‘‘ಆತ ಮನೆಯಲ್ಲಿ ಪ್ಯಾಂಟಿನ ಬದಲು ಸೀರೆಯನ್ನು ಉಡುತ್ತಾನೆ ’’
ಬೆಂಗಳೂರು,ಡಿ.27: ‘‘ನನ್ನ ಗಂಡ ಮಹಿಳೆಯರಂತೆ ಉಡುಪು ತೊಡುತ್ತಾನೆ ಮತ್ತು ಮಹಿಳೆಯರಂತೆ ವರ್ತಿಸುತ್ತಾನೆ. ನಾನು ಬೇಸತ್ತು ಹೋಗಿದ್ದೇನೆ. ದಯವಿಟ್ಟು ನನ್ನನ್ನು ಅವನಿಂದ ಪ್ರತ್ಯೇಕಿಸಿ ಈ ನರಕದಿಂದ ಪಾರು ಮಾಡಿ ’’ ಇದು ನಗರದ ಇಂದಿರಾ ನಗರದ 29ರ ಹರೆಯದ ಮಹಿಳೆಯೋರ್ವಳು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತೋಡಿಕೊಂಡಿರುವ ಅಳಲು.
‘‘ಆತ ಸೀರೆ ಉಡುವುದನ್ನು ಇಷ್ಟ ಪಡುತ್ತಾನೆ. ನನ್ನ ಮೇಕಪ್ ಬಳಸುತ್ತಾನೆ ಮತ್ತು ರಾತ್ರಿ ವೇಳೆ ನನ್ನ ಒಳಉಡುಪುಗಳನ್ನು ಧರಿಸುತ್ತಾನೆ ’’ ಎಂದು ಬನ್ನೇರುಘಟ್ಟ ರಸ್ತೆಯ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿರುವ ಅನಿತಾ(ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾಳೆ.
ತಾವಿಬ್ಬರೂ ಮದುವೆಯಾಗಿ ಒಂದು ವರ್ಷವಾಗಿದೆ. ಆದರೆ ಈವರೆಗೂ ತಮ್ಮ ನಡುವೆ ಲೈಂಗಿಕ ಸಂಪರ್ಕ ನಡೆದಿಲ್ಲ. ತನ್ನ ಗಂಡನೂ ಐಟಿ ಕಂಪನಿಯಲ್ಲಿ ದುಡಿಯುತ್ತಿದ್ದು, ಆತ ನಪುಂಸಕನಾಗಿದ್ದಾನೆ ಮತ್ತು ಹೆಣ್ಣಿನಂತೆ ವರ್ತಿಸುತ್ತಾನೆ ಎಂದು ಆಕೆ ದೂರಿಕೊಂಡಿದ್ದಾಳೆ.
ಅನಿತಾಳ ಗಂಡ ನವೀನ್‌ನನ್ನು ಆಕೆಯ ಹೆತ್ತವರೇ ಹುಡುಕಿದ್ದರು. ವರ ಒಳ್ಳೆಯವನು ಎಂದುಕೊಂಡ ಅವರು ಬೆಂಗಳೂರಿನಲ್ಲಿ ಮದುವೆಯನ್ನು ಮಾಡಿ ಜವಾಬ್ದಾರಿಯಿಂದ ಮುಕ್ತರಾಗಿದ್ದರು. ಆದರೆ ಮಗಳು ಮಾತ್ರ ಸುಖವನ್ನು ಕಂಡಿಲ್ಲ.
ಮೊದಲ ರಾತ್ರಿಯಿಂದಲೇ ನವೀನ ಹೆಣ್ಣಿನಂತೆ ವರ್ತಿಸುತ್ತಿದ್ದ. ಆತ ರಾತ್ರಿ ವೇಳೆ ಸೀರೆಯನ್ನು ಧರಿಸಲು ಇಷ್ಟಪಡುತ್ತಿದ್ದ ಎಂದು ನಗರದ ಪೊಲೀಸ್ ಇಲಾಖೆಯು ನಡೆಸುತ್ತಿರುವ ಮಹಿಳಾ ಸಹಾಯವಾಣಿಯ ಸೀನಿಯರ್ ಕೌನ್ಸೆಲರ್ ಸರಸ್ವತಿ ಹೇಳಿದ್ದಾರೆ.
ದಂಪತಿಗೆ ಈಗ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ನವೀನ್ ತನ್ನೊಂದಿಗೆ ‘ಲೆಸ್ಬಿಯನ್ ಸೆಕ್ಸ್(ಮಹಿಳೆಯರ ಸಲಿಂಗರತಿ)’ನಡೆಸುವುದರಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾನೆ ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದಾಳೆ.
ಗಂಡನ ಷಂಡತನದಿಂದಾಗಿ ವಿವಾಹದ ಉದ್ದೇಶ ನೆರವೇರಿಲ್ಲ. ಆತ ಹೆಣ್ಣಿನಂತೆ ವರ್ತಿಸುತ್ತಾನೆ. ಹಗಲಲ್ಲಿ ಕೆಲಸಕ್ಕೆ ಹೋಗುವ ಆತ ಸಂಜೆಮನೆಗೆ ಮರಳಿದ ಬಳಿಕ ಸೀರೆಯನ್ನು ಉಟ್ಟುಕೊಂಡಿರುತ್ತಾನೆ. ಆತನೊಂದಿಗೆ ಇನ್ನು ಜೀವನ ಸಾಧ್ಯವಿಲ್ಲ ಎಂದು ಅನಿತಾ ಅಳಲು ತೋಡಿಕೊಂಡಿದ್ದಾಳೆ. ಅಂದ ಹಾಗೆ ನವೀನ ಅನಿತಾಳ ಬದುಕಿನಿಂದ ದೂರವಾಗಲು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.