ವೆಂಕಟರಮಣ ಗೌಡ
Update: 2017-01-07 00:14 IST
ಬೆಳ್ತಂಗಡಿ, ಜ.6: ಬೆಳ್ತಂಗಡಿ ಹಳೇಕೋಟೆ ವಾಣಿ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಬೆಳಾಲು ಗ್ರಾಮದ ಕೈಕುರೆ ವೆಂಕಟರಮಣ ಗೌಡ(51) ಶುಕ್ರವಾರ ಅಲ್ಪಕಾಲದ ಅಸ್ವಾಸ್ಥದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೂಲತಃ ಪುತ್ತೂರು ತಾಲೂಕಿನ ಮರ್ಧಾಳದವರಾಗಿದ್ದ ಇವರು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾಗಿ, ಪೋಷಕರಾಗಿ, ಉಜಿರೆ ರಬ್ಬರ್ ಸೊಸೈಟಿಯ ನಿರ್ದೇಶಕರಾಗಿ, ಬೆಳಾಲು ಶ್ರೀಮಾಯಾ ಮಹಾದೇವ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.