ಕಾರು- ಕ್ಯಾಂಟರ್ ವಾಹನ ಮುಖಾಮುಖಿಯಾಗಿ ಢಿಕ್ಕಿ
Update: 2016-12-11 11:49 IST
ಹುಬ್ಬಳ್ಳಿ, ಡಿ.11, ಹುಬ್ಬಳ್ಳಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ತಾರಿಹಾಳ ಬಳಿ ಭೀಕರ ಅಪಘಾತವಾಗಿದೆ. ಇನ್ನೋವಾ ಕಾರು ಹಾಗೂ ಕ್ಯಾಂಟರ್ ವಾಹನ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲಿ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾರಿಹಾಳ ಬಳಿ ಇನ್ನೋವಾ ಕಾರು ಚಾಲಕ ಮುಂದಿನ ವಾಹನವನ್ನು ಓವರ್ ಟೆಕ್ ಮಾಡಲು ಹೋಗಿ ಮುಂದೆ ಬರುತ್ತಿದ್ದ ಕ್ಯಾಂಟರ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯಿಂದ ಇನೋವಾ ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ಮೂರು ಜನರು ಮೃತರೆಲ್ಲರೂ ಗೋವಾ ಮೂಲದವರು ಎನ್ನಲಾಗುತ್ತಿದ್ದು, ಮೃತರ ಹೆಸರು ತಿಳಿದು ಬಂದಿಲ್ಲ. ಘಟನೆಯಲ್ಲಿ ನಾಲ್ವರರಿಗೆ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಉತ್ತರ ವಲಯ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.