ಫೋಟೊಗಳನ್ನು ಸೇವ್, ಮ್ಯಾನೇಜ್ ಮಾಡುವುದು ಹೇಗೆ?

Update: 2016-12-10 07:12 GMT

ಈ ಹೊತ್ತಿಗೆ ನಿಮ್ಮಲ್ಲಿ ಡಿಜಿಟಲ್ ಫೋಟೊಗಳ ದೊಡ್ಡ ಸಂಗ್ರಹವೇ ಇರಬಹುದು. ಇದು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಸ್ಟೋರೇಜ್ ಅನ್ನು ಸಂಪೂರ್ಣ ನುಂಗಿಹಾಕುವಷ್ಟರ ಮಟ್ಟಿಗೆ ಬೆಳೆದಿರಬಹುದು. ನಿಮಗೆ ಬೇಕಾದ ಫೋಟೊ ಹುಡುಕುವುದು ಕಷ್ಟವಾಗುತ್ತಿರಬಹುದು. ಈ ಸಮಸ್ಯೆಯಿಂದ ಮುಕ್ತಿ ಹೇಗೆ? ನಾವು ಸಲಹೆ ಕೊಡುತ್ತೇವೆ ನೋಡಿ.

1. ಫೋಟೊ ಗಾತ್ರವನ್ನು ಮರುಹೊಂದಾಣಿಕೆ ಮಾಡಿ:

ಈ ಮೂಲಕ ಕಂಪ್ಯೂಟರ್‌ನಲ್ಲಿ ಗರಿಷ್ಠ ದಾಸ್ತಾನು ಮಾಡಬಹುದು. ಇದರಲ್ಲಿ ನಿಮಗೆ ಯಾವ ನಷ್ಟವೂ ಆಗದು. ಇನ್‌ಫ್ರಾವ್ಯೆ ಎಂಬ ಉಚಿತ ಪ್ರೋಗ್ರಾಂ ಡೌನ್‌ಲೋಡ್ ಮಾಡಿಕೊಂಡು ಇದರಲ್ಲಿ ಫೋಟೊ ರೀಸೈಜ್ ಮಾಡಲು ಸಾಧ್ಯವಿದೆ.

(www.irfanview.com)

2. ಕ್ಲೌಡ್‌ನಲ್ಲಿ ದಾಸ್ತಾನು ಮಾಡಿ: ಗೂಗಲ್ ಫೋಟೋಸ್

 ಗೂಗಲ್ ಫೋಟೋಸ್ ಮೂಲಕ ನಿಮಗೆ ಅನಿಯಮಿತ ಫೋಟೊ ಸಂಗ್ರಹಕ್ಕೆ ಅವಕಾಶ ಇದೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ಇದನ್ನು ನೀವು ನಿರ್ವಹಿಸಬಹುದು. ಆದರೆ ನಿಮ್ಮಲ್ಲಿ ಗೂಗಲ್ ಪಿಕ್ಸೆಲ್ ಇಲ್ಲದಿದ್ದರೆ, ಅವು ಕಡಿಮೆ ಗುಣಮಟ್ಟದಲ್ಲಿ ಅಪ್‌ಲೋಡ್ ಆಗುತ್ತವೆ. ಇನ್ನೊಂದೆಡೆ ಫ್ಲಿಕರ್ ನಿಮಗೆ 1000 ಜಿಬಿವರೆಗೆ ಉಚಿತ ಫೋಟೊ ದಾಸ್ತಾನಿಗೆ ಅವಕಾಶ ಮಾಡಿಕೊಡುತ್ತದೆ. ಇದರ ಆಂಡ್ರಾಯ್ಡಾ ಹಾಗೂ ಐಒಎಸ್ ಆ್ಯಪ್‌ಗಳೂ ಇವೆ. ನಿಮ್ಮ ಯಾಹೂ ಖಾತೆ ಸೈನ್ ಇನ್ ಮಾಡಿ ಕ್ಲೌಡ್‌ನಲ್ಲಿ ಇದನ್ನು ದಾಸ್ತಾನು ಮಾಡಲು ಅವಕಾಶವಿದೆ. ಇಲ್ಲಿಂದ ಎಡಿಟಿಂಗ್ ಹಾಗೂ ಶೇರಿಂಗ್ ಕೂಡಾ ಸುಲಭ

3. ಸ್ಮಾರ್ಟ್‌ಫೋನ್ ಸಹಾಯದಿಂದ ಸುಲಭವಾಗಿ ಹಳೆಯ ಮುದ್ರಿತ ಪ್ರತಿಗಳನ್ನು ಡಿಜಿಟಲೀಕರಿಸಿ: ಫೋಟೊ ಸ್ಕ್ಯಾನ್

ಮುದ್ರಿತ ಫೋಟೊಗಳು ಬೇಗ ಹಾಳಾಗುತ್ತವೆ. ನಿಮ್ಮ ಹಳೆಯ ನೆನಪುಗಳನ್ನು ಉಳಿಸಿಕೊಳ್ಳಲು ಬಯಸುವಿರಾದರೆ, ಅವುಗಳನ್ನು ಸ್ಕ್ಯಾನ್ ಮಾಡಿಕೊಳ್ಳಿ. ಒಳ್ಳೆಯ ಗುಣಮಟ್ಟದಲ್ಲಿ ಬೇಕಿದ್ದರೆ, ಒಳ್ಳೆಯ ಸ್ಕ್ಯಾನರ್ ಬಳಸಿ. ಸ್ಮಾರ್ಟ್‌ಫೋನ್ ಕ್ಯಾಮರಾಗಳು ಸೂಕ್ತ ಆ್ಯಪ್‌ಗಳೊಂದಿಗೆ ಉತ್ತಮ ಗುಣಮಟ್ಟದ ಸ್ಕ್ಯಾನಿಂಗ್ ಅವಕಾಶ ನೀಡುತ್ತವೆ.

4. ಫೋಟೊ ಕ್ಲೀನರ್ ಮೂಲಕ ಪುನರಾವರ್ತಿತ ಫೋಟೊ ಡಿಲೀಟ್ ಮಾಡಿ

ನಾನ್ ಎಕ್ಸ್‌ಪಾಂಡಿಂಗ್ ಸ್ಟೋರೇಜ್ ಇರುವ ಫೋನ್‌ಗಳಲ್ಲಿ, ನಿಮ್ಮ ಫೋಟೊ ಲೈಬ್ರೆರಿಯಲ್ಲಿ ಫೋಟೊ ಗಾತ್ರ ಕುಗ್ಗಿಸಿ. ಒಂದಕ್ಕಿಂತ ಹೆಚ್ಚು ಇರುವ ಡೂಪ್ಲಿಕೇಟ್ ಫೋಟೊ ಕಿತ್ತುಹಾಕಿ. ಸಾವಿರಾರು ಸಂಖ್ಯೆಯಲ್ಲಿ ಫೋಟೊಗಳಿದ್ದರೆ, ಫೋಟೊ ಕ್ಲೀನರ್ ಬಳಸಿ.

5. ಒಯ್ಯುವ ಸಾಧನಕ್ಕೆ ವರ್ಗಾಯಿಸಿ: ಸ್ಯಾನ್‌ಡಿಸ್ಕ್‌ನ ವೈರ್‌ಲೆಸ್ ಸ್ಟಿಕ್‌ಗೆ ಸಂಪರ್ಕ

ಒಂದು ಅತ್ಯಂತ ಸುಲಭ ಹಾಗೂ ಅಗ್ಗದ ವಿಧಾನವೆಂದರೆ, ಸ್ಯಾನ್‌ಡಿಸ್ಕ್‌ನ ಕನೆಕ್ಟ್ ವೈರ್‌ಲೆಸ್ ಸ್ಟಿಕ್‌ಗೆ ಫೋಟೊಗಳನ್ನು ವರ್ಗಾಯಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News