ಕತರ್ ಏರ್ ವೇಸ್ ವಿಮಾನ ತುರ್ತು ಭೂಸ್ಪರ್ಶ: ಪ್ರಯಾಣಿಕರಿಗೆ ಗಾಯ

Update: 2016-12-05 05:30 GMT

ಕುವೈಟ್‌, ಡಿ.5: ವಾಷಿಂಗ್ಟನ್ ನಿಂದ ದೋಹಾಗೆ  ತೆರಳುತ್ತಿದ್ದ ಕತರ್ ಏರ್ ವೇಸ್‌  ವಿಮಾನ  ರವಿವಾರ ಬಿರುಗಾಳಿಗೆ ಸಿಲುಕಿ  ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ವಿಮಾನವು  ಅಝೋರ್ಸ್ ದ್ವೀಪದ  ಪೋರ್ಚುಗೀಸ್ ಮಿಲಿಟರಿ  ವಾಯುನೆಲೆಯಲ್ಲಿ  ತುರ್ತು ಭೂಸ್ಪರ್ಶ  ಮಾಡಿದೆ.

 ವಾಷಿಂಗ್ಟನ್ ನಿಂದ ದೋಹಾಕ್ಕೆ ತೆರಳುತ್ತಿದ್ದ  ಬೋಯಿಂಗ್ 777 ವಿಮಾನ  ಅಝೋರ್ಸ್ ನಲ್ಲಿ  ಬಿರುಗಾಳಿಯ ಹೊಡೆತಕ್ಕೆ ಸಿಲುಕಿತು.  ವಿಮಾನಕ್ಕೆ ಮುಂದೆ ಸಂಚರಿಸಲು ಪ್ರತಿಕೂಲ ವಾತಾವರಣ ಎದುರಾದ ಹಿನ್ನೆಲೆಯಲ್ಲಿ  ಪೋರ್ಚುಗಲ್ ನ  ಲಾಜೆಸ್‌ ವಾಯುನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿತು.

 ಉತ್ತರ ಅಟ್ಲಾಂಟಿಕ್ ನ ಪೋರ್ಚುಗಲ್ ನ  ಅಝೋರ್ಸ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿತ್ತು. ಪ್ರಕ್ಷುಬ್ಧ ವಾತಾವರಣದಿಂದಾಗಿ  ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹೃದಯ ಮತ್ತು ಉಸಿರಾಟದ ಸಮಸ್ಯೆ ಎದುರಿಸಿದರು. ಮೂವರು ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಎಲ್ಲ ಪ್ರಯಾಣಿಕರಿಗೂ   ಸಂಜೆ ಹೋಟೆಲೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಗ್ಗೆ ವಿಮಾನ ದೋಹಾಕ್ಕೆ ಹೊರಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News