ಪ್ಲಾಸ್ಟಿಕ್ ಬಳಕೆ: ಎಚ್ಚರವಿರಲಿ...

Update: 2016-12-09 18:34 GMT

ಜಗತ್ತಿನ ಯಾವ ಪ್ರದೇಶದಲ್ಲೂ, ಯಾವ ರೂಪದಲ್ಲೂ ಕಾಣಸಿಗಬಹುದಾದ ವಸ್ತುವಾಗಿದೆ ಪ್ಲಾಸ್ಟಿಕ್. ಇತ್ತೀಚೆಗಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಎಂಬ ಹಗುರವಾದ ವಸ್ತು ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮುಖ್ಯತೆಯನ್ನು ಪಡೆದಿದೆ ಎಂಬುದಕ್ಕೆ ಎರಡುಮಾತಿಲ್ಲ. ಮೀನು, ದಿನಸಿ, ಹೊಟೇಲ್, ಬೇಕರಿ ವ್ಯಾಪಾರದಿಂದ ಹಿಡಿದು ಔಷಧ ಕ್ಷೇತ್ರ, ಇಲೆಕ್ಟ್ರಾನಿಕ್ ಮನೆಬಳಕೆ ವಸ್ತುಗಳು, ಆಟಿಕೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಸರ್ವ ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ಎಷ್ಟು ಉಪಕಾರವೋ ಅಷ್ಟೇ ಹಾನಿಕಾರಕವಾಗಿದೆ ಪರಿಸರಕ್ಕೆ. ಇಂದು ಇಡೀ ವಿಶ್ವಕ್ಕೆ ಪ್ಲಾಸ್ಟಿಕ್ ಬಹು ದೊಡ್ಡ ಸಮಸ್ಯೆಯಾಗಿದೆ. ಆದರೆ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಾನಿಗಳನ್ನು ನಾವು ಅರಿತೂ ಅರಿಯದ ಹಾಗೆ ನಡೆದುಕೊಳ್ಳುತ್ತಿದ್ದೇವೆ. ಪ್ಲಾಸ್ಟಿಕ್‌ಗಳಲ್ಲಿ ಅಡಗಿರುವ ಹಾನಿಕಾರಕ ರಾಸಾಯನಿಕ ವಸ್ತುಗಳು ಮನುಷ್ಯ, ಪ್ರಾಣಿಗಳು, ಸಸ್ಯಗಳು ಹಾಗೂ ಸಾಗರ ಜೇವಿಗಳೆಂಬ ಭೇದ ಭಾವವಿಲ್ಲದೆ ಪ್ರಪಂಚದ ಜೀವಜಾಲವೆಲ್ಲಕ್ಕೂ ಮಾರಕವಾಗಿದೆ. ಪ್ಲಾಸ್ಟಿಕ್ ವಸ್ತುಗಳು ಭೂಮಿಯಲ್ಲಿ 4000 ವರ್ಷಗಳಿಗಿಂತ ಹೆಚ್ಚು ಕಾಲ ನಾಶವಾಗದೆ ಬದುಕುಳಿದಿರುತ್ತದೆ. ಅಲ್ಲದೆ ಪ್ಲಾಸ್ಟಿಕ್ ಬಾಟಲಿಯಿಂದ ಬಿಡುಗಡೆಯಾಗುವ ಕಾರ್ಬನ್ ಡೈಆಕ್ಸೈಡ್ ಹಾಗೂ ವಿಷಾನಿಲಗಳು ವಾತಾವರಣದಲ್ಲಿ ಸೇರಿ ‘ಭೂಮಿ ಬಿಸಿಯೇರುವಿಕೆ’ಯ ಸಮಸ್ಯೆಗಳು ತಲೆದೋರುತ್ತದೆ ಯೆಂದು ವಿಜ್ಞಾನಿಗಳು ಭಯಪಡುತ್ತಿದ್ದಾರೆ. ಪ್ರತಿಯೊಂದು ಉ (ಟ್ಝಠಿಢ್ಝಛ್ಞಿಛಿ ಠಿಛ್ಟಿಛಿಠಿಚ್ಝಠಿಛಿ)     ಪ್ಲಾಸ್ಟಿಕ್ ಬಾಟಲಿ ಸುಮಾರು 3ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ ಉತ್ಪಾದಿಸುತ್ತದೆಯಂತೆ. ಇವುಗಳಿಂದ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತದೆ ಮಾತ್ರವಲ್ಲ ಇದರ ವಿಷಕಾರಕ ಪದಾರ್ಥಗಳು ಕುಡಿಯುವ ನೀರಿನಲ್ಲೂ ಹರಡಬಹುದು. ಪಾಲಿಥಿನ್ ಅಥವಾ ಪಾಲಿ ಮೈಥಿಲೀನ್ ಅತ್ಯಂತ ಪ್ರಮಾಣದಲ್ಲಿ ಉಪಯೋಗಿಸಲ್ಪಡುವಂತಹ ಪ್ಲಾಸ್ಟಿಕ್ ಆಗಿದೆ. ವಾರ್ಷಿಕ ಅಂದಾಜು ಪ್ರಕಾರ 10 ಕೋಟಿ ಟನ್ ಗೂ ಅಧಿಕವಾಗಿದೆ. ಸರಕಾರ ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಆದರೂ ನಾವಿನ್ನೂ ಇದರಿಂದ ಜಾಗ್ರತರಾಗಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಪ್ಲಾಸ್ಟಿಕ್‌ನಿಂದಾಗಿ ನಗರ ಪ್ರದೇಶಗಳು ಕಸದ ರಾಶಿಯಾಗಿ ಮಾರ್ಪಾಡಾಗಬಹುದು. ಮಳೆಗಾಲದಲ್ಲಿ ನಗರದ ಚರಂಡಿ ವ್ಯವಸ್ಥೆಗಳು ಮುಚ್ಚಿಹೋಗಿ, ನೀರು ನಿಂತು ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ನಗರ ರೋಗಗಳ ಗೂಡಾಗಬಹುದು. ಎಲ್ಲದಕ್ಕೂ ನಾವು ಎಚ್ಚರಗೊಳ್ಳುವುದು ಅಗತ್ಯ.

    ಇತ್ತೀಚೆಗೆ ಪ್ಲಾಸ್ಟಿಕ್ ಬಾಟಲಿ ಹಾಗೂ ಕಪ್‌ಗಳಲ್ಲಿ ಬಿಸಿ ಪಾನಿಯ ಕುಡಿಯುವುದು, ಹೋಟೆಲು ಅಥವಾ ಇನ್ನಿತರ ಸ್ಥಳಗಳಿಂದ ಬಿಸಿಯಾದ ಆಹಾರಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲ್ಲೊ ಪ್ಲಾಸ್ಟಿಕ್ ತಟ್ಟೆಗಳಲ್ಲೊ ತಂದು ತಿನ್ನುವುದು, ಕುಡಿಯುವುದು ಸಾಮಾನ್ಯ ವಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ತಲೆದೂರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 2010ರ ‘‘ಚ್ಞ್ಞ್ಠಚ್ಝ ್ಟಛಿಜಿಛಿಡಿ ಟ್ಛ ಟ್ಠಚ್ಝಿಜ್ಚಿ ಛಿಚ್ಝಠಿ ’’ ಸಂಶೋಧನೆಯ ಪ್ರಕಾರ, ಪ್ಲಾಸ್ಟಿಕ್‌ನಲ್ಲಿರುವ ಆಅ  (ಬಿಶ್ಫೆನೋಲ್ ಎ)ಗಳು ದೇಹದ ಅಂತಃಸ್ರಾವಕಗಳನ್ನು ಅಸ್ತವ್ಯಸ್ತಗೊಳಿಸುವ ಗುಣಗಳನ್ನು ಹೊಂದಿದ್ದು, ಈ ರಾಸಾಯನಿಕಗಳನ್ನು, ಗಟ್ಟಿ ತರದ ಪ್ಲಾಸ್ಟಿಕ್ ಬಾಟಲಿಗಳ, ಮಕ್ಕಳ ನಿಪ್ಪಲ್ ಬಾಟಲಿ ಉತ್ಪಾದನೆಯಲ್ಲಿ ಬಳಸುತ್ತಾರೆ. ಇವುಗಳು ಬಿಡುಗಡೆ ಮಾಡುವ ನುರೋಟಾಕ್ಸಿನ್‌ಗಳಂತಹ ವಸ್ತುಗಳನ್ನು ಲ್ಯಾಬ್‌ಗಳಲ್ಲಿ ಹೆಣ್ಣು ಇಲಿಗಳ ಮೇಲೆ ಪ್ರಯೋಗಿಸಿದಾಗ ಇವುಗಳಲ್ಲಿ ಶೀಘ್ರ ತರದ ಲೈಂಗಿಕ ಬೆಳವಣಿಗೆ ಕಂಡುಬಂದಿರುತ್ತದೆ. ಅದೇ ತರಹ ಪಿವಿಸಿ(ಪೋಲಿವಿನೈಲ್ ಕ್ಲೋರೈಡ್)ಯಿಂದ ತಯಾರಿಸುವ ವಸ್ತುಗಳಾದ ನೀರಿನ ಪೈಪುಗಳು, ಪೀಠೋಪಕರಣ ವಸ್ತುಗಳಲ್ಲಿ ಠಿಚ್ಝಠಿಛಿ ಅಂಶ ಮಾನವನ ಶರೀರಕ್ಕೆ ಸೇರಿ ಹಲವು ತರದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗಬಹುದೆಂದು ‘ನ್ಯೂಯಾರ್ಕ್ ಟೈಮ್ಸ್’ ಎಚ್ಚರಿಸಿದೆ. ಪುರುಷರ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಕು, ಸ್ತ್ರೀಯರ ಮುಟ್ಟಿನಲ್ಲಿ ಏರುಪೇರು ಉಂಟಾಗಬಹುದೆಂದು ಹಲವು ವೈಜ್ಞಾನಿಕ ಮೂಲಗಳಿಂದ ತಿಳಿದು ಬಂದಿದೆ.
   ಮನೆಯ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಪ್ಲಾಸ್ಟಿಕ್ ಕೈಚೀಲಗಳನ್ನು ಹೊತ್ತಿಸುವುದಂತೂ ಪರಿಸರ ಹಾಗೂ ನಮ್ಮ ಆರೋಗ್ಯಕ್ಕೆ ಬಹಳ ಅಪಾಯಕಾರಿ. ಏಕೆಂದರೆ ಪಿವಿಸಿ ಹೊತ್ತಿಸಿದಾಗ ಕಾರ್ಬನ್ ಮಾನಾಕ್ಸೈಡ್, ಡಿಯೊಕ್ಸಿನ್ಸ್, ಫ್ಯೂರನ್ಸ್ ಗಳಂತಹ ವಿಷಕಾರಿ ರಾಸಾಯನಿಕ ಅನಿಲಗಳು ಬಿಡುಗಡೆಯಾಗಿ ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಸೇರಿ ಅಲರ್ಜಿ, ಅಸ್ತಮ ಕ್ಯಾನ್ಸರ್‌ನಂತಹ ಭಯಾನಕ ರೋಗಗಳು ಕಾಡುವುದಲ್ಲದೆ ಶರೀರದಲ್ಲಿ ಹಾರ್ಮೋನಿನ ವ್ಯತ್ಯಾಸ ಉಂಟಾಗಬಹುದು.
 ಹಲವಾರು ವೈಜ್ಞಾನಿಕ ಅಧ್ಯಯನ ಸಂಶೋಧನೆಗಳ ಪ್ರಕಾರ ಬಿಸಿಲಲ್ಲಿ ನಿಲ್ಲಿಸಿರುವ ಕಾರುಗಳಲ್ಲಿ ಬಿಸಿಲಿನ ಶಾಖಕ್ಕೆ ಕಾರುಗಳಲ್ಲಿರುವ ಡ್ಯಾಶ್ ಬೋರ್ಡ್, ಸೀಟ್‌ಗಳು, ಏರ್ ಫ್ರೆಶ್‌ನರ್‌ಗಳು ‘ಬೆನ್ಝೀನ್’ ಎಂಬ ಅಪಾಯಕಾರಿ ರಸಾಯನಿಕ ಅನಿಲವನ್ನು ಕಾರಿನೊಳಗೆ ಹೊರಸೂಸುತ್ತದೆಯಂತೆ. ಕಾರಿನ ಕಿಟಕಿಗಳನ್ನು ತೆರೆಯದೆ ಹವಾ ನಿಯಂತ್ರಕವನ್ನು ಉಪಯೋಗಿಸಿದಲ್ಲಿ ಗಾಳಿಯೊಂದಿಗೆ ಈ ವಿಷಕಾರಿ ಅನಿಲಗಳು ನಮ್ಮ ಶರೀರ ಸೇರಿ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಬೆನ್ಝೀನ್ ಕ್ಯಾನ್ಸರ್‌ಕಾರಕ ವಿಷವಾಗಿದೆ.
ಅಮೆರಿಕದ ಬಾಸ್ಟನ್‌ನ ಸ್ಟಾನ್ಫೋರ್ಡ್ ಯೂನಿವರ್ಸಿಟಿ ಸಂತಾನೋತ್ಪತ್ತಿಯ ಔಷಧಿಗಳ ವಾರ್ಷಿಕ ಸಮ್ಮೇಳನದಲ್ಲಿ ಹೇಳುವ ಪ್ರಕಾರ, ಗರ್ಭಿಣಿಯರಲ್ಲಿ ಉಂಟಾಗುವ ಅನೈಸರ್ಗಿಕ ಗರ್ಭಪಾತಗಳಿಗೆ ಪ್ಲಾಸ್ಟಿಕ್‌ನ ‘ಬಿಸ್ಫೆನೋಲ್ ಎ’ ಕಾರಣವಾಗಿದೆಯಂತೆ. ಗರ್ಭಿಣಿಯರು ಪ್ಲಾಸ್ಟಿಕ್ ಬಾಟಲಿ ಅಥವಾ ಕಂಟೇನರ್‌ಗಳಲ್ಲಿ ಬಿಸಿನೀರು ಶೇಖರಿಸಿ ಕುಡಿದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಎಲ್ಲ ವಿಧದಲ್ಲೂ ಪ್ಲಾಸ್ಟಿಕ್ ಬಳಕೆ ಆದಷ್ಟು ಕಡಿಮೆಗೊಳಿಸುವುದು ಅರೋಗ್ಯಕ್ಕೆ ಹಾಗೂ ಪರಿಸರಕ್ಕೆ ಉತ್ತಮ.
 ಪ್ಲಾಸ್ಟಿಕ್, ಅದರ ಉತ್ಪನ್ನ ಹಾಗೂ ಸುರಕ್ಷತೆಯ ಅನುಸಾರವಾಗಿ ಅವುಗಳ ವರ್ಗೀಕರಣ ವಿವಿಧ ಪ್ರಕಾರಗಳಲ್ಲಿದೆ. ಗ್ರಾಹಕರಿಗೆ ಸಹಾಯವಾಗುವಂತಹ ರೀತಿಯಲ್ಲಿ 1988ರಲ್ಲಿ ‘ಸೊಸೈಟಿ ಆಫ್ ಪ್ಲಾಸ್ಟಿಕ್ಸ್ ಇಂಡಸ್ಟ್ರಿ’ ಗ್ರಾಹಕರ ಸಹಾಯ ವರ್ಗೀಕರಣ ವ್ಯವಸ್ಥೆ ಸ್ಥಾಪನೆಗೊಂಡಿತು. ಸರಿಯಾದ ಮರುಬಳಕೆ ಮತ್ತು ಅದರ ರಾಸಾಯನಿಕ ಆಧರಿಸಿ ಇಂದು ತಯಾರಕರು ಕೋಡಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಪ್ರತಿ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಕೆಳಭಾಗದಲ್ಲಿ ಎಸ್‌ಪಿಐ ಕೋಡ್ ಹಾಗೂ ಸಂಖ್ಯೆಯನ್ನು ಇರಿಸುತ್ತಾರೆ. ನಾವು ಖರೀದಿಸುವಾಗ ಅಥವಾ ಬಳಸುವಾಗ ಪ್ಲಾಸ್ಟಿಕ್ ವರ್ಗೀಕರಣ ಸಂಖ್ಯೆಯನ್ನು ಖಚಿತ ಪಡಿಸಬೇಕು. ಪ್ರತಿ ಸಂಖ್ಯೆಯು ಪ್ಲಾಸ್ಟಿಕ್‌ನ ವಿವಿಧ ರೀತಿಯ ಮೂಲಭೂತ ರೂಪರೇಖೆಯನ್ನು ಒದಗಿಸುತ್ತದೆ. ತ್ರಿಕೋನಾಕಾರದ ಚಿಹ್ನೆಯ ಕೆಳಗೆ ಉ ಅಥವಾ ಉಉ ಎಂದು ಬರೆದಿರುತ್ತಾರೆ. ಇವುಗಳಲ್ಲಿ ಮುಖ್ಯವಾದ ಎಸ್‌ಪಿಐ ಕೋಡ್ 1 ರಿಂದ 7 ಅಂಕೆಗಳು ಸಾಮಾನ್ಯವಾಗಿ ತೋರಿಸಲ್ಪಡುತ್ತದೆ. ಅವುಗಳಲ್ಲಿ:
ಎಸ್‌ಪಿಐ ಕೋಡ್ 1: ಇದರ ಉ ಅಥವಾ ಉಉ ಪ್ಲಾಸ್ಟಿಕ್‌ಗಳನ್ನು ಸಮಾನ್ಯವಾಗಿ ಮರುಬಳಕೆ ಮಾಡಲ್ಪಡುತ್ತದೆ. ಔಷಧಿ ಬಾಟಲಿಗಳು, ಆಹಾರ ಸಂಗ್ರಹಿಸುವ ಜಾರ್‌ಗಳು, ಪಾನೀಯ ಬಾಟಲಿಗಳನ್ನು ತಯಾರಿಸುತ್ತ್ತಾರೆ.

 
ಎಸ್‌ಪಿಐ ಕೋಡ್ 2. ಹೆಚ್ಚು ಸಾಂಧ್ರತೆಯ ಪಾಲಿಥೀನ್ ಏಈಉ ಪ್ಲಾಸ್ಟಿಕ್ ಆಗಿ ಗುರುತಿಸುತ್ತದೆ. ಈ ಉತ್ಪನ್ನಗಳು ಸುರಕ್ಷಿತ ಮತ್ತು ಆಹಾರ ಪಾನೀಯಗಳಲ್ಲಿ ರಾಸಾಯನಿಕ ವಸ್ತುಗಳು ಸೇರುವುದು ತಿಳಿಯಲ್ಪಟ್ಟಿಲ್ಲ. ಆದರೆ ಬಿಸಿ ವಸ್ತು ಅನ್ವಯವಾಗುವುದಿಲ್ಲ. ಉದಾ: ನೀರಿನ ಕ್ಯಾನ್‌ಗಳು ಮೋಟಾರ್ ಎಣ್ಣೆಗಳ ಕಂಟೇನರ್. ಸಾಮಾನ್ಯವಾಗಿ ಮರುಬಳಕೆ ಮಾಡಬಹುದು. ಎಸ್‌ಪಿಐ ಕೋಡ್ 3: ಪಿವಿಸಿಯಿಂದ ತಯಾರಿಸಲ್ಪಡುತ್ತದೆ ಇವುಗಳನ್ನು ಮರುಬಳಕೆ ಮಾಡುವುದಿಲ್ಲ. ಇವುಗಳಲ್ಲಿ ಆಹಾರ ಸೇವನೆ ಅಪಾಯಕಾರಿ. ಹೆಚ್ಚಾಗಿ ನೀರಿನ ಪೈಪು, ಮೊಬೈಲ್ ಉತ್ಪನ್ನಗಳು, ಕೈಗಾರಿಕಾ ವಸ್ತುಗಳ ಉತ್ಪಾದನೆಯಲ್ಲಿ ಬಳಸುತ್ತಾರೆ . ಎಸ್‌ಪಿಐ ಕೋಡ್ 4: ಇದು ಕಡಿಮೆ ಸಾಂದ್ರತೆಯ ಪಾಲಿಥೀನ್ ಅಥವಾ ಔಈಉ  ಪ್ಲಾಸ್ಟಿಕ್‌ನಿಂದ ಮಾಡಲಾಗುತ್ತದೆ ಸಾಮಾನ್ಯವಾಗಿ ಇವನ್ನು ಮರುಬಳಕೆ ಮಾಡಲ್ಪಡುವುದಿಲ್ಲ. ಆದರೂ ಕೆಲವು ಕಡೆಗಳಲ್ಲಿ ಮರುಬಳಕೆ ಮಾಡಿದ್ದೂ ಕಂಡು ಬಂದಿದೆ. ಇವು ಹೆಚ್ಚು ಬಾಳಿಕೆ ಬರುವ ಹಾಗೂ ಸ್ಥಿತಿಸ್ಥಾಪಕ ಗುಣವುಳ್ಳದ್ದಾಗಿದೆ. ಇವುಗಳನ್ನು ಹೆಚ್ಜಾಗಿ ಆಹಾರ ಶೇಖರಣೆಗೆ ಸುರಕ್ಷಿತವಾದ ದಿನಸಿ ಚೀಲಗಳು, ನೀರಿನ ಬಾಟಲಿಗಳಿಗೆ ಉಪಯೋಗಿಸುತ್ತಾರೆ. ಮರುಬಳಕೆ ಮಾಡಿದ ಔಈಉ ಪ್ಲಾಸ್ಟಿಕ್‌ಗಳಿಂದ ನೀರಿನ ಟಾಂಕಿಗಳು, ಪೀಠೋಪಕರಣ ಇತ್ಯಾದಿಗಳನ್ನು ತಯಾರಿಸುತ್ತಾರೆ.
ಎಸ್‌ಪಿಐ ಕೋಡ್ 5: ಪಾಲಿಪ್ರೊಪಿಲೀನ್ ಅಥವಾ ಯಿಂದ ಮಾಡಿದ ವಸ್ತುಗಳು ಮರುಬಳಕೆ ಮಾಡಬಹುದು. ಇವುಗಳು ಬಹಳ ಗಟ್ಟಿಯಾಗಿದ್ದು ಕರಗಿಸಲು ಹೆಚ್ಚಿನ ತಾಪಮಾನದ ಅಗತ್ಯವಿದೆ. ಇವುಗಳಿಂದ ಪ್ಲಾಸ್ಟಿಕ್ ಡೈಪರ್ಸ್, ಸಿರಪ್ ಬಾಟಲಿಗಳು, ಬ್ಯಾಟರಿ ಕೇಬಲ್‌ಗಳು ಇತ್ಯಾದಿಗಳಿಗೆ ಇದು ಬಳಕೆಯಾಗುತ್ತದೆ. ಖಐ ಕೋಡ್ 6 ಪ್ಯಾಲಿಸ್ಟೈರೀನ್ ಖ ಸಾಮಾನ್ಯವಾಗಿ ಸ್ಟೈರೋಫಾಮ್ ಎಂದು ಕರೆಯುತ್ತಾರೆ. ಖ  
ಮರುಬಳಕೆ ಮಾಡಬಹುದು. ಆದರೆ ಇಂಧನ ಶಕ್ತಿ ಸಾಕಷ್ಟು ಬೇಕಾಗುತ್ತದೆ. ಇವುಗಳಿಂದ ಎಸೆಯುವ ಕಾಫಿ ಕಪ್, ಆಹಾರ ಪೆಟ್ಟಿಗೆ, ಪ್ಲಾಸ್ಟಿಕ್ ಚಾಕು, ಕತ್ತರಿ ಇತ್ಯಾದಿಗಳನ್ನು ತಯಾರಿಸುತ್ತಾರೆ. ಎಸ್‌ಪಿಐ ಕೋಡ್ 7: ಈ ವರ್ಗದಲ್ಲಿ ಮರುಬಳಕೆ ಕಷ್ಟ. ದೊಡ್ಡ ನೀರಿನ ಬಾಟಲಿಗಳು, ಕಾಂಪ್ಯಾಕ್ಟ್ ಡಿಸ್ಕ್, ವೈದ್ಯಕೀಯ ಸಂಗ್ರಹ ಪಾತ್ರೆಗಳು ಇತ್ಯಾದಿಗಳು.
 ಈ ಎಲ್ಲ ವಿವಿಧ ರೀತಿಯ ಪ್ಲಾಸ್ಟಿಕ್‌ಗಳ ಬಗ್ಗೆ ಅರಿತು ಬಳಸಿದರೆ ನಮ್ಮ ಅರೋಗ್ಯ ದೃಷ್ಟಿಯಿಂದ ಉತ್ತಮ. ಪ್ಲಾಸ್ಟಿಕ್ ವಸ್ತು ಖರೀದಿಸುವಾಗ ಸುರಕ್ಷತೆಯ ಮಟ್ಟಿನಲ್ಲಿ ವಿಂಗಡಿಸಲು ಹಾಗೂ ಆಯ್ಕೆ ಮಾಡಲು ನೆನಪಿಡಿ. ಎಸ್‌ಪಿಐ ಕೋಡ್ 2,4, 5ನ್ನು ಆರಿಸಿರಿ ಆದರೆ ಮಿತಿಯಿರಲಿ. ಹಾಗೆಯೇ 1,3,7ನ್ನು (ಪೊಲಿಕಾರ್ಬೊನೇಟ್)ವರ್ಜಿಸಿರಿ. ಪ್ಲಾಸ್ಟಿಕನ್ನು ಮಿತವಾಗಿ ಬಳಸಿ ಅಥವಾ ಆದಷ್ಟು ವರ್ಜಿಸಲು ಪ್ರಯತ್ನಿಸಿ ಅರೋಗ್ಯ ಹಾಗೂ ಪರಿಸರ ಮಾಲಿನ್ಯದ ದೃಷ್ಟಿಯಿಂದ ನಾವು ಜಾಗ್ರತರಾಗೋಣ.

Writer - ಅಬೂಬಕರ್ ಕಾರ್ಕ

contributor

Editor - ಅಬೂಬಕರ್ ಕಾರ್ಕ

contributor

Similar News