×
Ad

ಕೆ. ಸದಾಶಿವ ಹೊಳ್ಳ

Update: 2016-12-27 22:42 IST

 ಸುರತ್ಕಲ್, ಡಿ.27: ಯಕ್ಷಗಾನ ಹಿಮ್ಮೇಳ ಕಲಾವಿದ ಸುರತ್ಕಲ್ ತಡಂಬೈಲ್ ನಿವಾಸಿ ಕೆ. ಸದಾಶಿವ ಹೊಳ್ಳ(55) ಹೃದಯಾಘಾತದಿಂದ ಡಿ.26 ರಂದು ನಿಧನ ಹೊಂದಿದರು.

ಪ್ರಸಿದ್ಧ ಚಂಡೆವಾದಕರಾಗಿರುವ ಇವರು, ಯಕ್ಷಗಾನ ತಾಳಮದ್ದಳೆ ಹಾಗೂ ಯಕ್ಷಗಾನ ಬಯಲಾಟಗಳಲ್ಲಿ ಹವ್ಯಾಸಿ ಚಂಡೆವಾದಕರಾಗಿ ಗುರುತಿಸಿಕೊಂಡಿದ್ದರು.

 ಸಂಘ ಸಂಸ್ಥೆಗಳಲ್ಲಿ ಯಕ್ಷಗಾನ ಕಲೆಯ ಬೆಳವಣಿಗೆಗೆ ನಿಶ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಇವರು, ಬಿಎಎಸ್‌ಎ್ ಸಂಸ್ಥೆಯಲ್ಲಿ ಗುತ್ತಿಗೆ ನೆಲೆಯಲ್ಲಿ ಉದ್ಯೋಗದಲ್ಲಿದ್ದರು. ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News