆಲ್ಲುವಂಥದ್ದು. ಅಂದರೆ ಮುಹಮ್ಮದ್ ಬಿನ್ ಕಾಸಿಂ ಸಿಂಧ್ ಪ್ರದೇಶಕ್ಕೆ ಪ್ರವೇಶಿಸಿದ 200 ವರ್ಷಗಳ ಬಳಿಕದ ಸ್ಥಿತಿಗತಿಯನ್ನು ತಿಳಿಯಲು ಇದು ಸಹಕಾರಿ.

ಚಾಂಬೆ ಪಟ್ಟಣ ಸಾಗರ ವ್ಯಾಪಾರದ ಗೌಜು ಗದ್ದಲದ ಪಟ್ಟಣ. 13ನೆ ಶತಮಾನದ ಕೊನೆಯಲ್ಲಿ ಮಾರ್ಕೊ ಪೋಲೊ ಕೂಡಾ ಈ ಪಟ್ಟಣವನ್ನು ಇದೇ ರೀತಿ ಗುರುತಿಸಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಅರೇಬಿಯನ್ ಜಗತ್ತು ಭಾರತದ ಜತೆ ಸಂಪರ್ಕ ಹೊಂದಿದ್ದುದು ಕೇವಲ ಅರಬಿ ಸಮುದ್ರದ ಮೂಲಕ ನಡೆಯುವ ವ್ಯಾಪಾರದ ಕಾರಣದಿಂದ ಮಾತ್ರವಲ್ಲ. ಜನರ ಸಕ್ರಿಯ ವಿನಿಮಯ ಕೂಡಾ ಈ ಕಾಲದಲ್ಲಿ ಇತ್ತು. ಸೂಫಿ ಮನ್ಸೂರ್ ಹಲ್ಲಾಜ್ ಕೂಡಾ ಭಾರತಕ್ಕೆ, ಅದರಲ್ಲೂ ಪ್ರಮುಖವಾಗಿ ಸಿಂಧ್ ಪ್ರದೇಶಕ್ಕೆ ಭೇಟಿ ನೀಡಿದ ಗಣ್ಯಪುರುಷರಲ್ಲೊಬ್ಬರು ಎಂಬ ಐತಿಹಾಸಿಕ ದಾಖಲೆಯನ್ನು ನಾವು ಇಲ್ಲಿ ಉಲ್ಲೇಖಿಸಬಹುದು. ಮಸೂದಿಯವರ ಈ ಉಲ್ಲೇಖ ಮತ್ತೂ ಪ್ರಮುಖ ಏಕೆಂದರೆ, ಚರ್ಮೋದ್ಯಮ ಇರಾಕ್ ಹಾಗೂ ಗುಜರಾತ್ ನಡುವೆ ದೊಡ್ಡ ರಫ್ತು ಉದ್ಯಮವಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟಸಾಧ್ಯ.

ಈ ಜೀವ ಭೌಗೋಳಿಕ ಅಧ್ಯಯನದಲ್ಲಿ ಮಸೂದಿ ಸ್ವತಃ ಭೇಟಿ ನೀಡಿ, ಜನರಿಂದ ಮಾಹಿತಿ ಸಂಗ್ರಹಿಸಿ ರಚಿಸಿದ ಕೃತಿಯ ಆಧಾರದಲ್ಲಿ ಮನನ್ ಅಹ್ಮದ್ ಆಸಿಫ್ ಅವರು ‘‘ದ ಚಚನಮಾ’’ ಎಂಬ ಕೃತಿಯಲ್ಲಿ ಇನ್ನಷ್ಟು ವಿವರ ನೀಡಿದ್ದಾರೆ. 13ನೆ ಶತಮಾನದಲ್ಲಿ ರಚನೆಯಾದ ಪರ್ಶಿಯನ್ ಕೃತಿಯಲ್ಲಿ, ಅಲಿಕೂಫಿ ಅಧಿಕಾರಯುಕ್ತ ವಿವರಣೆ ನೀಡಿದ್ದಾರೆ. ಬಳಿಕದ ಬಹುತೇಕ ಎಲ್ಲ ಭಾರತೀಯ ಇತಿಹಾಸಗಳು ಜಾಗತಿಕ ಇತಿಹಾಸದಿಂದ ಎರವಲು ಪಡೆದದ್ದು. ಇದು ಭಾರತೀಯ ಇತಿಹಾಸವನ್ನು ಸಾಮ್ರಾಜ್ಯಶಾಹಿ ದೃಷ್ಟಿಕೋನದಿಂದ ನೋಡುವಂಥದ್ದು. ಇದರಲ್ಲಿ ಯೂರೋಪಿಯನ್ ಕಾಲಘಟ್ಟದ ನೆರಳು ದಟ್ಟವಾಗಿ ಕಾಣುತ್ತದೆ.

ಚಚನಮಾದಲ್ಲಿ ಕಂಡುಬರುವ ಅಂಶಗಳು ಕೇವಲ ಗ್ರಾಂಥಿಕ ಇತಿಹಾಸವಾಗಿರದೇ, ರಾಜಕೀಯ ಹಾಗೂ ಸೈದ್ಧಾಂತಿಕ ಇತಿಹಾಸವೂ ಆಗಿದೆ. ಇಲ್ಲಿ ಘಟನಾವಳಿಗಳನ್ನು ಪ್ರಮಾಣೀಕರಿಸಲಾಗಿದೆ. ಕೂಫಿಯವರ ಈ ಕೆಲಸ ಆರಂಭವಾದ 800 ವರ್ಷಗಳ ಬಳಿಕ, ಈ ಅಂಶಗಳು ವಿಭಿನ್ನ ಮಜಲುಗಳನ್ನು ದಾಟಿವೆ. ಎಲ್ಲ ಬಗೆಯ ಚಿಂತಕರು, ಸಿದ್ಧಾಂತಕಾರರು ಹಾಗೂ ಈಸ್ಟ್ ಇಂಡಿಯಾ ಕಂಪೆನಿಯ ಸಾಮ್ರಾಜ್ಯಶಾಹಿ ಸೇವಕರು ಹೀಗೆ ಹಲವು ಸ್ತರಗಳಲ್ಲಿ ತಮಗೆ ಸರಿ ಎನಿಸಿದ್ದನ್ನು ಸೇರಿಸಲಾಗಿದೆ. ಆದರೆ ಇಂಥ ಅಂದಾಜಿಸುವ ಮನೋಭಾವದ ಬುಡಕ್ಕೇ ಏಟು ನೀಡಿ ಆಸಿಪ್ ಚಚನಮಾ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಇದು ಸದಾ ಸ್ಮರಣೀಯ ಪ್ರಯತ್ನವಾಗಿದ್ದು, ಆಸಿಫ್ ಅವರ ಸಂಶೋಧನಾ ಕೆಚ್ಚು ಹಾಗೂ ಇತಿಹಾಸವನ್ನು ಕೆದಕುವ ಪ್ರಯತ್ನ ಮಾಡಿದ್ದಾರೆ.

ನೋಡುವ ಮಾರ್ಗ

‘‘ದ ಚಚನಮಾ’’ ಕೃತಿಗೆ ಈ ಹಿಂದೆಯೂ ಸಿಂಧ್ ಪ್ರಾಂತ್ಯದ ಹಲವು ಮಂದಿ ಚಿಂತಕರು ಗಮನ ಹರಿಸಿದ್ದಾರೆ. 20ನೆ ಶತಮಾನದ ಆರಂಭದಲ್ಲಿ, ಮಿರ್ಜಾ ಕಲೀಚ್ ಬೇಗ್ ಫ್ರೆಡುನ್‌ಬೇಗ್ ಎಂಬ ಬ್ರಿಟಿಷ್ ಸಾಮ್ರಾಜ್ಯದ ಉದ್ಯೋಗಿ, ಇದನ್ನು ಪರ್ಶಿಯನ್‌ನಿಂದ ಇಂಗ್ಲಿಷ್‌ಗೆ ಅನುವಾದಿಸಿದರು. ವಿಚಿತ್ರವೆಂದರೆ ಇದನ್ನು ಅಂದಿನ ಸಿಂಧ್ ಕಮಿಷನರ್ ಆಗಿದ್ದ ಹೆನ್ರಿ ಇವಾನ್ ಮರ್ಚಿಸನ್ ಜೇಮ್ಸ್ ಅವರಿಗೆ ಸಮರ್ಪಿಸಿದರು. ಆ ಬಳಿಕ ಧಾರ್ಮಿಕ ಹಿನ್ನೆಲೆಯಲ್ಲಿ, ಮಬಿ ಬಕ್ಷ್ ಖಾನ್ ಬಲೂಚ್ ಈ ಕೃತಿಯ ವಿಮರ್ಶಾತ್ಮಕ ಕೃತಿಯನ್ನು 1083ರಲ್ಲಿ ಹೊರತಂದರು.

ಆದರೆ ಆಸಿಫ್ ಅವರ ದೃಷ್ಟಿಗೆ ಕಂಡುಬಂದ ಹಲವು ಅಂಶಗಳು ಈ ಇಬ್ಬರೂ ಪ್ರಾಜ್ಞರ ಕಣ್ಣಿಗೆ ಗೋಚರಿಸಲಿಲ್ಲ. ಅಂತೆಯೇ ಅಪೂರ್ವ ಕೃತಿ ಕೆಲ ವೈಚಿತ್ರ್ಯಗಳನ್ನೂ ಕಾಣಬಹುದು. ಹಿರಿಯ ಸಂಶೋಧಕರ ಲೋಪಕ್ಕೆ ಪ್ರಮುಖ ಕಾರಣವೆಂದರೆ, ಅವರು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಯಾಗಿದ್ದುದು ಹಾಗೂ ಅವರು ನೋಡುವ ಮಾರ್ಗ ಸಾಂಪ್ರದಾಯಿಕ ವಿಧಾನಕ್ಕೇ ಸೀಮಿತವಾಗಿದದ್ದು. ‘‘ದ ಚಚನಮಾ’’ ಕೃತಿಯನ್ನು 1768ರಲ್ಲೇ ಅಂದಿನ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ ಅಲೆಕ್ಸಾಂಡರ್ ಡೋವ್ ಲಂಡನ್‌ನಲ್ಲಿ ‘‘ಹಿಸ್ಟರಿ ಆಫ್ ಹಿಂದೂಸ್ತಾನ್’’ ಕೃತಿರಚನೆ ಸಂದರ್ಭದಲ್ಲೇ ಪರಿಗಣಿಸಿದ್ದರು.

ಆದರೆ ಆಸಿಫ್ ಏನು ನೋಡಲು ಸಾಧ್ಯವಾಯಿತು? ಈ ವಿಶೇಷ ದೃಷ್ಟಿಕೋನ ಅವರಿಗೆ ಎಲ್ಲಿಂದ ಬಂತು? ಈ ಪ್ರಮುಖ ಪ್ರಶ್ನೆಗೆ ಬರುವ ಮುನ್ನ, ಹಿನ್ನೆಲೆಯಲ್ಲಿ ಈ ಕೆಳಗಿನ ಕೆಲ ಅಂಶಗಳನ್ನು ವಿವರಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದ್ದೆಂದರೆ ಅವರ ಕೃತಿಯಲ್ಲಿ ಕಂಡುಬರುವ ಬಹುತ್ವವನ್ನು ಗುರುತಿಸುವ ಕ್ರಮ.

ಈ ಇತಿಹಾಸ ಕೃತಿ ಅತ್ಯಂತ ಸರಳ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಇದು ಲೇಖಕನ ಆಪ್ಯಾಯಮಾನವಾದ ಜೀವನಚರಿತ್ರೆಯ ಹೊಳಹುಗಳನ್ನು ನೀಡುತ್ತಾ ಹೋಗಿರುತ್ತದೆ. ಆ ಕೃತಿ ನಿರ್ಮಾಣವಾದ ಪ್ರದೇಶದಲ್ಲಿ ಸಂಚರಿಸಿದ ವಿವರಗಳನ್ನೂ ನೀಡುತ್ತದೆ. ಚೋಲಿಸ್ತಾನ್ ಮರುಭೂಮಿಯ ಬಗೆಗಿನ ಚಿಂತನೆಗಳನ್ನು, ಕಳೆದುಹೋದ ದಿನಗಳ ಆ ಪ್ರದೇಶದ ಮೆಲುಕುಗಳನ್ನು, ತಮ್ಮ ಸ್ನೇಹಿತರು ಹಾಗೂ ಇತರ ಜತೆಗಿನ ಸಂವಾದ ವಿವರಗಳನ್ನು ಕೂಡಾ ಕಟ್ಟಿಕೊಡುತ್ತದೆ. ಅಂದರೆ ಇದು ಒಂದು ಬಗೆಯ ವ್ಯಕ್ತಿಚಿತ್ರ?

ಇದಕ್ಕೆ ಉತ್ತರ ಸುಲಭವಲ್ಲ. ಏಕೆಂದರೆ ಇಂಥ ಒಂದು ಇತಿಹಾಸದ ಮರುನಿರ್ಮಾಣದ ಕೃತಿಯಲ್ಲಿ, ಸೃಜನಶೀಲತೆ ನಿಜವಾಗಿಯೂ, ಸಾದತ್ ಹಸನ್ ಮಾಂಟೊ ಅವರ ‘‘ತೋಬಾ ತೆಕ್ ಸಿಂಗ್’’ ಕೃತಿಯನ್ನು ನೆನಪಿಸುತ್ತದೆ.

ಇಲ್ಲಿ ಆಸಿಫ್ ಹೊರಗಿನ ಇತಿಹಾಸಕಾರರು ಹಾಗೂ ಆಂತರಿಕ ಸತ್ಯದ ನಡುವಿನ ವ್ಯತ್ಯಾಸವನ್ನು ಎಳೆ ಎಳೆಯಾಗಿ ವಿವರಿಸುತ್ತಾ ಹೋಗಿದ್ದಾರೆ. ಉಚ್ ಪ್ರದೇಶದ ಸಾಮಾನ್ಯ ನಿವಾಸಿಯಾಗಿ, ಮುಖ್ಯವಾಹಿನಿಯ ಮುಕ್ತ ಸಮಾಜದ ಚೌಕಟ್ಟಿನಲ್ಲಿ ನಿಂತು ಈ ಕಾರ್ಯ ಮಾಡಿದ್ದಾರೆ. ಹೀಗೆ ಪರ್ಯಾಯ ಜಗತ್ತನ್ನು ಸೃಷ್ಟಿಸುವಲ್ಲಿ, ಸಾಮ್ರಾಜ್ಯ ಶಾಹಿ ನಿರಂತರತೆ ಕಡಿಯುವಲ್ಲಿ ಸಾಮಾಜಿಕ ವ್ಯತ್ಯಯದ ಕಟ್ಟುಪಾಡಿಗೆ ಸಿಕ್ಕಿಹಾಕಿಕೊಂಡಿಲ್ಲವೇ?

ಇಂಥ ಕಟ್ಟುಪಾಡುಗಳು, ಕೃತಿಯ ಬಹುಮುಖಿ ದೃಷ್ಟಿಕೋನದಿಂದ, ಇದರ ಪ್ರಮುಖ ಅಂಶಗಳಾಗಿ ಹೊರಹೊಮ್ಮಿವೆ. ಇತರ ಹಲವು ಅಂಶಗಳ ಜತೆಗೆ ವಿಶಿಷ್ಟ ಅನುಸರಣೆ ಕ್ರಮದ ಚೌಕಟ್ಟನ್ನು ನಿರ್ಮಿಸಿಕೊಟ್ಟಿದೆ. ಈಗಾಗಲೇ ನಿರ್ಮಿತವಾದ ಇತಿಹಾಸ, ತುಲನಾತ್ಮಕವಾಗಿ ನಂಬುವಂಥ ಹಾಗೂ ಅವರು ಕರೆಯುವಂಥ ಆಂತರಿಕ ಸತ್ಯ ಹೀಗೆ ಮೂರು ಧ್ರುವಗಳ ನಡುವೆ ಆಸಿಫ್ ಓಲಾಡುತ್ತಾರೆ. ಇದು ನೈಜವಾಗಿ ಜನರ ಹೃದಯದಲ್ಲಿ ಇರುವಂಥದ್ದು ಅಥವಾ ಇತಿಹಾಸಕಾರನ ಕಲ್ಪನೆಯಲ್ಲಿ ಪುನರ್ ನಿರ್ಮಾಣವಾದದ್ದು. ಲೇಖಕ ಇಲ್ಲಿ ತಿರುಚಿದ ಹಾಗೂ ಹುದುಗಿದ ಮೂಲಗಳ ನಡುವೆ, ವಾಸ್ತವಾಂಶ ಹಾಗೂ ಕಾಲ್ಪನಿಕ ಅಂಶಗಳ ನಡುವೆ ವಿವರಣೆ ನೀಡುತ್ತಾ ಹೋಗುತ್ತಾರೆ.

ಹಲವು ವಿಶ್ಲೇಷಣೆಗಳು

‘‘ದ ಚಚನಮಾ’’ದ ದೀರ್ಘಕಾಲಿಕ ವೃತ್ತಿ ಖಂಡಿತವಾಗಿಯೂ ಕುತೂಹಲಕರ ಅಂಶಗಳಿಂದ ಕೂಡಿದೆ. ಇದು ಕೇವಲ ಗ್ರಾಂಥಿಕ ಇತಿಹಾಸವಾಗಿರದೇ ರಾಜಕೀಯ ಹಾಗೂ ಸೈದ್ಧಾಂತಿಕ ಇತಿಹಾಸವೂ ಹೌದು.

ಸಹಜ ಊಹೆಯಂತೆ ಆಸಿಫ್ ಸಾಮ್ರಾಜ್ಯಶಾಹಿ ವಿವರಣೆಗಳನ್ನು ತಳ್ಳಿಹಾಕುತ್ತಾರೆ. ಇದಕ್ಕೆ ಸಾಕಷ್ಟು ಪುರಾವೆಯ ಹಿನ್ನೆಲೆಯಲ್ಲೂ ನೀಡುತ್ತಾರೆ. ಬಳಿಕ ಇತಿಹಾಸದ ಬಗ್ಗೆ ಬರೆಯುವಾಗ, ಪ್ರಾಥಮಿಕ ಮೂಲಗಳನ್ನು ಪುನರ್ ಸಂಘಟಿಸಿ, ಭದ್ರ ನೆಲೆಗಟ್ಟನ್ನು ಒದಗಿಸಿದ್ದಾರೆ. ಈ ಕಾರಣಕ್ಕಾಗಿಯೇ ಇದು ವಿಶಿಷ್ಟ ಎನಿಸುತ್ತದೆ. ಉದಾಹರಣೆಗೆ ಮಸೂದಿಯವರ ಗುಜರಾತಿ ಚಪ್ಪಲಿ ಕುರಿತ ಉಲ್ಲೇಖವನ್ನು ಇವರು ನೀಡುತ್ತಾರೆ. ಅಲ್ಲಿ ಮಸೂದಿ ಈ ಕೃತಿಗೆ ಅರಬ್ಬಿ ಸಮುದ್ರದ ತಂಪು ಹಾಗೂ ಸಹಜ ಚಿತ್ರಣ ನೀಡುತ್ತಾರೆ. ಅದಕ್ಕಿಂತಲೂ ಹಿಂದೆ ಅಂದರೆ ಒಂಬತ್ತನೆ ಶತಮಾನದದಷ್ಟು ಹಿಂದಕ್ಕೆ ಹೋಗುತ್ತಾರೆ. ಅಂತಿಮವಾಗಿ ರಹಸ್ಯಗಳು, ಉಚ್ ಪ್ರದೇಶದ ನಿವಾಸಿಗಳ ಜತೆಗಿನ ಸಂವಾದದ ಮೂಲಕ ಅನಾವರಣಗೊಳ್ಳುತ್ತಾ ಹೋಗುತ್ತವೆ. ಇದಕ್ಕೆ ಐತಿಹಾಸಿಕ ದೃಷ್ಟಿಕೋನದ ಸ್ಪರ್ಶವೂ ಇದೆ.

ಆದರೆ ಆಸಿಫ್ ಹಿಂದಿನ ಇತಿಹಾಸಕಾರರಿಗಿಂತ ಭಿನ್ನವಾಗಿ ಏನು ಕಂಡುಕೊಳ್ಳಲು ಸಾಧ್ಯವಾಗಿದೆ? ಎನ್ನುವುದು ಅಸ್ಪಷ್ಟವಾಗಿಯೇ ಉಳಿದಿದೆ. ಇದಕ್ಕೆ ಉತ್ತರ ಕಂಡುಹಿಡಿಯಬೇಕಾದರೆ, 1226ರ ಅವಧಿಯಲ್ಲಿ ರಚನೆಯಾದ ‘‘ದ ಚಚನಮಾ’’ ಕೃತಿಗೆ ಮರಳಬೇಕು. ಕ್ವಬಾಚಾ ರಾಜನ ಆಸ್ಥಾನದ ಆಶ್ರಯದಲ್ಲಿ ರಚನೆಯಾದ ಈ ಕೃತಿಯ ಹಿನ್ನೆಲೆಯಲ್ಲೂ ಆಸಿಫ್ ಹಿಡಿದಿಟ್ಟಿದ್ದಾರೆ.

ಈ ಹದಿಮೂರನೆ ಶತಮಾನದ ಪರ್ಶಿಯನ್ ಕೃತಿ ಸಾಮ್ರಾಜ್ಯಶಾಹಿ ಚಿಂತನೆಯ ಪ್ರಕಾರ, ಮುಸ್ಲಿಂ ಮೂಲದ ಇತಿಹಾಸವಾಗಿದೆ. ಆದರೆ ನಿರ್ದಿಷ್ಟವಾಗಿ ಮಧ್ಯಕಾಲೀನ ಇತಿಹಾಸವನ್ನು ಅವಲೋಕಿಸಿದಾಗ ತಿಳಿದುಬರುವ ಆಂಶವೆಂದರೆ ಹೇಗೆ ಮೂಲ ವಿವರಗಳು ಇತಿಹಾಸದ ಮಾರ್ಗವನ್ನು ಹೇಗೆ ಮಿತಿಗೊಳಿಸಿವೆ ಎನ್ನುವುದು. ನೂರಾರು ವರ್ಷಗಳ ವರೆಗೆ ‘ದ ಚಚನಮಾ’ ಕೃತಿಯನ್ನು 8ನೆ ಶತಮಾನದಲ್ಲಿ ಅರೇಬಿಕ್ ಭಾಷೆಯಲ್ಲಿ ರಚಿತವಾದ ಕೃತಿಯ ಭಾಷಾಂತರ ಎಂದೇ ನಂಬಲಾಗಿತ್ತು

‘ದ ಚಚನಮಾ’ ಕೃತಿಯನ್ನು ಹೇಗೆ ದೀರ್ಘಕಾಲದಿಂದಲೂ, ಇತಿಹಾಸದ ವಿಶ್ಲೇಷಣೆಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನುವುದನ್ನು ಆಸಿಫ್ ವಿವರಿಸಿದ್ದಾರೆ:

‘‘ಇಸ್ಲಾಂ ಮೂಲತಃ ಅರಬ್ಬಿಯನ್‌ರದ್ದು ಹಾಗೂ ಭೌಗೋಳಿಕವಾಗಿ ಭಾರತಕ್ಕೆ ವಿದೇಶಿ ಧರ್ಮ. ಈ ಹೊರಗಿನ ಜಗತ್ತಿನ ಈ ಧರ್ಮ ಹೊರಗಿನವರನ್ನೂ ಅನುಯಾಯಿಗಳನ್ನಾಗಿ ಮಾಡಿಕೊಂಡಿತು. ಈ ಧರ್ಮದ ಮೂಲದ ಬಗ್ಗೆಯೂ ವಿಭಿನ್ನ ವಿವರಣೆಗಳಿವೆ. ಒಂದು ವಿವರಣೆಯ ಪ್ರಕಾರ, ಅರೇಬಿಯಾದಿಂದ ಮುಹಮ್ಮದ್ ಬಿನ್ ಕಾಸಿಂ ಮಾರ್ಗದರ್ಶನದಲ್ಲಿ ಪ್ರಚಾರಕರನ್ನು ಸಿಂಧ್ ಪ್ರಾಂತಕ್ಕೆ ಕಳುಹಿಸಲಾಗಿತ್ತು. ಇನ್ನೊಂದು ವಿವರಣೆಯ ಪ್ರಕಾರ, ಹನ್ನೊಂದನೆ ಶತಮಾನದಲ್ಲಿ, ಘಜ್ನಿಯಿಂದ ಗುಜರಾತ್‌ಗೆ ಇಸ್ಲಾಂ ಪ್ರಚಾರಕರು ಆಗಮಿಸಿದ್ದರು. ಜಹಿರುದ್ದೀನ್ ಬಾಬರ್ ಅವರ ಪ್ರಚಾರಕರು ಕಾಬೂಲ್‌ನಿಂದ 16ನೆ ಶತಮಾನದಲ್ಲಿ ದಿಲ್ಲಿಗೆ ಆಗಮಿಸಿದ್ದರು ಎಂದು ಇನ್ನೊಂದು ವಿವರಣೆ ಇದೆ. ಈ ಬಹು ಅಂಶಗಳು ಇಸ್ಲಾಮಿನ ವಿದೇಶೀತನವನ್ನು ಪದೇ ಪದೇ ನಿರೂಪಿಸುವಂಥವು. ಇದಕ್ಕೆ ತದ್ವಿರುದ್ಧವಾಗಿ, ಈ ವೈವಿಧ್ಯಮಯ ವಿವರಣೆಗಳು ಭಾರತದಲ್ಲಿ ಈ ಧರ್ಮ ಇತ್ತು ಎನ್ನುವುದನ್ನು ನಿರೂಪಿಸುತ್ತದೆ’’.

ಇವೆಲ್ಲಕ್ಕೂ ಚಚನಮಾ ಪ್ರಾಥಮಿಕ ಪುರಾವೆಯಾಗಿದೆ. ಇದೀಗ ಈ ಸಾಮ್ರಾಜ್ಯಶಾಹಿ ಬಣ್ಣನೆಯನ್ನು ಈ ಕೃತಿ ಅಲ್ಲಗಳೆದಿದ್ದು, ಇದು ಈಸ್ಟ್ ಇಂಡಿಯಾ ಕಂಪೆನಿಯ ಸಾಮ್ರಾಜ್ಯಶಾಹಿ ಯೋಜನೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಹೀಗೆ ಮಾಡುವಲ್ಲಿ ಲೇಖಕರು ಕೇಂದ್ರ ಏಷ್ಯಾ, ಅಫ್ಘಾನಿಸ್ತಾನ ಹಾಗೂ ಇರಾನ್ ಸೇರಿದಂತೆ ಇಸ್ಲಾಮಿಕ್ ಜಗತ್ತು ಕೂಫಿ ಕಾಲದಲ್ಲೇ ಭಾರತದ ಜತೆ ಸಂಬಂಧ ಹೊಂದಿತ್ತು ಎನ್ನುವುದನ್ನು ಒಂದೆಡೆ ನಿರೂಪಿಸಿದರೆ, ಇನ್ನೊಂದೆಡೆ, ಸಮರ್‌ಕಂದ್ ಬುಖಾರ, ಘಜ್ನಿ, ಘರ್, ಕಾಬೂಲ್, ಮುಲ್ತಾನ್, ಲಾಹೋರ್, ಉಚ್, ಮೆನ್ಸುರಾ, ಮಕರಾತ್, ದಿಯೂ ಹಾಗೂ ಚಾಂಬೆ ನಗರಗಳ ಜತೆ ಸಂಪರ್ಕ ಹೊಂದಿದ್ದನ್ನು ಕೂಡಾ ನಿರೂಪಿಸಿದೆ. ಇದು ಚಚನಮಾಗೆ ಚೌಕಟ್ಟು ಒದಗಿಸಿಕೊಟ್ಟ ಅಂಶ ಎನ್ನುವುದನ್ನೂ ಸ್ಪಷ್ಟಪಡಿಸಿದೆ. ಉದಾಹರಣೆಗೆ ಇತಿಹಾಸಗಾರ ಮುಹಮ್ಮದ್ ಅವಾಫಿ ಹಾಗೂ ಮಿನಾಝ್ ಜುಜಿಯಾನಿ ಅವರನ್ನೂ ಕಬಾಚಾ ಸಾಮ್ರಾಜ್ಯ ನಿಯೋಜಿಸಿಕೊಂಡಿತ್ತು.

ಆಗ ಸಂಸ್ಕೃತ ಹಾಗೂ ಇಂಡಿಕ್ ಅಂಶಗಳು ಕೂಡಾ ಚಚನಮಾ ರಚನೆಗೆ ಅಂಶಗಳನ್ನು ಒದಗಿಸಿದ್ದವು ಎಂದು ಆಸಿಫ್ ಪ್ರತಿಪಾದಿಸಿದ್ದಾರೆ.

ಅಂತಿಮವಾಗಿ ಇನ್ನೊಂದು ಗಮನಾರ್ಹ ಅಂಶವೆಂದರೆ, ಚಚನಮಾ ಭಾಷಾಂತರಿತ ಕೃತಿಯಲ್ಲ ಎನ್ನುವುದನ್ನು ಆಸಿಫ್ ಸ್ಪಷ್ಟಪಡಿಸಿದ್ದಾರೆ. ಲೇಖಕರೇ ಹಾಗೆ ಹೇಳಿಕೊಂಡಿದ್ದರೂ, ಅದು ಆ ಗೌರವ ಪಡೆಯುವ ಸಲುವಾಗಿ ಮಾಡಿಕೊಂಡ ಘೋಷಣೆ. ಚಚನಮಾ ಈ ಉಪಖಂಡದಲ್ಲಿ ಇಸ್ಲಾಮಿನ ಮೂಲವನ್ನು ವಿವರಿಸುವ ಕೃತಿಯಲ್ಲ. ವಾಸ್ತವವಾಗಿ ಇದು ರಾಜಕೀಯ ಸಿದ್ಧಾಂತದ ಕೃತಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆಸಿಫ್ ಅವರ ಈ ಘೋಷಣೆಯ ಪರಿಣಾಮಗಳು ಇಡೀ ಇತಿಹಾಸ ವಲಯವನ್ನೇ ತಲ್ಲಣಗೊಳಿಸುವಂಥದ್ದು. ಹಲವು ಶತಮಾನಗಳ ಕಾಲ ಪ್ರತಿಪಾದಿಸುತ್ತಾ ಬಂದ ವಿವರಣೆಗೆ ಸವಾಲು ಒಡ್ಡುವಂಥದ್ದು. ಇಂಥ ವಿವರಣೆಯ ಉದ್ದೇಶವೇ ವಿನಾಶಕಾರಿ. ಸಾಮ್ರಾಜ್ಯಶಾಹಿ ಜ್ಞಾನಮೀಮಾಂಸೆಗೆ ಅನುಗುಣವಾದದ್ದು. ಇದು ಆಂತರಿಕ ಸತ್ಯ ಎನ್ನುವುದು ಅವರ ಸ್ಪಷ್ಟ ನುಡಿ. ಈ ನಿರ್ಧಾರ ಉಚ್ ಜನರ ಹೃದಯದಲ್ಲಿ ಅಂತರ್ಗತವಾಗಿದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.ಇದೀಗ ಕೆಲ ನಿಷ್ಠುರ ಅಂಶಗಳ ಬಗ್ಗೆ ಗಮನ ಹರಿಸೋಣ. ಇದರ ಸಂಪಾದನೆ ಇನ್ನೂ ಬಿಗಿಯಾಗಿರಬೇಕಿತ್ತು. ಕೆಲ ಅಪಸ್ಟ್ರೋಪ್ ಹಾಗೂ ರಿವರ್ಸ್ ಅಪಸ್ಟ್ರೋಪ್ ಬಳಕೆ ಅಪಾರ್ಥಕ್ಕೆ ಎಡೆಮಾಡಿಕೊಡುವಂತಿದೆ. ಕೆಲವೊಮ್ಮೆ ಈ ಲಕ್ಷಣಗಳೇ ಮಾಯವಾಗಿವೆ.ಪ್ರಸಿದ್ಧ ಹೆಸರು ಮಿಸ್‌ಕವಯ್ಯ ಎನ್ನುವುದು ಮಿಸಕಾವ ಎಂದಾಗಿದೆ. ಪರ್ಶಿಯನ್, ಉರ್ದು, ಅರೇಬಿಕ್ ಶಬ್ದವಾದ ರೂಪಕ ಎನ್ನುವುದು ರುಪ್ಖಾ ಎಂದಾಗಿದೆ. ಅನುಕ್ರಮಣಿಕೆಯಲ್ಲೂ ಮುಹಮ್ಮದ್ ಹಬೀಬ್ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಮಲಿಕ್ ಎನ್ನುವುದು ಮುಲ್ಕ್ ಎಂದಾಗಿದೆ. ಜತೆಗೆ ಮುಹಮ್ಮದ್ ಬಿನ್ ಖಾಸಿಂ ಹೆಸರನ್ನು ಕಾಸಿಂ ಎಂದು ಇಂಥ ಕೃತಿಯಲ್ಲಿ ಬಿಂಬಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಚ್ಚರಿಪಡುವಂತಾಗಿದೆ.

Writer - ಸಯ್ಯದ್ ನುಅ್ಮಾನುಲ್ ಹಕ್

contributor

Editor - ಸಯ್ಯದ್ ನುಅ್ಮಾನುಲ್ ಹಕ್

contributor

Similar News