ಡಿಸೆಂಬರ್ 6: ಕೋಮುವಾದದ ವಿರುದ್ಧ ಹೋರಾಟಕ್ಕೆ ಪಣತೊಡುವ ದಿನವಾಗಲಿ

Update: 2016-12-05 18:31 GMT
Editor : ಎ. ಎನ್.

ಎಲ್ಲಾ ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ವರ್ಗಗಳು ಈ ಪಿಡುಗಿನ ವಿರುದ್ಧ ಹಾಗೂ ಅತ್ಯಂತ ಕ್ರೋಧೋನ್ಮತ್ತ ದೈತ್ಯನಾದ ಕೇಸರಿವಾದದ ವಿರುದ್ಧ ಎದ್ದು ನಿಂತು ಹೋರಾಡಬೇಕಿದೆ. ನಾವು ಅವರ ಕೋಮುವಾದಿ ಸಂಚನ್ನು ಬಯಲಿಗೆಳೆಯಬೇಕು, ವಿರೋಧಿಸಬೇಕು ಹಾಗೂ ಸೋಲಿಸಬೇಕಿದೆ. ಆಳುವ ವರ್ಗದ ಪಕ್ಷಗಳು ಕೋಮುವಾದದ ವಿರುದ್ಧ ಅದರಲ್ಲೂ ವಿಶೇಷವಾಗಿ ಬಹುಸಂಖ್ಯಾತ ಕೋಮುವಾದದ ವಿರುದ್ಧ ತಾತ್ವಿಕ ನಿಲುವನ್ನು ತೆಗೆದುಕೊಳ್ಳಲಾರವು. ಈ ಕ್ಷೀಣಗತಿಯ ವ್ಯವಸ್ಥೆಯಿಂದ ರಕ್ಷಣೆ ಪಡೆಯಲು ಅವರಿಗೆ ಈ ಅಸ್ತ್ರವನ್ನು ಝಳಪಿಸುವ ಅಗತ್ಯವಿದೆ.
ಬಾಬರಿ ಮಸೀದಿಯ ಧ್ವಂಸಗೊಳಿಸಿದವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಲು ನಾವು ಜನತೆಯನ್ನು ಒಗ್ಗೂಡಿಸಬೇಕಾಗಿದೆ.

ಮ್ಮ ಆಳ್ವಿಕೆಯನ್ನು ಶಾಶ್ವತಗೊಳಿಸಲು ಹಾಗೂ ಜನತೆಯ ಹೋರಾಟವನ್ನು ಹತ್ತಿಕ್ಕಲು ಹಾಗೂ ಬೇರೆಡೆಗೆ ತಿರುಗಿಸಲು ದೇಶದ ಆಡಳಿತಾರೂಢ ವರ್ಗಗಳು ದಮನಕಾರಿ ಕ್ರಮಗಳನ್ನು ಅನುಸರಿಸುವ ಜೊತೆಗೆ ಜನತೆಯಲ್ಲಿ ಕೋಮುವಿಭಜನೆಯ ಅಸ್ತ್ರವನ್ನು ಕೂಡಾ ಬಳಸಿಕೊಳ್ಳುತ್ತವೆ. ಆಡಳಿತಾರೂಢ ವರ್ಗಗಳು ಈ ಅಸ್ತ್ರವನ್ನು ತಮ್ಮ ವಸಾಹತುಶಾಹಿ ಯಜಮಾನರಾದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಬಳುವಳಿಯಾಗಿ ಪಡೆದುಕೊಂಡಿವೆ. ತಮ್ಮ ಪ್ರಜಾವಿರೋಧಿ ಆಳ್ವಿಕೆಯನ್ನು ಸಂರಕ್ಷಿಸಲು ಹಾಗೂ ದೇಶ ಮತ್ತು ಜನರಿಗೆ ತಾವು ಎಸಗುತ್ತಿರುವ ದ್ರೋಹವನ್ನು ಮರೆಮಾಚುವುದಕ್ಕಾಗಿ ಅವರು ಈ ಅಸ್ತ್ರದ ಮೂಲಕ ಜನತೆಯ ಐಕ್ಯತೆಗೆ ಅಡ್ಡಿಪಡಿಸುತ್ತಿದ್ದಾರೆ. ತಮ್ಮ ವಿರುದ್ಧದ ಜನಾಕ್ರೋಶವನ್ನು ತೊಡೆದುಹಾಕಲು ಹಾಗೂ ಜನರ ಹೋರಾಟವನ್ನು ಬೇರೆಡೆಗೆ ತಿರುಗಿಸಲು ಅವರಲ್ಲಿ ಒಡಕು ಮೂಡಿಸಿ ಪರಸ್ಪರ ಸಂಘರ್ಷಕ್ಕಿಳಿಯುಂತೆ ಮಾಡುತ್ತಿದ್ದಾರೆ.

 ಆಡಳಿತಾರೂಢ ಆರೆಸ್ಸೆಸ್-ಬಿಜೆಪಿಯು ಅತ್ಯಂತ ಕ್ರೋಧೋನ್ಮತ್ತ ಬಹುಸಂಖ್ಯಾತ ಕೋಮುವಾದವಾದ ಹಿಂದುತ್ವವನ್ನು ಪ್ರತಿನಿಧಿಸುತ್ತಿವೆ. ಅವರು ಅಲ್ಪಸಂಖ್ಯಾತರನ್ನು ಆಂತರಿಕ ಶತ್ರುಗಳೆಂಬಂತೆ ಬಿಂಬಿಸುತ್ತಿದ್ದಾರೆ ಹಾಗೂ ಶೋಷಿತ ಜಾತಿಗಳು, ಮಹಿಳೆಯರು ಹಾಗೂ ಬುಡಕಟ್ಟು ಜನರನ್ನು ನಿರಂಕುಶ ಜಾತಿ ವ್ಯವಸ್ಥೆಯಡಿ ದಮನಿಸುತ್ತಾರೆ. ಅವರ ಆಳ್ವಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ಅವರು ಗಣನೀಯವಾದ ಪ್ರಾಬಲ್ಯ ಹೊಂದಿರುವ ರಾಜ್ಯಗಳಲ್ಲಿ ಮುಸ್ಲಿಮರು ಹಾಗೂ ದಲಿತರ ವಿರುದ್ಧದ ದಾಳಿಗಳು ಹಲವು ಪಟ್ಟು ಹೆಚ್ಚಾಗಿವೆ. ವಸಾಹತುಶಾಹಿ ಆಳ್ವಿಕೆಯವರಿಂದ ಅವರು ಪಡೆದುಕೊಂಡಿರುವ ಆಡಳಿತ ಯಂತ್ರವು ಕೋಮುವಾದದ ಈ ಅಸ್ತ್ರವನ್ನು ಇನ್ನಷ್ಟು ಹರಿತಗೊಳಿಸಿ ಝಳಪಿಸುತ್ತಿದೆ. ಈ ಆಡಳಿತ ಯಂತ್ರವು ಅಲ್ಪಸಂಖ್ಯಾತ ವಿರೋಧಿ ಕೋಮುಹಿಂಸಾಚಾರದ ಸೂತ್ರಧಾರಿಗಳಿಗೆ ರಕ್ಷಾಕವಚವಾಗುತ್ತಿದೆ ಹಾಗೂ ಆಡಳಿತಾರೂಢ ರಾಜಕಾರಣಿಗಳ ಜೊತೆ ಕೈಜೋಡಿಸಿ ಭಾರೀ ಪ್ರಮಾಣದ ನರಮೇಧಕ್ಕೆ ಕುಮ್ಮಕ್ಕು ನೀಡುತ್ತಿದೆ.
  ಗುಜರಾತ್‌ನ ಮುಸ್ಲಿಂ ವಿರೋಧಿ ನರಮೇಧದ ಸಂಘಟಕರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಅದರ ಬದಲು ಅವರೀಗ ಇಡೀ ದೇಶವನ್ನು ಆಳುತ್ತಿದ್ದಾರೆ. ಸಿಖ್ ವಿರೋಧಿ ನರಮೇಧದ ಸಂಘಟಕರು ಕೂಡಾ ಈ ದೇಶವನ್ನು ದೀರ್ಘ ಸಮಯದಿಂದ ಆಳಿದ್ದರು. ಅಲ್ಪಸಂಖ್ಯಾತರು ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಯಾಗಿಸಿ ಭಾರೀ ಸಂಖ್ಯೆಯ ಕೋಮು ಹತ್ಯೆಗಳು ನಡೆಯುತ್ತಿವೆ. ಬಾಬರಿ ಮಸೀದಿಯನ್ನು ಆಡಳಿತಾರೂಢ ಕಾಂಗ್ರೆಸ್‌ನ ಸಹಕಾರದೊಂದಿಗೆ ಹಾಡಹಗಲೇ ಹಿಂದುತ್ವವಾದಿ ಗುಂಪುಗಳು ನೆಲಸಮಗೊಳಿಸಿದವು. ಇಲ್ಲಿ ನಾಶಗೊಂಡಿದ್ದುದು ಕೇವಲ ಒಂದು ಸಮುದಾಯದ ಆರಾಧನಾ ಕೇಂದ್ರ ಮಾತ್ರವೇ ಆಗಿರಲಿಲ್ಲ. ಕೋಮುಸೌಹಾರ್ದಹಾಗೂ ಆಳುವ ವರ್ಗಗಳು ವಾದಿಸುವ ಕೋಮುಸೌಹಾರ್ದ ಹಾಗೂ ಜಾತ್ಯತೀತತೆ ಕೂಡಾ ನೆಲಸಮಗೊಂಡಿವೆ.
ಎಲ್ಲಾ ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ವರ್ಗಗಳು ಈ ಪಿಡುಗಿನ ವಿರುದ್ಧ ಹಾಗೂ ಅತ್ಯಂತ ಕ್ರೋಧೋನ್ಮತ್ತ ದೈತ್ಯನಾದ ಕೇಸರಿವಾದದ ವಿರುದ್ಧ ಎದ್ದು ನಿಂತು ಹೋರಾಡಬೇಕಿದೆ. ನಾವು ಅವರ ಕೋಮವಾದಿ ಸಂಚನ್ನು ಬಯಲಿಗೆಳೆಯಬೇಕು, ವಿರೋಧಿಸಬೇಕು ಹಾಗೂ ಸೋಲಿಸಬೇಕಿದೆ. ಆಳುವ ವರ್ಗದ ಪಕ್ಷಗಳು ಕೋಮವಾದದ ವಿರುದ್ಧ ಅದರಲ್ಲೂ ವಿಶೇಷವಾಗಿ ಬಹುಸಂಖ್ಯಾತ ಕೋಮುವಾದದ ವಿರುದ್ಧ ತಾತ್ವಿಕ ನಿಲುವನ್ನು ತೆಗೆದುಕೊಳ್ಳಲಾರವು. ಈ ಕ್ಷೀಣಗತಿಯ ವ್ಯವಸ್ಥೆಯಿಂದ ರಕ್ಷಣೆ ಪಡೆಯಲು ಅವರಿಗೆ ಈ ಅಸ್ತ್ರವನ್ನು ಝಳಪಿಸುವ ಅಗತ್ಯವಿದೆ.
ಬಾಬರಿ ಮಸೀದಿಯ ಧ್ವಂಸಗಳಿಸಿದವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಲು ನಾವು ಜನತೆಯನ್ನು ಒಗ್ಗೂಡಿಸಬೇಕಾಗಿದೆ.
ಗುಜರಾತ್‌ನ ಮುಸ್ಲಿಂ ವಿರೋಧಿ ನರಮೇಧ ಹಾಗೂ ಸಿಖ್ ವಿರೋಧಿ ಹತ್ಯಾಕಾಂಡ ಸೇರಿದಂತೆ ಅಲ್ಪಸಂಖ್ಯಾತರ ನರಮೇಧದ ಸೂತ್ರಧಾರಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಲು ನಾವು ಜನರನ್ನು ಒಗ್ಗೂಡಿಸಬೇಕಾಗಿದೆ. ಇಂತಹ ಪ್ರಕರಣಗಳಲ್ಲಿ ತಥಾಕಥಿತ ಜನತಾ ಪ್ರತಿನಿಧಿಗಳ ಪಾತ್ರವನ್ನು ಪರಿಶೀಲಿಸಬೇಕಾಗಿದೆ ಹಾಗೂ ಅವರ ವಿರುದ್ಧ ತನಿಖೆಯನ್ನು ಆರಂಭಿಸಬೇಕಾಗಿದೆ.
ಗೋಸಂರಕ್ಷಣೆಯ ಹೆಸರಿನಲ್ಲಿ ಆಡಳಿತಾರೂಢ ಆರೆಸ್ಸೆಸ್-ಬಿಜೆಪಿಯ ಕೋಮುವಾದಿ ಸಂಚುಗಳ ವಿರುದ್ಧ, ದಲಿತರು ಹಾಗೂ ಮುಸ್ಲಿಮರ ಮೇಲೆ ಅವರು ನಡೆಸುತ್ತಿರುವ ದಾಳಿಗಳ ವಿರುದ್ಧ ಹಾಗೂ ಗೋರಕ್ಷಕದಳಗಳನ್ನು ನಿಷೇಧಿಸುವಂತೆ ಆಗ್ರಹಿಸಲು ನಾವು ಜನರನ್ನು ಒಗ್ಗೂಡಿಸಬೇಕಾಗಿದೆ.
ಚುನಾವಣೆಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತಯಾಚನೆ ಮಾಡುವುದನ್ನು ಕೊನೆಗೊಳಿಸಿವಂತೆ ಆಗ್ರಹಿಸಲು ಕೂಡಾ ನಾವು ಜನರನ್ನು ಒಂದಗೂಡಿಸಬೇಕಾಗಿದೆ.

Writer - ಎ. ಎನ್.

contributor

Editor - ಎ. ಎನ್.

contributor

Similar News