ಗಿರಿಜನರ ಸಮಸ್ಯೆಗಳೂ, ಸರಕಾರಗಳ ಯೋಜನೆಗಳೂ...

Update: 2016-12-26 18:13 GMT

ಪರಿಸರ ಸಂರಕ್ಷಣೆ ಎನ್ನುವುದು ಆದಿವಾಸಿಗಳ ವಿಷಯ ಬಂದಾಗ ಒಂದು ಕುಂಟು ನೆಪವಾಗಿ ತೋರುತ್ತದೆ. ಆದ್ದರಿಂದ ಅಂತಹ ನೆಪಗಳನ್ನೇ ಕಾನೂನಾತ್ಮಕವಾಗಿರುವ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ನಿರಂತರವಾಗಿ ಗಿರಿಜನರನ್ನು, ಉದ್ಯಾನವನಗಳು, ಮೀಸಲು ಅರಣ್ಯ ಪ್ರದೇಶ, ಗಿರಿಧಾಮಗಳು ಎನ್ನುವ ವಿವಿಧ ನಮೂನೆಯ ವರ್ಗೀಕರಣದ ಮೂಲಕ ಸರಕಾರಗಳು ಅವರನ್ನು ಒಕ್ಕಲೆಬ್ಬಿಸುತ್ತಿವೆ. ಈ ಒಕ್ಕಲೆಬ್ಬಿಸುವಿಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದೆ ಕಾಲಾಂತರದಲ್ಲಿ ಗಿರಿಜನರಿಗೆ ಪುನರ್ವಸತೀಕರಣ ಹಾಗೂ ಇತರ ಸೌಲಭ್ಯಗಳನ್ನು ತಿರಸ್ಕರಿಸಲಾಗುತ್ತಿದೆ. ಇದರ ಮೂಲಕ ಗಿರಿಜನರ ಮೇಲಾಗುವ ಪರಿಣಾಮಗಳಂತೂ ಚಿಂತಾಜನಕವೆನಿಸುವಷ್ಟು ಕಷ್ಟಕರವಾಗಿವೆ.

ಆದಿವಾಸಿಗಳು ಇಂದು ನಿರಂತರವಾಗಿ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇದಕ್ಕೆ ಕಾರಣಗಳು ಇಷ್ಟೇ ‘ಅಭಿವೃದ್ಧಿ’ ಎಂಬ ಪೆಡಂಭೂತ ಈ ಸರಕಾರಗಳ ನೀತಿಗಳಿಗೆ ಬೆನ್ನತ್ತಿದೆ. ಆದ್ದರಿಂದಲೇ ಇಂದು ಸರಕಾರಗಳ ಬಹುನಡೆಗಳೆಲ್ಲವು ಕೂಡ ಇಂತಹ ಮಾರ್ಗಗಳನ್ನು ನೇರವಾಗಿ ಗುರಿಯಾಗಿಸಿಕೊಂಡಿವೆ. ಇದಕ್ಕೆ ಕಾನೂನುಗಳು ಹೊರತಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಏಕೆಂದರೆ ಇಂದಿನ ಗಿರಿಜನರ ಪರವಾಗಿರುವ ಕಾನೂನುಗಳೆಲ್ಲವು ಕೂಡ ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ದೀಪ ಎನ್ನುವಂತಿವೆ. ಆದ್ದರಿಂದಲೇ ಇಂದು ಗಿರಿಜನರು ಸಾತ್ಪುರದ ಶ್ರೇಣಿಯಿಂದ ಓಡಿಸ್ಸಾದ ನಿಯಮಗಿರಿ ಮತ್ತು ಪಶ್ಚಿಮಘಟ್ಟದಲ್ಲಿನ ನೀಲಗಿರಿಯಂತಹ ತಪ್ಪಲು ಪ್ರದೇಶಗಳಲ್ಲಿನ ಸಮಸ್ಯೆಗಳು ಈ ಹಿನ್ನೆಲೆಯಿಂದ ಬಂದಂತವುಗಳಾಗಿವೆ. ಇನ್ನು ಗಿರಿಜನರ ಮೇಲಾಗುತ್ತಿರುವ ಈ ಆಕ್ರಮಣಗಳೇನೂ ಹೊಸದಲ್ಲ, ಕಾರಣ ಇವು ಸ್ವಾತಂತ್ರ ಪೂರ್ವದಿಂದ ಬ್ರಿಟಿಷರ ಮೂಲಕ ಬಂದಂತಹ ಬಳುವಳಿಯಾಗಿ ಕಾಣುತ್ತವೆ. ಬ್ರಿಟಿಷರು ತಮ್ಮ ವಸಾಹತುಶಾಹಿ ನೀತಿಗಳ ಹಿತಾಸಕ್ತಿಯನ್ನು ಪೂರೈಸಿಕೊಳ್ಳಲು ಹೇರಳವಾದ ಖನಿಜ ಮತ್ತು ನೈಸರ್ಗಿಕ ಸಂಪನ್ಮೂಲಗಳ ಆಗರಗಳಾಗಿದ್ದ ಈ ಅರಣ್ಯಪ್ರದೇಶಗಳು ಒಂದರ್ಥದಲ್ಲಿ ಅವರ ಕಣ್ಣು ಕೋರೈಸಿದ್ದಂತೂ ಸುಳ್ಳಲ್ಲ. ಆದ್ದರಿಂದ ಆ ಸಂದರ್ಭದಲ್ಲಿ ಸಂಪೂರ್ಣವಾಗಿ ಆದಿವಾಸಿಗಳ ಹಿಡಿತದಿಂದ ಬಿಡಿಸಿಕೊಳ್ಳುವ ಸಲುವಾಗಿ ಗಿರಿಧಾಮಗಳು, ಸ್ಯಾಂಚುರಿಗಳು, ರಾಷ್ಟ್ರೀಯ ಅಭಯಾರಣ್ಯಗಳು, ಮೀಸಲು ಅರಣ್ಯಗಳು ಮತ್ತು ಸಾಮುದಾಯಿಕ ಅರಣ್ಯಪ್ರದೇಶಗಳೆಂಬ ಇಂತಹ ವರ್ಗೀಕರಣದ ಪರಿಕಲ್ಪನೆಯು ಬ್ರಿಟಿಷರು ಹಾಕಿಕೊಟ್ಟ ಪರಂಪರೆಯಿಂದ ಬಂದಿರುವಂತದ್ದು. ಆದ್ದರಿಂದ ಇಂತಹ ವಸಾಹತು ನೀತಿಯ ಪರಿಕಲ್ಪನೆಯಲ್ಲಿ ಪೋಷಣೆಗೊಂಡ ಈ ಎಲ್ಲ ಅಂಶಗಳು ಇದಕ್ಕೆ ಪೂರಕವಾಗಿ ಇಂದಿನ ಸರಕಾರಗಳ ನೀತಿಗಳಲ್ಲೂ ಪ್ರತಿಫಲಿಸುತ್ತಿರುವ ಸಂಗತಿಯನ್ನು ನಾವಿಂದು ಕಾಣಬಹುದಾಗಿದೆ. ಇದರಿಂದಾಗಿ ‘ಅಭಿವೃದ್ಧಿ’ಯ ವ್ಯಾಖ್ಯಾನವನ್ನು ತಮ್ಮಿಷ್ಟಕ್ಕನು ಸಾರವಾಗಿ ಮಾರ್ಪಾಡು ಮಾಡಿಕೊಂಡು ಆ ಮೂಲಕ ನಿರಂತರವಾಗಿ ಇಂದು ಗಿರಿಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ನಮಗೆ ಸಾತ್ಪುರ ಶ್ರೇಣಿಯಲ್ಲಿನ ನರ್ಮದಾ ನದಿಗೆ ಕಟ್ಟಿರುವ ಸರ್ದಾರ್ ಸರೋವರ ಯೋಜನೆಗೆ ಸುಮಾರು 41 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನೊಳಗೊಂಡ 2 ಲಕ್ಷ ಜನರನ್ನು ಆ ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಯಿತು. ಪ್ರಾರಂಭದಲ್ಲಿ ಅವರಿಗೆ ಪುನರ್ವಸತೀಕರಣ, ವಿದ್ಯುತ್, ನೀರಾವರಿ ಎನ್ನುವ ಬಗೆ ಬಗೆಯ ಸೌಲಭ್ಯ ನೀಡುತ್ತೇವೆ ಎನ್ನುವ ವಿಶ್ವಾಸದ ಹೇಳಿಕೆಗಳೊಂದಿಗೆ ಅವರನ್ನು ಅಲ್ಲಿಂದ ಹೊರದಬ್ಬಲಾಯಿತು. ಆದರೆ ಕಾಲಾಂತರದಲ್ಲಾದ ಬದಲಾವಣೆಯ ಚಿತ್ರಣವಂತೂ ಖಂಡಿತ ಅಲ್ಲಿ ಭಿನ್ನ. ಕಾರಣ ಅತ್ತ ಭೂಮಿಯೂ ಇಲ್ಲ, ಇತ್ತ ಮನೆಯೂ ಇಲ್ಲ ಎನ್ನುವ ದುಃಸ್ಥಿತಿ ಗಿರಿಜನರದು. ಕೊನೆಗೆ ಸರಕಾರ ಇಷ್ಟು ಜನಸಂಖ್ಯೆಗೆ ಪುನರ್ವಸತಿ ಕಲ್ಪಿಸಲು ಜಾಗ ಇಲ್ಲ ಆದ್ದರಿಂದ ಪರಿಹಾರವನ್ನು ನಗದು ರೂಪದಲ್ಲಿ ನೀಡುತ್ತೇವೆಂಬ ವರಸೆಯನ್ನು ಪ್ರಾರಂಭಿಸಿತು. ಕೊನೆಗೆ ಇವ್ಯಾವುದೂ ಇಲ್ಲವೆಂಬಂತೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿತು. ಆದ್ದರಿಂದ ಇಂದಿಗೂ ಕೂಡ ಶೇ.70ರಷ್ಟು ಜನರ ಪುನರ್ವಸತೀಕರಣವಾಗದೆ ಈ ಭಾಗಗಳಲ್ಲಿ ಅಲೆಮಾರಿಗಳಾಗಿ ಅತಂತ್ರ ಜೀವನ ನಡೆಸುತ್ತಿದ್ದಾರೆ. ಇದು ಸಾತ್ಪುರ ಶ್ರೇಣಿಯಲ್ಲಿನ ಚಿತ್ರಣವಾದರೆ, ಇನ್ನೂ ಒಡಿಸ್ಸಾದ ನಿಯಮಗಿರಿ ಪ್ರದೇಶದಲ್ಲೂ ಸಹಿತ ‘ವೇದಾಂತ’ ಎನ್ನುವ ಬಾಕ್ಸೈಟ್ ಮೈನಿಂಗ್ ಕಂಪೆನಿಯನ್ನು ಪ್ರಾರಂಭಿಸುವ ಸಲುವಾಗಿ ಅಲ್ಲಿನ ಮೂಲ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಇತ್ತ ಪಶ್ಚಿಮಘಟ್ಟದ ನೀಲಗಿರಿ ಪ್ರದೇಶಗಳಾದ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಅಭಯಾರಣ್ಯಗಳ ನೆಪದಲ್ಲಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಯಿತು. ಈ ಮೇಲಿನ ಮೂರು ಉದಾಹರಣೆಗಳನ್ನು ಗಮನಿಸಿದಾಗ ಮೊದಲೆರಡು ಅವರ ಕಲ್ಪನೆಯ ‘ಅಭಿವೃದ್ಧಿ’ಗೆ ಸಂಬಂಧಿಸಿದರೆ ಕೊನೆಯದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರಣವನ್ನು ನೀಡಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ನಮಗೆ ಗಿರಿಜನರಿಗೆ ಸಂಬಂಧಿಸಿದ ಸರಕಾರದ ಧೋರಣೆಗಳೆಂತವು ಎನ್ನುವ ಅಂಶ ಸ್ಪಷ್ಟವಾಗಿ ಅರ್ಥವಾಗುತ್ತವೆ. ಹಾಗಾದರೆ ಸರಕಾರದ ಈ ರೀತಿಯ ನಡೆಗಳಿಗೆ ನಿಜವಾದ ಕಾರಣಗಳಾದರೂ ಏನು ಎನ್ನುವುದನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ. ಕಾರಣವಿಷ್ಟೇ, ಕಾನೂನಾತ್ಮಕ ಚೌಕಟ್ಟಿನಲ್ಲಿ ಬರುವ ಅದರ ಅರ್ಥವಿವರಣೆಗಳು ಸರಕಾರಕ್ಕೆ ಈ ರೀತಿಯ ಆದಿವಾಸಿಗಳ ವಿರೋಧಿ ನೀತಿಗಳನ್ನು ಧಾರಾಳವಾಗಿ ಜಾರಿಗೆ ತರುವಲ್ಲಿಯೂ ಕೂಡ ಅವುಗಳು ಪ್ರಮುಖ ಪಾತ್ರವಹಿಸಿವೆ. ಇದರಲ್ಲಿ ಮೊದಲನೆಯದಾಗಿ ಸುಪ್ರೀಂಕೋರ್ಟ್ ಡಿಸೆಂಬರ್ 12, 1997ರಲ್ಲಿ ಗೋದಾವರ್ಮನ್ ಎನ್ನುವ ಪ್ರಕರಣದಲ್ಲಿ ‘ಅರಣ್ಯಭೂಮಿ’ಯ ಕುರಿತ ಅರ್ಥವಿವರಣೆಯನ್ನು ಈ ಕೆಳಗಿನಂತೆ ವಿವರಿಸಿದೆ.

“The term ‘Forest land’ covering in section(of the forest conservation act 1980)will not only include forest as understood in dictionary sense but  also any area recorded as forest in the government records irrespective of the ownership.”

 ಈ ಮೇಲಿನ ಅರ್ಥವಿವರಣೆಯ ಅರಣ್ಯದ ಪರಿಕಲ್ಪನೆಯನ್ನು ಮತ್ತಷ್ಟು ವಿಶಾಲಾರ್ಥದಲ್ಲಿ ಪರಿಗಣಿಸಿ ಆ ಮೂಲಕ ಶಾಸನೀಯ ಕ್ರಮಗಳ ಮೂಲಕ ಅರಣ್ಯ ಮತ್ತು ಸಂಪನ್ಮೂಲಗಳನ್ನು ಕಾಪಾಡುವುದು ಆದ್ಯ ಕರ್ತವ್ಯವೆಂದು ತಿಳಿಸಿತು. ಇದು ಇನ್ನೂ ಮುಂದುವರಿದು ಅರಣ್ಯ ಪ್ರದೇಶಗಳನ್ನು ಮೀಸಲು, ಖಾಸಗಿ, ಸಾಮುದಾಯಿಕ ಹಾಗೂ ಇತರ ಅರಣ್ಯ ಪ್ರದೇಶಗಳೆಂದು ಘೋಷಿಸಿತ್ತು. ಆ ಮೂಲಕ ಸರಕಾರಗಳು ಈ ತೀರ್ಪನ್ನೇ ನೆಪದ ಮಾರ್ಗವನ್ನಾಗಿಟ್ಟುಕೊಂಡು ಇಂದಿನ ದಿಡ್ಡಳ್ಳಿಯೂ ಸೇರಿದಂತೆ ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳ ಹಕ್ಕುಗಳಿಗೆ ಈ ರೀತಿಯ ತೀರ್ಪು ಒಂದು ರೀತಿಯ ಆಘಾತವನ್ನುಂಟು ಮಾಡಿತು. ಕಾರಣ ಸರಕಾರವು ಕೂಡ ಈ ತೀರ್ಪಿನ ಮೂಲಕ ಪರಿಸರ ಮತ್ತು ವನ್ಯಸಂರಕ್ಷಣೆಯ ನೆಪವನ್ನೊಡ್ಡಿ ಅವರನ್ನು ಒಕ್ಕಲೆಬ್ಬಿಸುವ ಕ್ರೂರ ನೀತಿಗಳಿಗೆ ಅಂಟಿಕೊಂಡಿತು.

 ಇದು ಗೋದಾವರ್ಮನ್ ಅವರ ಪ್ರಕರಣದ ಮೂಲಕ ಉಂಟಾದ ಗೊಂದಲವಾದರೆ ಇನ್ನೆರಡು ಪ್ರಕರಣಗಳು ಅದರಲ್ಲೂ ಪ್ರಮುಖವಾಗಿ 1997ರಲ್ಲಿ ಬಂದ ಸಮತಾ ಎನ್ನುವ ಹಾಗೂ 2013ರಲ್ಲಿನ ಒಡಿಸ್ಸಾ ಮೈನಿಂಗ್ ಕಾರ್ಪೊರೇಶನ್ / ಪರಿಸರ ಮಂತ್ರಾಲಯದ ವಿರುದ್ಧದ ಪ್ರಕರಣದಲ್ಲಿನ ತೀರ್ಪುಗಳು ಸ್ವಲ್ಪಮಟ್ಟಿಗೆ ಬುಡಕಟ್ಟು ಜನರ ಹಕ್ಕುಗಳ ಸ್ವಾಯತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಂದಂತವುಗಳು ಮತ್ತು ಗಣಿ ಹಾಗೂ ಇತರ ಉದ್ದೇಶಗಳಿಗಾಗಿ ಹಸ್ತಾಂತರವಾಗುತ್ತಿದ್ದ ಗಿರಿಜನರ ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಐತಿಹಾಸಿಕವಾಗಿ ತೀರ್ಪಿತ್ತು, ಭೂಮಿಯ ಹಸ್ತಾಂತರ ಪ್ರಕ್ರಿಯೆಯನ್ನು ಗ್ರಾಮ ಸಭಾದಂತಹ ವೇದಿಕೆಗಳ ಮೂಲಕ ಒಪ್ಪಿಗೆ ಪಡೆಯಬೇಕೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು. ಇದೊಂದರ್ಥದಲ್ಲಿ ಬುಡಕಟ್ಟು ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದರೂ ಸಹಿತ ವಾಸ್ತವದ ಸಂಗತಿಯೆಂದರೆ ಇಂದಿಗೂ ಕೂಡ ಆದಿವಾಸಿಗಳು ಅತ್ಯಂತ ಅಪಾಯಕಾರಿಯಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಾರಣವಿಷ್ಟೇ ಇಂದು ಸುಮಾರು 10 ರಾಜ್ಯಗಳು ಸಂವಿಧಾನದ 5ನೆಯ ಪರಿಚ್ಛೇದದ ಭಾಗವಾಗಿವೆ. ಅದರಲ್ಲೂ ಈ ಪ್ರದೇಶಗಳೆಲ್ಲವೂ ಸಹಿತ ಹೇರಳವಾದ ಪ್ರಮುಖ ನೈಸರ್ಗಿಕ ಖನಿಜ ಸಂಪನ್ಮೂಲಗಳ ತಾಣಗಳಾಗಿವೆ. ಆದ್ದರಿಂದಲೇ ಇಂದು ಸರಕಾರಗಳು ಖಾಸಗಿ ಮತ್ತು ಕಾರ್ಪೊರೇಟ್ ಕಂಪೆನಿಗಳ ಜೊತೆಗಿನ ವ್ಯಾವಹಾರಿಕ ಹಿತಾಸಕ್ತಿ ಮತ್ತು ಅವರ ಲಾಭಿಗಳಿಗನುಗುಣವಾಗಿ ಇಂದು ಆದಿವಾಸಿಗಳ ಜಮೀನನ್ನು ಆದಿವಾಸಿಗಳಲ್ಲದವರಿಗೆ ಈ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಹಸ್ತಾಂತರ ಮಾಡುವ ಕಾರ್ಯಕ್ಕೆ ಕೈ ಚಾಚಿವೆ. ಅಲ್ಲದೆ ಇದಕ್ಕೆ ಕಾನೂನಾತ್ಮಕವಾಗಿ ಸರಳೀಕರಿಸುವ ನಿಟ್ಟಿನಲ್ಲಿ ಸಂವಿಧಾನದ 5ನೆಯ ಪರಿಚ್ಛೇದವನ್ನು ತಿದ್ದುಪಡಿ ಮಾಡುವ ವಿಧಾನದ ಮೂಲಕ ಈ ಖಾಸಗಿ ಹಿತಾಸಕ್ತಿಗಳಿಗೆ ಸುಲಭವಾಗಿ ಗಿರಿಜನರ ಭೂಮಿಯ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ. ಆದ್ದರಿಂದ ಈ ಮೂಲಕ ಸಂವಿಧಾನದಲ್ಲಿ ನ್ಯಾಯಬದ್ಧವಾಗಿ ದೊರಕಬೇಕಾದ ಹಕ್ಕುಗಳೆಲ್ಲವನ್ನು ಪರ್ಯಾಯ ಹೊಸ ಕಾನೂನುಗಳನ್ನು ಸೃಷ್ಟಿಸುವುದರ ಮೂಲಕ ಅವರ ಹಕ್ಕುಗಳನ್ನು ನಿಶಕ್ತಗೊಳಿಸುವಂತಹ ಪ್ರಕ್ರಿಯೆಗಳು ಕಳೆದೆರಡು ದಶಕಗಳಿಂದ ನಿರಂತರವಾಗಿ ನಡೆಯುತ್ತಲೇ ಇವೆ. ಇವೆಲ್ಲವೂ ಕೂಡ ಉದಾರೀಕರಣ, ಖಾಸಗೀಕರಣ ಮತ್ತು ನಗರೀಕರಣದಂತಹ ಪ್ರಕ್ರಿಯೆಗಳು ಸರಕಾರದ ನೀತಿಗಳಿಗೆ ಒತ್ತಾಸೆಯಾಗಿ ನಿಂತಿರುವುದು ನಮಗೆಲ್ಲಾ ಗೊತ್ತಿರದ ಸಂಗತಿಯೇನಲ್ಲ. ಆದ್ದರಿಂದಲೇ ಕೆಲವು ರಾಜ್ಯಗಳಲ್ಲಿ 6ನೆಯ ಪರಿಚ್ಛೇದದಡಿಯಲ್ಲಿ ಸೇರಿಸಬೇಕೆಂಬ ಬೇಡಿಕೆಗಳಿವೆ, ಕಾರಣ ಈ ಪರಿಚ್ಛೇದದಲ್ಲಿ ಅದರಲ್ಲೂ ಈಶಾನ್ಯ ಭಾರತದಲ್ಲಿ ಬರುವಂತಹ ರಾಜ್ಯಗಳಿಗೆ ಬುಡಕಟ್ಟು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೌನ್ಸಿಲ್‌ಗಳನ್ನು ಸ್ಥಾಪಿಸುವುದರ ಮೂಲಕ ಸ್ವಾಯತ್ತತೆ ಮತ್ತು ಸಂರಕ್ಷಣೆಯನ್ನು ನೀಡಲಾಗಿದೆ.

 ಇನ್ನು ಪ್ರಸ್ತುತ ದಿಡ್ಡಳ್ಳಿಯ ವಿಷಯಕ್ಕೆ ಬರುವುದಾದರೆ ಈಗಾಗಲೇ ಪರಿಸರ ಮತ್ತು ವನ್ಯ ಸಂರಕ್ಷಣೆಯಯ ನೆಪವೊಡ್ಡಿ ಅಲ್ಲಿನ 500ಕ್ಕೂ ಹೆಚ್ಚುಕುಟುಂಬಗಳನ್ನು ಒಕ್ಕಲೆಬ್ಬಿಸಿರುವುದು ಗೊತ್ತಿರುವ ಸಂಗತಿ. ಆದರೆ ವಾಸ್ತವದಲ್ಲಿ ಈ ಸರಕಾರಗಳಿಗೆ ಇದ್ದಕಿದ್ದಂತೆ ಬಂದಿರುವ ಅಥವಾ ಬರುತ್ತಿರುವ ಪರಿಸರ ಸಂರಕ್ಷಣೆಯ ಕಾಳಜಿಯ ವಿಚಾರದ ಹಿಂದಿರುವ ರಾಜಕಾರಣವನ್ನು ತಿಳಿಯುವುದು ಇಂದಿನ ತುರ್ತಿನ ಸಂಗತಿಯಾಗಿದೆ.

    ಕಾರಣವಿಷ್ಟೇ, ಪಶ್ಚಿಮಘಟ್ಟಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2011ರಲ್ಲಿ ಮಾಧವ ಗಾಡ್ಗೀಳ್‌ರವರ ನೇತೃತ್ವದ ಸಮಿತಿಯು ಅಗಸ್ಟ್ 31, 2011ರಲ್ಲಿ ಭಾರತ ಸರಕಾರಕ್ಕೆ ತನ್ನ ವರದಿ ಯನ್ನು ಸಲ್ಲಿಸಿತು. ಈ ವರದಿಯಲ್ಲಿ ಪ್ರಮುಖವಾಗಿ ಅರಣ್ಯ ಪ್ರದೇಶಗಳನ್ನು ವಲಯ 1,2,3 ಎನ್ನುವಂತೆ ಆದ್ಯತಾ ಕ್ರಮವಾಗಿ ವಿಂಗಡಿಸಲಾಯಿತು. ವಲಯ 1ರಲ್ಲಿ ಗಣಿ ಕೈಗಾರಿಕೆ, ವಿದ್ಯುತ್ ಶಕ್ತಿ ಸ್ಥಾವರಗಳು ಹಾಗೂ ಅಣೆಕಟ್ಟುಗಳನ್ನು ಕಟ್ಟುವ ಯೋಜನೆಗಳಿಗೆ ನಿಷೇಧಾಜ್ಞೆ ತರಲಾಯಿತು (ಮುಖ್ಯವಾಗಿ ಇದರಲ್ಲಿ ಕೇರಳದ ಅಥಿರಪಲ್ಲಿ ಹಾಗೂ ಕರ್ನಾಟಕದ ಗುಂಡ್ಯ ಹೈಡೆಲ್ ಪವರ್ ಪ್ರೊಜೆಕ್ಟ್ ಗಳು ಈ ವಲಯದಲ್ಲಿ ಬರುತ್ತಿದ್ದವು ) ಮತ್ತು ಹೆಚ್ಚಿನ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ಅಂದರೆ ಗ್ರಾಮ ಸಭಾದಿಂದ ಉನ್ನತ ಸರಕಾರಿಮಟ್ಟದವರೆಗಿನ ಆಟಠಿಠಿಟಞ ಟ ಟ  ವಿಧಾನವನ್ನು ಅನುಸರಿಸಬೇಕೆಂದು ಹೇಳಿದ್ದಲ್ಲದೆ ಇನ್ನೂ ಮುಂದುವರಿದು ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದ ಪ್ರಾಧಿಕಾರವನ್ನು ಪರಿಸರ ಮಂತ್ರಾಲಯದ ಮೂಲಕ ಸ್ಥಾಪಿಸಬೇಕೆಂದು ವರದಿ ನೀಡಿತು. ಇನ್ನು ಈ ವರದಿಯಲ್ಲಿನ ಅಂಶಗಳಿಂದ ಕಂಗಾಲಾದ ಸರಕಾರ ವರದಿಯನ್ನು ಗೌಪ್ಯವಾಗಿರಿಸಿ ಕೊಂಡಿತ್ತು. ಆದರೆ ದಿಲ್ಲಿ ಹೈಕೋರ್ಟ್‌ನ ಸೂಚನೆಯ ನಂತರವಷ್ಟೇ ಈ ವರದಿಯನ್ನು ಸಾರ್ವಜನಿಕವಾಗಿ ತೆರೆಡಿದಲಾಯಿತು....!!!

  ಕಾರಣವಿಷ್ಟೇ, ಈ ವರದಿಯಲ್ಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಜವಾದ ಅರ್ಥದಲ್ಲಿ ಅದು ಪರಿಸರಕ್ಕೆ ಸಂಬಂಧಿಸಿದ ಕಾಳಜಿಯನ್ನು ತೋರಿಸಿತ್ತು. ಆದರೆ ಸರಕಾರ ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಲಾಬಿಗಳಿಂದಾಗಿ ಈ ವರದಿಯನ್ನು ಜಾರಿಗೆ ತರದೆ ಇನ್ನೊಂದು ಹೊಸ ಸಮಿತಿಯನ್ನು ಒಂದರ್ಥದಲ್ಲಿ ಸರಳೀಕೃತ ಅಥವಾ ಈ ಬಹುರಾಷ್ಟ್ರೀಯ ಕಂಪೆನಿಗಳ ವ್ಯವಹಾರಿಕ ಮತ್ತು ವಾಣಿಜ್ಯೋದ್ಯಮಿಕ ಹಿತಾಸಕ್ತಿಯನ್ನು ಈಡೇರಿಸುವ ನಿಟ್ಟಿನಲ್ಲಿ ಕಸ್ತೂರಿರಂಗನ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಈ ಮೇಲಿನ ಸಮಿತಿಗಿಂತ ಭಿನ್ನವಾದ ಮತ್ತು ಸರಳ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿತು.

ಈ ಮೂಲಕವಾಗಿ ನಾವು ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ ಪರಿಸರ ಸಂರಕ್ಷಣೆ ಎನ್ನುವುದು ಆದಿವಾಸಿಗಳ ವಿಷಯ ಬಂದಾಗ ಒಂದು ಕುಂಟು ನೆಪವಾಗಿ ತೋರುತ್ತದೆ. ಆದ್ದರಿಂದ ಅಂತಹ ನೆಪಗಳನ್ನೇ ಕಾನೂನಾತ್ಮಕವಾಗಿರುವ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ನಿರಂತರವಾಗಿ ಗಿರಿಜನರನ್ನು, ಉದ್ಯಾನವನಗಳು, ಮೀಸಲು ಅರಣ್ಯಪ್ರದೇಶ, ಗಿರಿಧಾಮಗಳು ಎನ್ನುವ ವಿವಿಧ ನಮೂನೆಯ ವರ್ಗೀಕರಣದ ಮೂಲಕ ಸರಕಾರಗಳು ಅವರನ್ನು ಒಕ್ಕಲೆಬ್ಬಿಸುತ್ತಿವೆ. ಈ ಒಕ್ಕಲೆಬ್ಬಿಸುವಿಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದೆ ಕಾಲಾಂತರದಲ್ಲಿ ಗಿರಿಜನರಿಗೆ ಪುನರ್ವಸತೀಕರಣ ಹಾಗೂ ಇತರ ಸೌಲಭ್ಯಗಳನ್ನು ತಿರಸ್ಕರಿಸಲಾಗುತ್ತಿದೆ. ಇದರ ಮೂಲಕ ಗಿರಿಜನರ ಮೇಲಾಗುವ ಪರಿಣಾಮಗಳಂತೂ ಚಿಂತಾಜನಕವೆನಿಸುವಷ್ಟು ಕಷ್ಟಕರವಾಗಿವೆ. ಸಾಂವಿಧಾನಿಕವಾಗಿ ದೊರಕಬೇಕಾದ ಹಕ್ಕುಗಳು ಮತ್ತು ಸೌಲಭ್ಯಗಳಿಗೆ ಪ್ರತಿಮಾರ್ಗವಾಗಿ ಪರ್ಯಾಯ ಹೊಸ ಕಾನೂನುಗಳನ್ನು ಸೃಷ್ಟಿಸುವುದರ ಮೂಲಕ ನ್ಯಾಯಯುತವಾಗಿ ದೊರಕಬೇಕಾಗಿದ್ದ ಈ ಎಲ್ಲ ಹಕ್ಕುಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗುತ್ತಿದೆ. ಇನ್ನು ಈ ಅರಣ್ಯದ ಸಮತೋಲನ ಮತ್ತು ಸುಸ್ಥಿರತೆಗೆ ಗಿರಿಜನರ ಪಾತ್ರವು ಅತ್ಯಂತ ಗಮನಾರ್ಹವಾದುದು. ಆದರೆ ಇವೆಲ್ಲವುಗಳನ್ನು ಮರೆತಿರುವ ಸರಕಾರಗಳು ಮಾತ್ರ ಪ್ರಜಾಸತ್ತಾತ್ಮಕವಾಗಿ ಶಾಂತಿಯುತ ಹೋರಾಟಗಳ ಮೂಲಕ ಕೇಳಹೊರಟಿರುವ ಹಕ್ಕುಗಳನ್ನು ಹತ್ತಿಕ್ಕುವ ಕೆಲಸವನ್ನು ಬಹಳ ಸಂಘಟಿತವಾಗಿ ನಿರ್ವಹಿಸುತ್ತಿವೆ. ಇನ್ನೂ ಇದಕ್ಕೆ ಪೂರಕವಾಗಿರುವ ನಿದರ್ಶನಗಳನ್ನು ನೋಡುವುದಾದರೆ ಅದು ದಿಲ್ಲಿ ವಿವಿಯ ಪ್ರಾಧ್ಯಾಪಕರಾದ ಜಿ.ಎನ್.ಸಾಯಿಬಾಬಾ ಮತ್ತು ವೈದ್ಯರು ಹಾಗೂ ಪಿಯುಸಿಎಲ್‌ನ ನಾಯಕರಾದ ಬಿನಾಯಕ್ ಸೇನ್ ಮತ್ತು ಚತ್ತೀಸಗಡದಲ್ಲಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸೋನಿ ಸೂರಿ ಮತ್ತು ಇನ್ನು ಇತ್ತೀಚೆಗೆ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಮಾನವಶಾಸ್ತ್ರಜ್ಞೆ ನಂದಿನಿ ಸುಂದರ್ ಇವರೆಲ್ಲರೂ ಸಹ ತಾವಿರುವ ಸೀಮಿತ ವಲಯಗಳಾಚೆಗೂ ಗಿರಿಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವವರು. ಅದ್ದರಿಂದ ಸರಕಾರ ಈ ಎಲ್ಲ ಕೆಲಸಗಳಿಗೆ ಧ್ವನಿಯಾಗುವುದಲ್ಲದೆ ಅವರ ಕೆಲಸಗಳನ್ನು ಬೆನ್ನು ತಟ್ಟಿ ಗೌರವಿಸಬೇಕಾಗಿತ್ತು. ಆದರೆ ದುರಾದೃಷ್ಟದ ಸಂಗತಿಯೆಂದರೆ ಅವರನ್ನು ನಕ್ಸಲೀಯರು ಹಾಗೂ ಮಾವೋವಾದಿಗಳ ಪರವಿರುವವರಲ್ಲದೆ ಉದ್ದೇಶಪೂರ್ವಕವಾಗಿ ಗಿರಿಜನರ ಮೇಲೆ ಅಂತಹ ವಿಚಾರಗಳನ್ನು ಬಿತ್ತಲಾಗುತ್ತಿದೆ ಎನ್ನುವ ಸುಳ್ಳು ಆರೋಪಗಳ ಮೂಲಕ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೇರಲಾಗುತ್ತಿದೆ.

ಇನ್ನು ದಿಡ್ಡಳ್ಳಿಯ ಸಮಸ್ಯೆಯಂತೂ ಖಂಡಿತ ತಕ್ಷಣದಲ್ಲ. ಕಾರಣವಿಷ್ಟೇ ಇದಕ್ಕೂ ಮೊದಲು ಬಂಡೀಪುರ ಮತ್ತು ನಾಗರಹೊಳೆಯ ಅಭಯಾರಣ್ಯದ ವಿಷಯವಾಗಿ ಈಗಾಗಲೇ ಸಾವಿರಾರು ಪಾರಂಪರಿಕ ಆದಿವಾಸಿಗಳನ್ನು ಕಾಡಿನಿಂದ ಹೊರದಬ್ಬಲಾಗಿದೆ. ಅಂತಹ ಜನರಿಗೆ ಯಾವುದೇ ರೀತಿಯ ಪುನರ್ವಸತೀಕರಣ ಹಾಗೂ ಭೂ ಹಕ್ಕುಗಳನ್ನು ನೀಡದೆ ಇರುವುದನ್ನು ಗಮನಿಸಬಹುದು. ಇಂದು ಅಂತಹ ಜನರೇ ಕೊಡಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಫಿ ಎಸ್ಟೇಟ್ ಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಎಲ್ಲ ಹಿನ್ನಲೆಗಳೊಟ್ಟಿಗೆ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಬುಡಕಟ್ಟು ಕೃಷಿಕರ ಸಂಘ ಮತ್ತು ರಾಜ್ಯ ಮೂಲ ನಿವಾಸಿ ವೇದಿಕೆಯ ಜಂಟಿ ಸಾರಥ್ಯದಲ್ಲಿ ತಾಜ್ ಗ್ರೂಪ್‌ನಂತಹ ಖಾಸಗಿ ಸಂಸ್ಥೆಗಳು 1997ರಲ್ಲಿ ನಾಗರಹೊಳೆ ಮತ್ತು ಬಂಡೀಪುರದಂತಹ ಅರಣ್ಯ ಪ್ರದೇಶಗಳಲ್ಲಿ ಪಂಚತಾರಾ ಹೋಟೆಲ್ ಹಾಗೂ ರೆಸಾರ್ಟ್‌ಗಳನ್ನು ಸ್ಥಾಪಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಮುಂದೆ 1999ರಲ್ಲಿ ಈಛಿಛ್ಝಿಟಞಛ್ಞಿಠಿ ಠಿಜ್ಟಟ್ಠಜ ಉಛ್ಠ್ಚಠಿಜಿಟ್ಞ ಎನ್ನುವ ಗಿರಿಜನರ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರಕಾರೇತರ ಸಂಸ್ಥೆಯೊಂದು ಬುಡಕಟ್ಟು ಕೃಷಿಕರ ಸಂಘದ ಜೊತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಗಿರಿಜನರ ಸ್ಥಳಾಂತರವನ್ನು ವಿರೋಧಿಸಿ ಒಂದು ಅರ್ಜಿಯನ್ನು ಸಲ್ಲಿಸಿತು. ಈ ಅರ್ಜಿಯನ್ನು ಪರಿಶೀಲಿಸಿ ಪರಿಗಣಿಸಿದ ಹೈಕೋರ್ಟ್ 2004ರಲ್ಲಿ ತ್ರಿಸದಸ್ಯರನ್ನೊಳಗೊಂಡ ಮೈಸೂರು ವಿವಿಯ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ಮುಝಾಫರ್ ಅಸ್ಸಾದಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯಲ್ಲಿನ ಇತರ ಸದಸ್ಯರೆಂದರೆ ಬುಡಕಟ್ಟು ಮಹಿಳೆ ಜಾಜಿ ತಿಮ್ಮಯ್ಯ ಮತ್ತು ಅರಣ್ಯಾಧಿಕಾರಿಗಳಾದ ಸಿ. ಶ್ರೀನಿವಾಸನ್.

ಈ ಸಮಿತಿಯು ಪ್ರಮುಖವಾಗಿ ಈ ರಾಷ್ಟ್ರೀಯ ಉದ್ಯಾನವನಗಳಿಂದ ಸ್ಥಳಾಂತರಗೊಂಡಿದ್ದ ಬುಡಕಟ್ಟು ಜನರನ್ನು ಅವರ ನೂರಾರು ಹಾಡಿಗಳಿಗೆ ಸ್ವತಃ ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಈ ಪ್ರದೇಶಗಳಲ್ಲಿ ತಾಲೂಕುವಾರು ಸ್ಥಳಾಂತರಗೊಂಡಿದ್ದ ಗಿರಿಜನರ ಅಂಕಿಅಂಶಗಳನ್ನು ಕಲೆಹಾಕಿತು. ಇಲ್ಲಿ ಹಂಚಿಕೆಯಾಗಿರುವ ಜನಸಂಖ್ಯೆಯ ಪೈಕಿ ಪ್ರಮುಖವಾಗಿ ಜೇನುಕುರುಬ, ಬೆಟ್ಟಕುರುಬ, ಸೋಲಿಗ, ಯರವಾ, ಪಣಿ, ಪಂಜರಿ ಈ ಒಕ್ಕಲೆಬ್ಬಸುವಿಕೆಯಿಂದ ಸ್ಥಳಾಂತರಗೊಂಡ ಬುಡಕಟ್ಟು ಸಮುದಾಯಗಳೆಂದು ವರದಿ ನೀಡಿತು. ಅಲ್ಲದೆ ಮುಂದೆ ಈ ಸಮಿತಿಯು 130 ಪುಟಗಳನ್ನೋಳಗೊಂಡ ರಾಜೀವಗಾಂಧಿ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದಲ್ಲಿನ ಗಿರಿಜನರ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು 36 ಶಿಫಾರಸುಗಳನ್ನು ಸರಕಾರಕ್ಕೆ 2014 ಜುಲೈನಲ್ಲಿ ತನ್ನ ಅಂತಿಮ ವರದಿಯ ರೂಪದಲ್ಲಿ ಸಲ್ಲಿಸಿತು. ಆದರೆ ಈ ವರದಿಯಲ್ಲಿನ ಅಂಶಗಳನ್ನು ಜಾರಿಗೆ ತರುವ ಮುನ್ನವೇ ದಿಡ್ಡಳ್ಳಿಯಂತಹ ಮತ್ತೊಂದು ಹೊಸ ಸಮಸ್ಯೆಯನ್ನು ಸರಕಾರ ಸೃಷ್ಟಿಸಿರುವುದು ಆದಿವಾಸಿಗಳಿಗೆ ಮತ್ತೊಂದು ಆಘಾತಕಾರಿ ಹೊಡೆತ ನೀಡಿದೆ.

ಇನ್ನು ಪ್ರಮುಖವಾಗಿ ಈ ಶಿಫಾರಸುಗಳ ವಿಚಾರಕ್ಕೆ ಬರುವುದಾದರೆ ಇದರಲ್ಲಿ ಮುಖ್ಯವಾಗಿ 

♦ ಆದಿವಾಸಿಗಳ ಅಭಿವೃದ್ದಿ ನಿಟ್ಟಿನಲ್ಲಿ ವಿಶೇಷ ಪ್ರತ್ಯೇಕ ಪ್ಯಾಕೇಜ್ ಘೋಷಿಸುವುದು.

♦ ಗಿರಿಜನರಿಗೆ ಒಳಮೀಸಲಾತಿಯ ಹಂಚಿಕೆ. ಪೇಸಾ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವುದು.

♦ ಆದಿವಾಸಿಗಳ ವಿಶ್ವವಿದ್ಯಾಲಯವನ್ನು ತೆರೆಯುವುದು. ನವೊದಯ ಶಾಲೆಗಳ ಸ್ಥಾಪನೆ. ಗಿರಿಜನರ ಕ್ಲಿನಿಕ್‌ಗಳ ಸ್ಥಾಪನೆ.

♦ ಗಿರಿಜನರ ಮಹಿಳೆಯರಿಗೆ ರಾಜಕೀಯ ಮೀಸಲಾತಿಯನ್ನು ನೀಡುವುದು.

♦ ಅರಣ್ಯ ಗ್ರಾಮಗಳೆಂದು ಘೋಷಿಸುವುದು.

♦ ಬೌದ್ಧಿ

Writer - ಮಂಜುನಾಥ ನರಗುಂದ

contributor

Editor - ಮಂಜುನಾಥ ನರಗುಂದ

contributor

Similar News