×
Ad

ಬೆಳೆಸಾಲ ಬಡ್ಡಿ ಸಹಾಯಧನ ಯೋಜನೆಯ ಅವಧಿ ಇನ್ನೂ 60 ದಿನಗಳಿಗೆ ವಿಸ್ತರಣೆ

Update: 2016-12-20 18:43 IST

ಹೊಸದಿಲ್ಲಿ,ಡಿ.20: ನೋಟು ರದ್ದತಿಯಿಂದ ಸಂಕಷ್ಟಗಳಿಗೆ ಗುರಿಯಾಗಿರುವ ಕೃಷಿಕರಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರವು ಈ ವರ್ಷದ ನ.1ರಿಂದ ಡಿ.31ರೊಳಗೆ ತಮ ಬೆಳೆಸಾಲಗಳನ್ನು ಮರುಪಾವತಿಸಬೇಕಾಗಿದ್ದ ಕೃಷಿಕರು ಪ್ರಾಮಾಣಿಕ ಮರುಪಾವತಿಗಾಗಿ ಶೇ.3ರಷ್ಟು ಪ್ರೋತ್ಸಾಹಧನವನ್ನು ಪಡೆಯಲು ನಿಗದಿಗೊಳಿಸಲಾಗಿದ್ದ ಅವಧಿಯನ್ನು 60 ದಿನಗಳ ಕಾಲ ವಿಸ್ತರಿಸಿ ಮಂಗಳವಾರ ಆದೇಶಿಸಿದೆ.

ಬಡ್ಡಿ ಸಹಾಯಧನ ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ಶೇ.7 ಬಡ್ಡಿದರದಲ್ಲಿ ಒಂದು ವರ್ಷದ ಅವಧಿಗೆ ಮೂರು ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆಸಾಲವನ್ನು ಒದಗಿಸಲಾಗುತ್ತದೆ. ಸಕಾಲದಲ್ಲಿ ಈ ಸಾಲವನ್ನು ಮರುಪಾವತಿಸುವ ಕೃಷಿಕರಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಶೇ.3ರಷ್ಟು ಬಡ್ಡಿಯನ್ನು ಮರಳಿಸಲಾಗುತ್ತದೆ.

ನ.1ರಿಂದ ಡಿ.31ರೊಳಗೆ ತಮ್ಮ ಬೆಳೆಸಾಲವನ್ನು ಪಾವತಿಸಬೇಕಿದ್ದ ಕೃಷಿಕರಿಗೆ ಇನ್ನೂ 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರು ತಮ್ಮ ಸಾಲವನ್ನು ಮರುಪಾವತಿಸಿದರೆ ಶೇ.3 ಪ್ರೋತ್ಸಾಹಧನವನ್ನು ಪಡೆಯುತ್ತಾರೆ ಎಂದು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಷ್‌ಕುಮಾರ ಭುತಾನಿ ಅವರು ಮಂಗಳವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News