10 ದಿನಗಳೊಳಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ: ಜಾವಡೆಕರ್

Update: 2016-12-12 16:58 GMT

ಹೊಸದಿಲ್ಲಿ, ಡಿ.12: ಸರಕಾರವು ಹತ್ತು ದಿನಗಳೊಳಗಾಗಿ ಖ್ಯಾತ ಶಿಕ್ಷಣ ತಜ್ಞರೊಬ್ಬರ ನೇತೃತ್ವದ ಸಮಿತಿಯೊಂದನ್ನು ಘೋಷಿಸಲಿದ್ದು, ಅದು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ರಚಿಸಲಿದೆ ಯೆಂದು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್ ಜಾವಡೆಕರ್ ಇಂದು ತಿಳಿಸಿದ್ದಾರೆ.
ಸಚಿವಾಲಯವು ಈಗಾಗಲೇ, ರಾಜ್ಯಗಳು, ಶಿಕ್ಷಣ ಸಂಸ್ಥೆಗಳು, ಸಂಸದರು ಹಾಗೂ ತಜ್ಞರು ಸೇರಿದಂತೆ ಎಲ್ಲ ಪಾಲುದಾರರೊಡನೆ ಸಮಗ್ರ ಚರ್ಚೆ ನಡೆಸಿದೆ. ಟಿಎಸ್‌ಆರ್ ಸುಬ್ರಹ್ಮಣ್ಯನ್ ಸಮಿತಿಯ ಶಿಫಾರಸುಗಳನ್ನೂ ಮಾಹಿತಿಯಂತೆ ಪರಿಗಣಿಸಲಾಗುವುದೆಂದು ಅವರು ಹೇಳಿದ್ದಾರೆ.
ಮುಂದಿನ 10 ದಿನಗಳಲ್ಲಿ ಖ್ಯಾತ ಶಿಕ್ಷಣ ತಜ್ಞರೊಬ್ಬರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಲಿದೆ. ತಾವು ಕೆಲವು ಹೆಸರುಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಅವರು 3-4 ತಿಂಗಳು ಕೆಲಸ ಮಾಡಬೇಕಾಗಿರುವುದರಿಂದ ಅವರಿದಕ್ಕೆ ಸಿದ್ಧರಿದ್ದಾರೆಯೇ ಎಂಬುದನ್ನೂ ಕೇಳಬೇಕಾಗಿದೆಯೆಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಜಾವಡೆಕರ್ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News