×
Ad

ಹಿರಿಯ ಕಾಂಗ್ರೆಸಿಗ ಹನೀಫ್ ಯೂಸುಫ್

Update: 2016-12-16 23:55 IST

ಉದ್ಯಾವರ, ಡಿ.16: ಉದ್ಯಾವರ ಗ್ರಾಮದ ಹಿರಿಯ ಕಾಂಗ್ರೆಸಿಗ, ಉದ್ಯಾವರ ಮಂಡಲ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಹನೀಫ್(ಯೂಸುಫ್) ಸಾಹೇಬ್(76) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ನಿಧನರಾದರು.

ಯೂಸುಫ್ ಉದ್ಯಾವರ ಜಾಮಿಯಾ ಮಸೀದಿಯ ಉಪಾಧ್ಯಕ್ಷರಾಗಿ, ಮುಸ್ಲಿಂ ಯಂಗ್‌ಮೆನ್ ಅಸೋಸಿಯೇಶನ್‌ನ ನಿರ್ದೇಶಕರಾಗಿ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಮತ್ತು ತುಳುವೆರೆ ಬಳಗ ಮೊದಲಾದ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿಯನ್ನುಅಗಲಿದ್ದಾರೆ.

  ಇವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯಕುಮಾರ್ ಸೊರಕೆ, ಬಿ.ನರಸಿಂಹ ಮೂರ್ತಿ, ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಯುಎಫ್‌ಸಿ ಅಧ್ಯಕ್ಷ ಯು.ಆರ್. ಚಂದ್ರಶೇಖರ್, ಜಾಮಿಯಾ ಮಸೀದಿಯ ಅಧ್ಯಕ್ಷ ರಫೀಕ್ ಯೂಸುಫ್, ರಾಜ್ಯಸಭಾ ಸದಸ್ಯರ ಆಪ್ತಕಾರ್ಯದರ್ಶಿ ಉದ್ಯಾವರ ನಾಗೇಶ್ ಕುಮಾರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾಬಲ ಕುಂದರ್, ಸಂತೋಷ್‌ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಬೀಬ್ ಅಲಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News