ಕುಂಬಳಕಾಯಿ......ಇದು ಅಂತಿಂಥಹ ಕಾಯಿಯಲ್ಲ!

Update: 2017-01-06 11:38 GMT

ಕುಂಬಳಕಾಯಿ ವ್ಯಾಪಕವಾಗಿ ಬೆಳೆಯಲಾಗುವ ತರಕಾರಿಗಳಲ್ಲೊಂದಾಗಿದ್ದು, ಪ್ರಮುಖ ಆ್ಯಂಟಿ ಆಕ್ಸಿಡಂಟ್‌ಗಳು ಮತ್ತು ವಿಟಾಮಿನ್‌ಗಳ ಆಗರವಾಗಿದೆ. ಮನೆಯ ಹಿತ್ತಿಲಲ್ಲಿ ಬಳ್ಳಿಯಲ್ಲಿ ಬೆಳೆಯುವ ಈ ಬಡ ತರಕಾರಿ ಕಡಿಮೆ ಕ್ಯಾಲೊರಿಗಳ ಜೊತೆಗೆ ಹೇರಳ ವಿಟಾಮಿನ್ ಎ ಹಾಗೂ ಲುಟೆನ್, ಕ್ಸಾಂತಿನ್ ಮತ್ತು ಕ್ಯಾರೊಟಿನ್‌ಗಳಂತಹ ಫ್ಲಾವನಾಯ್ಡಾ ಪಾಲಿ-ಫಿನೊಲಿಕ್ ಆ್ಯಂಟಿ ಆಕ್ಸಿಡಂಟ್‌ಗಳನ್ನೊಳಗೊಂಡಿದೆ.

ಸೌತೆಯಂತಹ ಇತರ ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ತರಕಾರಿಗಳಂತೆ ಕುಂಂಬಳ ಕೂಡ ಬಳ್ಳಿಯಲ್ಲಿ ಬೆಳೆಯುತ್ತದೆ. ವಿಶ್ವಾದ್ಯಂತ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ.

ಕುಂಬಳಕಾಯಿ ಆಕಾರ,ಗಾತ್ರ ಮತ್ತು ಬಣ್ಣಗಳಲ್ಲಿ ವಿಭಿನ್ನ ಮಾದರಿಗಳಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಕಿತ್ತಳೆ ಅಥವಾ ಹಳದಿ ಸಿಪ್ಪೆಯನ್ನು ಹೊಂದಿರುತ್ತದೆಯಾದರೂ ಕೆಲವು ಮಾದರಿಗಳು ಕಡು ಇಲ್ಲವೇ ತಿಳಿ ಹಸಿರು,ಕಂದು,ಬಿಳಿ, ಕೆಂಪು ಮತ್ತು ಬೂದು ಬಣ್ಣಗಳನ್ನು ಹೊಂದಿರುತ್ತವೆ. ಕುಂಬಳಕಾಯಿಯ ಸಿಪ್ಪೆ ಮತ್ತು ತಿರುಳಿನಲ್ಲಿರುವ ಹಳದಿ-ಕಿತ್ತಳೆ ಪಿಗ್ಮೆಂಟ್ ಅಥವಾ ವರ್ಣದ್ರವ್ಯಗಳು ಅವುಗಳ ಬಣ್ಣಗಳ ಮೇಲೆ ಪ್ರಭಾವ ಹೊಂದಿರುತ್ತವೆ.

ಕುಂಬಳ ಆರೋಗ್ಯಕ್ಕೆ ಹೇಗೆ ಸಹಕಾರಿ?

  ಕುಂಬಳಕಾಯಿ ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿ ಗಳಲ್ಲೊಂದಾಗಿದೆ. ಪ್ರತಿ 100 ಗ್ರಾಮ್‌ನಲ್ಲಿ ಕೇವಲ 26 ಕ್ಯಾಲೊರಿಗಳಿವೆ. ಕೊಬ್ಬು ಅಥವಾ ಕೊಲೆಸ್ಟರಾಲ್ ಇದರಲ್ಲಿಲ್ಲ. ನಾರಿನಂಶ,ಆ್ಯಂಟಿ ಆಕ್ಸಿಡಂಟ್‌ಗಳು,ಖನಿಜಗಳು ಮತ್ತು ವಿಟಾಮಿನ್‌ಗಳನ್ನು ಸಮೃದ್ಧವಾಗಿ ಒಳಗೊಂಡಿದೆ.

ಕೊಲೆಸ್ಟರಾಲ್ ನಿಯಂತ್ರಣ ಮತ್ತು ಶರೀರದ ತೂಕ ಕಡಿಮೆ ಮಾಡಿಕೊಳ್ಳಲು ವೈದ್ಯರು ಶಿಫಾರಸು ಮಾಡುವ ತರಕಾರಿಗಳಲ್ಲಿ ಕುಂಬಳಕಾಯಿಯೂ ಒಂದಾಗಿದೆ.

 ಕುಂಬಳಕಾಯಿ ವಿಟಾಮಿನ್ ಎ,ವಿಟಾಮಿನ್ ಸಿ ಮತ್ತು ವಿಟಮಿನ್ ಇತ್ಯಾದಿ ಹಲವಾರು ಆ್ಯಂಟಿ ಆಕ್ಸಿಡಂಟ್ ವಿಟಾಮಿನ್‌ಗಳ ಗಣಿಯಾಗಿದೆ.

ಪ್ರತಿ 100 ಗ್ರಾಮ್‌ನಲ್ಲಿ 7384 ಮಿ.ಗ್ರಾಂ ಪ್ರಮಾಣದೊಂದಿಗೆ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ವಿಟಾಮಿನ್-ಎ ಹೊಂದಿರುವ ಕುಕುರ್ಬಿಟೇಸಿ ಕುಟುಂಬದ ತರಕಾರಿ ಗಳಲ್ಲೊಂದಾಗಿರುವ ಕುಂಬಳಕಾಯಿ ನಮ್ಮ ದೈನಂದಿನ ಅಗತ್ಯದ ಶೇ.246ರಷ್ಟು ವಿಟಾಮಿನ್-ಎ ಅನ್ನು ಒದಗಿಸುತ್ತದೆ. ವಿಟಾಮಿನ್-ಎ ಶಕ್ತಿಶಾಲಿ ನೈಸರ್ಗಿಕ ವಿಟಾಮಿನ್ ಆಗಿದ್ದು, ಚರ್ಮ ಮತ್ತು ಶರೀರದೊಳಗಿನ ಲೋಳೆಯಂತಹ ದ್ರಾವಣಗಳ ಸಮಗ್ರತೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ.

ವಿಟಾಮಿನ್-ಎ ಅನ್ನು ಸಮೃದ್ಧವಾಗಿ ಹೊಂದಿರುವ ನೈಸರ್ಗಿಕ ಆಹಾರ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ.  ಕುಂಬಳಕಾಯಿ ಬೀಟಾ ಕ್ಯಾರೊಟಿನ್‌ಗಳು,ಕ್ರಿಪ್ಟೊಕ್ಸಾಂತಿನ್,ಲುಟೆನ್ ಮತ್ತು ಝೀ-ಕ್ಸಾಂತಿನ್‌ನಂತಹ ಹಲವಾರು ಪಾಲಿ-ಫಿನೊಲಿಕ್ ಫ್ಲಾವನಾಯ್ಡಾ ಸಂಯುಕ್ತಗಳ ಅತ್ಯುತ್ತಮ ಮೂಲವಾಗಿದೆ.

ಕ್ಯಾರೊಟಿನ್‌ಗಳು ಶರೀರದೊಳಗೆ ವಿಟಾಮಿನ್-ಎ ಆಗಿ ಪರಿವರ್ತನೆಗೊಳ್ಳುತ್ತವೆ. ಝೀ-ಕ್ಸಾಂತಿನ್ ಕಣ್ಣಿನ ರೆಟಿನಾಕ್ಕೆ ಅಲ್ಟ್ರಾ-ವಯಲೆಟ್ ಕಿರಣಗಳಿಂದ ರಕ್ಷಣೆಯನ್ನು ನೀಡುವ ನೈಸರ್ಗಿಕ ಆ್ಯಂಟಿ ಆಕ್ಸಿಡಂಟ್ ಆಗಿದೆ.

ಫೊಲೇಟ್‌ಗಳು,ನಿಯಾಸಿನ್,ವಿಟಾಮಿನ್ ಬಿ-6,ಥಿಯಾಮಿನ್ ಮತ್ತು ಪ್ಯಾಂಟೊಥೆನಿಕ್ ಆ್ಯಸಿಡ್‌ನಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ಕುಂಬಳಕಾಯಿ,ತಾಮ್ರ,ಕ್ಯಾಲ್ಸಿಯಂ,ಪೊಟ್ಯಾಶಿಯಂ ಮತ್ತು ರಂಜಕದಂತಹ ಖನಿಜಗಳನ್ನೂ ಹೇರಳವಾಗಿ ಒಳಗೊಂಡಿದೆ.

ಕುಂಬಳಕಾಯಿ ಬೀಜಗಳು ನಾರಿನಂಶ ಮತ್ತು ಮೊನೊ ಸ್ಯಾಚ್ಯುರೇಟೆಡ್ ಫ್ಯಾಟಿ ಆ್ಯಸಿಡ್‌ಗಳ ಅತ್ಯುತ್ತಮ ಮೂಲವಾಗಿದ್ದು, ಹೃದಯದ ಅರೋಗ್ಯಕ್ಕೆ ತುಂಬ ಒಳ್ಳೆಯದು. ಜೊತೆಗೆ ಪ್ರೋಟೀನ್,ಖನಿಜಗಳು ಮತ್ತು ಆರೋಗ್ಯಕ್ಕೆ ಲಾಭಕಾರಿಯಾದ ವಿಟಾಮಿನ್‌ಗಳನ್ನೂ ಬೀಜಗಳು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News