ರಾಘವ ಹೆಬ್ಬಾರ್
Update: 2016-12-13 22:54 IST
ಬೆಳ್ತಂಗಡಿ, ಡಿ.13 : ನೆರಿಯ ಎಸ್ಟೇನ್ ಸ್ಥಾಪಕ ಆಡಳಿತ ನಿರ್ದೇಶಕ ನೆರಿಯ ರಾಘವ ಹೆಬ್ಬಾರ್ (91) ಮಂಗಳವಾರ ನೆರಿಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಚೆನ್ನೈ ಹೋಟೆಲ್ ಫಾಂ ಗ್ರೋಮ್, ಮದ್ರಾಸ್ ಹೋಟೆಲ್ ಅಶೋಕ್ ಚೆನೈ ಇದರ ಸ್ಥಾಪಕ ಅಧ್ಯಕ್ಷರಾಗಿ, ಶಾರದಾ ವಿದ್ಯಾಲಯ ಮಂಗಳೂರು ಇದರ ಸ್ಥಾಪಕ ಉಪಾಧ್ಯಕ್ಷರಾಗಿ, ನೆರಿಯ ಶ್ರೀ ಅಪ್ಟೆಲ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ, ನೆರಿಯ ಪಂಚಾಯತ್‌ನ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಎರಡು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶಾಸಕ ಕೆ. ವಸಂತ ಬಂಗೇರ, ಶಾರದಾ ವಿದ್ಯಾಲಯದ ಸಂಚಾಲಕ ಎಂ ಬಿ ಪುರಾಣಿಕ್, ಹಾಗೂ ಜನಪ್ರತಿನಿಧಿಗಳು ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.