ಕೆ.ಎ.ಹಸೇನ್
Update: 2016-12-26 22:40 IST
ಮಂಗಳೂರು, ಡಿ.26: ಸೂರಿಂಜೆಯ ಕೋಟ್ಯಾರ್ ಹೌಸ್ ನಿವಾಸಿ ಕೆ.ಎ.ಹಸೇನ್ (60) ಸೋಮವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ, ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ.
ಕೆಲವು ಕಾಲ ಪಿಡಬ್ಲುಡಿ ಗುತ್ತಿಗೆದಾರರಾಗಿದ್ದ ಅವರು ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿ ಉದ್ಯೋಗದಲ್ಲಿದ್ದರು. ಸದ್ಯ ಸೂರಿಂಜೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮೃತರ ಅಂತಿಮ ಸಂಸ್ಕಾರ ಮಂಗಳವಾರ ರೊಹರ್ ನಮಾಝಿನ ಬಳಿಕ ಸೂರಿಂಜೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.