×
Ad

ಸದನದಲ್ಲಿ ಇ-ಸಿಗರೇಟ್ ಸೇದಿದ ಕೀರ್ತಿ ಆಝಾದ್; TMC ಸಂಸದನ ನಡವಳಿಕೆ ವಿರುದ್ಧ ಸ್ಪೀಕರ್‌ ಗೆ ಅನುರಾಗ್ ಠಾಕೂರ್ ಪತ್ರ

Update: 2025-12-17 20:22 IST

ಅನುರಾಗ್ ಠಾಕೂರ್ | Photo Credit ; X/@PTI_News 

ಹೊಸದಿಲ್ಲಿ,ಡಿ.17: ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಕೀರ್ತಿ ಆಝಾದ್ ಅವರು ಸದನದಲ್ಲಿ ಇ-ಸಿಗರೇಟ್ ಸೇದಿದ್ದಾರೆಂದು ಆರೋಪಿಸಿ ಲೋಕಸಭೆಯ ಬಿಜೆಪಿ ಎಂಪಿ, ಅನುರಾಗ್ ಠಾಕೂರ್ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಕೀರ್ತಿ ಆಝಾದ್ ಅವರು ಇ-ಸಿಗರೇಟ್ ಸೇದುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು,, ವಿವಾದ ಸೃಷ್ಟಿಯಾಗಿದೆ.

ಈ ವೀಡಿಯೋವನ್ನು ಬಿಜೆಪಿಯ ಐಟಿ ವಿಭಾಗದ ವರಿಷ್ಠ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರಿಗೆ ನೀಡಿದ ದೂರಿನಲ್ಲಿ ಅನುರಾಗ್ ಠಾಕೂರ್ ಅವರು ಸಿಗರೇಟ್ ಸೇದುತ್ತಿರುವ ಸಂಸದನನ್ನು ಹೆಸರಿಸಿಲ್ಲವಾದರೂ, ಅಮಿತ್ ಮಾಳವೀಯ ಅವರು, ತನ್ನ ಪೋಸ್ಟ್‌ ನಲ್ಲಿ ಆ ವ್ಯಕ್ತಿ ಕೀರ್ತಿ ಆಝಾದ್ ಎಂಬುದಾಗಿ ಗುರುತಿಸಿದ್ದರು. ಆಝಾದ್ ಅವರ ದುರ್ನಡತೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಮಾಳವೀಯ ಅವರು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಆಗ್ರಹಿಸಿದ್ದಾರೆ.

‘‘ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿರುವ ಟಿಎಂಸಿ ಸಂಸದ ಕೀರ್ತಿ ಆಝಾದ್ ಅಲ್ಲದೆ ಇನ್ನ್ಯಾರೂ ಅಲ್ಲ. ಅವರಂತಹ ವ್ಯಕ್ತಿಗಳ ಪಾಲಿಗೆ ಕಾನೂನು, ನಿಯಮಗಳಿಗೆ ಯಾವುದೇ ಅರ್ಥವಿಲ್ಲ. ಅಂಗೈಯಲ್ಲಿ ಇ-ಸಿಗರೇಟ್ ಅನ್ನು ಬಚ್ಚಿಟ್ಟುಕೊಂಡಿದ್ದ ಅವರ ಧಾರ್ಷ್ಟ್ಯವನ್ನು ಕಲ್ಪಿಸಿಕೊಳ್ಳಿ. ಧೂಮಪಾನ ಕಾನೂನುಬಾಹಿರವಾಗದೆ ಇರಬಹುದು. ಆದರೆ ಸಂಸತ್‌ನೊಳಗೆ ಅದನ್ನು ಬಳಸುವುದು ಸ್ವೀಕಾರಾರ್ಹವಲ್ಲ. ತನ್ನ ಪಕ್ಷದ ಸಂಸದನ ಬಗ್ಗೆ ಮಮತಾ ಬ್ಯಾನರ್ಜಿ ಸ್ಪಷ್ಟೀಕರಣ ನೀಡಬೇಕೆಂದು, ಮಾಳವೀಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News