×
Ad

ಆಧಾರ್: ಮುಂದಿರುವ ಸವಾಲು

Update: 2017-01-07 22:45 IST

ಭಾರತದ ಆಧಾರ್ ಅಥವಾ ವಿಶೇಷ ಗುರುತಿನ ಸಂಖ್ಯೆ ಅದನ್ನು ತಯಾರಿಸು ವುದರಿಂದ ಆರಂಭವಾಗಿ ಈ ಆರು ವರ್ಷಗಳಲ್ಲಿ ಸಾಕಷ್ಟು ಪರಿಶೀಲನೆಗೆ ಮತ್ತು ಟೀಕೆಗೆ ಒಳಗಾಗಿದೆ. ಬಹಳಷ್ಟು ಮಂದಿ ಅದನ್ನು ಅಮೆರಿಕದಲ್ಲಿರುವ ಸಾಮಾಜಿಕ ಭದ್ರತಾ ಸಂಖ್ಯೆ ಮುಂತಾದ ರಾಷ್ಟ್ರೀಯ ಗುರುತಿನ ಮಾದರಿಗಳಿಗೆ ಹೋಲಿಸುತ್ತಾ, ಅದರ ಪರಿಕಲ್ಪನಾ ಮೂಲದ ಬಗ್ಗೆಯೇ ಸವಾಲು ಎತ್ತಿದ್ದಾರೆ. ಸದ್ಯ ಒಂದು ಬಿಲಿಯನ್ ಗುರುತುಗಳನ್ನು ಶೇಖರಿಸಿಟ್ಟಿರುವ ದತ್ತಾಂಶದ ಮತ್ತು ಅದರ ಜೊತೆಗೆ ಸಾಗುವ ಬಯೋಮೆಟ್ರಿಕ್ ಮಾಹಿತಿಯ ಭದ್ರತೆಯ ಬಗ್ಗೆ ಸಂಶಯಗಳು ಎದ್ದಿವೆ.

ಇಲ್ಲಿ ಇನ್ನೊಂದು ಆತಂಕದ ವಿಷಯವಿದೆ: ಆಧಾರ್ ಅನ್ನು ಹಲವು ಸೇವೆಗಳಿಗೆ, ಮುಖ್ಯವಾಗಿ ಖಾಸಗಿ ಕ್ಷೇತ್ರಗಳು ನೀಡುವ ಸೇವೆಗಳಿಗೆ ಸೇರಿಸಿದಾಗ ಏನಾಗುತ್ತದೆ? ನಾವು ತಿಳಿಯದೆಯೇ ನಮ್ಮ ಮಾಹಿತಿಗಳನ್ನು ದುಷ್ಟರ ಕೈಗೆ ನೀಡುತ್ತಿದ್ದೇವೆಯೇ? ಸಾಮಾನ್ಯವಾಗಿ ನಮ್ಮ ಮಾಹಿತಿಗಳು ಎಷ್ಟು ಸುರಕ್ಷಿತವಾಗಿವೆ?

ಈ ವಿಷಯಗಳ ಬಗ್ಗೆ ಸಾಮಾನ್ಯ ಮಾತುಗಳಲ್ಲಿ ನಾನು ಉತ್ತರಿಸುತ್ತೇನೆ-ಆದರೆ ಅದಕ್ಕಿಂತಲೂ ಮೊದಲು ಆಧಾರ್ ಯೋಜನೆಯ ಜನ್ಯತೆಯತ್ತ ಒಮ್ಮೆ ನೋಡೋಣ.

ಆಧಾರ್ ವ್ಯವಸ್ಥೆಯನ್ನು ಆರಂಭಿಸಿರುವ ಉದ್ದೇಶ ಸರಕಾರಿ ಸಂಸ್ಥೆಗಳು ಅಥವಾ ಖಾಸಗಿ ಕಂಪೆನಿಗಳಲ್ಲಿ ದೃಢೀಕರಣಕ್ಕಾಗಿ ನಿಮ್ಮ ಗುರುತನ್ನು ಸಾಬೀತು ಪಡಿಸುವಲ್ಲಿರುವ ಘರ್ಷಣೆಯನ್ನು ಕಡಿಮೆ ಮಾಡುವುದು. ವಾಸ್ತವದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಆಧಾರ್ ದೃಢೀಕರಣ ಹೊಸ ಪರಿಕಲ್ಪನೆಯೇನಲ್ಲ- ಅದು ಐದು ವರ್ಷಗಳಿಂದಲೂ ಆಧಾರ್ ಚರ್ಚೆಯ ಭಾಗವಾಗಿಯೇ ಇದೆ ಮತ್ತು ಅದನ್ನು ಆಧಾರ್ ಜಾಲತಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಚಾಲಿತ ಗುರುತು

ನಮ್ಮೆಲ್ಲರಲ್ಲೂ ಯಾವುದಾದರೊಂದು ಗುರುತಿನ ದಾಖಲೆಯಿದೆ. ಈ ದಾಖಲೆಗಳನ್ನು ಸರಕಾರದ ಯಾವುದಾದರೂ ಒಂದು ಇಲಾಖೆ ನೀಡಿರುತ್ತದೆ. ಉದಾಹರಣೆಗೆ, ರೇಶನ್ ಕಾರ್ಡನ್ನು ಸಾರ್ವಜನಿಕ ಹಂಚಿಕಾ ವ್ಯವಸ್ಥೆ ನೀಡಿದರೆ, ವಾಹನ ಚಾಲನಾ ಪರವಾನಿಗೆಯನ್ನು ಸ್ಥಳೀಯ ಸಾರಿಗೆ ಮಂಡಳಿ ನೀಡುತ್ತದೆ ಮತ್ತು ಖಾಯಂ ಖಾತೆ ಸಂಖ್ಯೆ (ಪರ್ಮನೆಂಟ್ ಅಕೌಂಟ್ ನಂಬರ್)ಯನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ.

ಈ ಎಲ್ಲಾ ಗುರುತುಗಳು ಮುಖ್ಯವಾಗಿ ಕೇಂದ್ರ ಅಥವಾ ರಾಜ್ಯ ಸರಕಾರ ನೀಡುವ ಸೇವೆ ಅಥವಾ ಲಾಭಗಳಿಗೆ ಸಂಬಂಧಿಸಿರುತ್ತದೆ. ಪಾನ್ ಕಾರ್ಡ್ ಅನ್ನು ಕೇಂದ್ರ ಇಲಾಖೆ ನೀಡಿದರೆ ವಾಹನ ಚಾಲನಾ ಪರವಾನಿಗೆಯನ್ನು ರಾಜ್ಯ ಇಲಾಖೆ ನೀಡುತ್ತದೆ.

ಹಾಗಾಗಿ ನಮ್ಮಲ್ಲಿ ಬಳಿ ಇರುವ ರಾಷ್ಟ್ರೀಯ ಗುರುತು ಎಂದರೆ ಅದು ಕೇವಲ ಪಾನ್ ಕಾರ್ಡ್ ಮತ್ತು ವಿದೇಶ ವ್ಯವಹಾರಗಳ ಸಚಿವಾಲಯ ನೀಡುವ ಪಾಸ್‌ಪೋರ್ಟ್ ಮಾತ್ರ. ವರದಿಗಳ ಪ್ರಕಾರ ಭಾರತದಲ್ಲಿ 243 ಮಿಲಿಯನ್ ಪಾನ್‌ಕಾರ್ಡ್ ಗಳಿವೆ ಮತ್ತು 65 ಮಿಲಿಯನ್ ಪಾಸ್‌ಪೋರ್ಟ್‌ಗಳಿವೆ. ಎರಡಕ್ಕೂ ಕೂಡಾ ನಿರ್ದಿಷ್ಟ ಉದ್ದೇಶವಿದೆ ಮತ್ತು ಎರಡನ್ನೂ ಕೆಲವು ಸಂದರ್ಭಗಳಲ್ಲಿ ಮಾತ್ರ ಬಳಸಬಹುದಾಗಿದೆ. ಬಹುತೇಕ ಭಾರತೀಯರು ಮುಖ್ಯವಾಗಿ ಬಡವರು ಆದಾಯ ತೆರಿಗೆಯನ್ನು ದಾಖಲಿಸುವುದಿಲ್ಲ ಇನ್ನು ತೆರಿಗೆಯನ್ನು ಮರೆತುಬಿಡಿ.

ಇನ್ನೊಂದೆಡೆ, ಮಿಲಿಯನ್ ಗಟ್ಟಲೆ ಭಾರತೀಯರು ಯಾವುದೋ ಲಾಭ ಅಥವಾ ಸಬ್ಸಿಡಿ ಅಥವಾ ಸೇವೆಯನ್ನು ಪಡೆದುಕೊಳ್ಳುವ ಮೂಲಕ ಸರಕಾರದ ಜೊತೆ ನಿರಂತರ ವ್ಯಾವಹಾರಿಕ ಸಂಬಂಧ ಹೊಂದಿರುತ್ತಾರೆ.

ಇವುಗಳಲ್ಲಿ ಬಹುತೇಕವು ವ್ಯಕ್ತಿಯೊಬ್ಬ ಒಂದು ರಾಜ್ಯದಿಂದ ಇನ್ನೊಂದಕ್ಕೆ ಅಥವಾ ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆರಳಿದಾಗ ನಿಲ್ಲುತ್ತದೆ. ಒಂದು ಹೊಸ ಊರಿನಲ್ಲಿ ಹೊಸ ಬ್ಯಾಂಕ್ ಅಥವಾ ಸ್ಥಳೀಯ ಸಾರ್ವಜನಿಕ ಹಂಚಿಕಾ ಯೋಜನೆಯ ರೇಶನ್ ಅಂಗಡಿಗಳ ಜೊತೆ ಸಂಬಂಧ ಕಲ್ಪಿಸಿಕೊಳ್ಳಲು ದಾಖಲೆಗಳನ್ನು ಬಹಳ ಮುಖ್ಯವಾಗಿ ನಿಮ್ಮ ಅಸ್ತಿತ್ವದ ಬಗ್ಗೆ ದಾಖಲಾತಿಯನ್ನು ನೀಡುವ ತ್ರಾಸದಾಯಕ ಕೆಲಸವಿರುತ್ತದೆ. ಇದು ನೀವು ಒಂದೇ ಸ್ಥಳದಲ್ಲಿದ್ದು ಹೊಸ ಸೇವೆಗಳಿಗೆ ಅರ್ಜಿ ಹಾಕುವಾಗಲೂ ಅನ್ವಯವಾಗುತ್ತದೆ.

ಅದಕ್ಕಿಂತಲೂ ಹೆಚ್ಚಾಗಿ ಒಂದು ರಾಜ್ಯಕ್ಕೆ ಸಂಬಂಧಪಟ್ಟಿರುವ ಗುರುತಿನ ಚೀಟಿ ಇನ್ನೊಂದು ರಾಜ್ಯದಲ್ಲಿ ಸೌಲಭ್ಯಗಳನ್ನು ಪಡೆಯುವಲ್ಲಿ ಅನ್ವಯವಾಗುವುದಿಲ್ಲ. ವಿಳಾಸದ ಪುರಾವೆಯನ್ನು ಒದಗಿಸುವ ರೇಶನ್ ಕಾರ್ಡ್ ಇನ್ನೊಂದು ಊರಲ್ಲಿ ಕೂಡಾ ಮಾನ್ಯತೆ ಹೊಂದಿರುವುದಿಲ್ಲ. ಈ ಅಂಶವೇ ದೇಶದಲ್ಲಿ ಉದ್ಯೋಗಕ್ಕಾಗಿ ಆಂತರಿಕವಾಗಿ ಅಲೆದಾಡುತ್ತಿರುವ 400 ಮಿಲಿಯನ್ ಜನರನ್ನು ಕಾಡುವ ಸಮಸ್ಯೆಯಾಗಿದೆ.

ಆಧಾರ್ ಕಾರ್ಡನ್ನು ಯಾವ ರೀತಿ ತಯಾರಿಸಲಾಗಿ ದೆಯೆಂದರೆ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಒಂದೇ ಗುರುತಿನ ಚೀಟಿ ಹೊಂದುವಂತೆ ಮತ್ತು ಅದು ಇತರ ಯಾವುದೇ ಲಾಭ ಅಥವಾ ಸೇವೆಗಳಿಗೆ ಸಂಬಂಧಿಸಿರಬಾರದು. ಎರಡನೆಯದಾಗಿ, ಈ ಗುರುತಿನ ಚೀಟಿಯು ಸಂಪೂರ್ಣವಾಗಿ ಚಾಲಿತವಾಗಿದ್ದು, ಒಬ್ಬ ಭಾರತೀಯ ದೇಶದ ಯಾವ ಮೂಲೆಗೆ ಹೋದರೂ ಅಥವಾ ವಿದೇಶಕ್ಕೆ ತೆರಳಿದರೂ ತನ್ನನ್ನು ಪ್ರಮಾಣೀಕರಿಸುವಂತಿರಬೇಕು.

ಚಾಲಿತ ಅಂದರೆ ಅರ್ಥವೇನು? ಹಿಂದೆ ಕೇವಲ ನೀವು ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಮಾತ್ರ ಹಣವನ್ನು ತೆಗೆಯಬಹುದಾಗಿದ್ದ ಕಾಲಕ್ಕೊಮ್ಮೆ ಮರಳಿ. ಬ್ಯಾಂಕ್‌ಗಳು ಗಣಕೀಕರಣಗೊಂಡಿರಲಿಲ್ಲ ಮತ್ತು ಆಗಿದ್ದರೂ ಶಾಖೆಗಳಲ್ಲಿ ಪರಸ್ಪರ ಮಾತುಕತೆಯಿರಲಿಲ್ಲ.

ಬ್ಯಾಂಕ್‌ಗಳ ಕಂಪ್ಯೂಟರೀಕರಣ ಶಾಖೆಗಳನ್ನು ಪರಸ್ಪರ ಸಂಪರ್ಕಿಸುವಂತೆ, ಮುಂದೆ ಬ್ಯಾಂಕ್‌ಗಳು ಸಂಪರ್ಕಿಸುವಂತೆ ಮಾಡಿತು. ಜೊತೆಗೆ ಮಾಸ್ಟರ್ ಕಾರ್ಡ್, ವೀಸಾ ಇದೀಗ ರುಪೇ ಕಾರ್ಡ್ ಮುಂತಾದವುಗಳು ಎಟಿಎಂ ಜಾಲವನ್ನು ಹುಟ್ಟುಹಾಕಿದವು. ಆ ಮೂಲಕ ನಮ್ಮಲ್ಲಿರುವ ಡೆಬಿಟ್ ಕಾರ್ಡ್ ಮೂಲಕ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹಣವನ್ನು ತೆಗೆಯುವ ಹಾಗಾಯಿತು. ಅದು ಚಲನೆ.

ಭಾರತದಲ್ಲಿ ಗುರುತು ಎಂಬುದು ಬಹುತೇಕ ವಿಷಯಗಳಲ್ಲಿ ನೀವು ನಿಮ್ಮ ಮೂಲ ಬ್ಯಾಂಕ್‌ಗೇ ತೆರಳಿ ಹಣವನ್ನು ಪಡೆಯುವಷ್ಟರ ಮಟ್ಟಿಗೆ ನಿಂತು ಹೋಗಿದೆ. ಉದಾಹರಣೆಗೆ, ಕೇವಲ ನಿಮ್ಮ ಗ್ರಾಮದ ರೇಶನ್ ಕಾರ್ಡ್ ಅಧಿಕಾರಿ ಮಾತ್ರ ನಿಮ್ಮ ಗುರುತನ್ನು ದೃಢೀಕರಿಸಬಲ್ಲ, ಮತ್ತು ಪಾನ್ ಕಾರ್ಡನ್ನು ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ ಮತ್ತು ಇತರೆಡೆಗಳಲ್ಲಿ ಗುರುತಿನ ಪುರಾವೆಯಾಗಿ ಬಳಸಬಹುದಾಗಿದೆ.

ಆಧಾರನ್ನು ಯಾವ ರೀತಿ ತಯಾರಿಸಲಾಗಿದೆಯೆಂದರೆ ಬಾಹ್ಯ ಸಂಸ್ಥೆಗಳು ಕೂಡಾ ಅದನ್ನು ದೃಢೀಕರಣಕ್ಕಾಗಿ ಬಳಸಬಹುದು. ಭಾರತದಲ್ಲಿ ಯಾವುದೇ ಪ್ರಮುಖ ಡೇಟಾಬೇಸ್‌ಗಳನ್ನು ಈ ರೀತಿ ದೃಢೀಕರಿಸಲು ಸಾಧ್ಯವಿಲ್ಲ. ಅದರಲ್ಲಿ 815 ಮಿಲಿಯನ್ ಮತದಾರರನ್ನು ನೋಂದಾಯಿಸಿರುವ ಚುನಾವಣ ಆಯೋಗ ಕೂಡಾ ಸೇರುತ್ತದೆ.

ಆಧಾರ್ ಸದ್ಯ ಸಾರ್ವಜನಿಕ ಹಂಚಿಕಾ ಯೋಜನೆಯ ಲಾಭಗಳನ್ನು ಸ್ಥಳಕ್ಕೇ ಆಗಮಿಸುವಂತೆ ಮಾಡದಿದ್ದರೂ ಅಂದರೆ ನೀವು ಈಗಲೂ ರೇಶನ್ ಸಾಮಗ್ರಿಗಳನ್ನು ಪಡೆಯಲು ಸ್ಥಳೀಯ ರೇಶನ್ ಅಂಗಡಿಗೆ ತೆರಳಬೇಕಾಗಿದ್ದರೂ, ವಲಸಿಗರು ಹೊಸತೊಂದು ಸ್ಥಳದಲ್ಲಿ ರೇಶನ್ ಕಾರ್ಡ್ ಪಡೆಯಲು ತಮ್ಮನ್ನು ಪ್ರಮಾಣೀಕರಿಸಲು ಆಧಾರ್ ಸುಲಭ ದಾರಿಯನ್ನು ಒದಗಿಸಿದೆ.

ದೃಢೀಕರಣ ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಯೋಚಿಸಿ. ನೀವು ನ್ಯೂಯಾರ್ಕ್‌ನ ರೆಸ್ಟೋರೆಂಟ್‌ವೊಂದಕ್ಕೆ ತೆರಳುತ್ತೀರಿ. ಅಲ್ಲಿ 20 ಬಿಲ್ ಪಾವತಿಸಲು ಕಾರ್ಡ್ ಸ್ವೈಪ್ ಮಾಡುತ್ತೀರಿ. ಮುಂದೇನಾಗುತ್ತದೆ? ಅದರಲ್ಲಿರುವ ದತ್ತಾಂಶವನ್ನು ಸ್ಥಳೀಯ ಸಂಬಂಧಿತ ಬ್ಯಾಂಕ್ ಪಡೆದುಕೊಳ್ಳುತ್ತದೆ. ವೀಸಾ ಅಥವಾ ಮಾಸ್ಟರ್‌ಕಾರ್ಡ್ ಮೂಲಕ ಜಾಲದ ಮೂಲಕ ತೆರಳುತ್ತದೆ ಮತ್ತು ಭಾರತದಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕನ್ನು ತಲುಪುತ್ತದೆ.

ಹಣ ಪಾವತಿಸಬೇಕಾದ ಬ್ಯಾಂಕ್ ವ್ಯವಹಾರದ ದೃಢೀಕರಣ ನೀಡುತ್ತದೆ. ಆ ದತ್ತಾಂಶ ಮತ್ತೆ ನ್ಯೂಯಾರ್ಕ್ ರೆಸ್ಟೋರೆಂಟ್ ತಲುಪಿ ಅಲ್ಲಿ ನೀವು ಹಣ ಪಾವತಿಯಾದ ಬಗ್ಗೆ ಮುದ್ರಿತ ರಶೀದಿ ಪಡೆಯುತ್ತೀರಿ. ಇದೆಲ್ಲವೂ ಕೆಲವು ಸೆಕೆಂಡ್‌ಗಳಲ್ಲಿ ನಡೆಯುತ್ತದೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ 19.90 ಇದ್ದರೆ ಅಥವಾ 10 ಸೆಂಟ್ಸ್ ಕಡಿಮೆಯಿದ್ದರೆ. ಆಗ ಬ್ಯಾಂಕ್ ಏನು ಮಾಡುತ್ತದೆ? ನಿಮ್ಮ ಖಾತೆಯಲ್ಲಿ 10 ಸೆಂಟ್ಸ್ ಕಡಿಮೆಯಿರುವ ಕಾರಣ ನೀವು ಮತ್ತೊಮ್ಮೆ ಕಾರ್ಡ್‌ಸ್ವೈಪ್ ಮಾಡಬೇಕೆಂದು ಅದು ತಿಳಿಸುತ್ತದೆಯೇ. ಇಲ್ಲ. ಅದು ವ್ಯವಹಾರವನ್ನು ತಿರಸ್ಕರಿಸುತ್ತದೆ ಹಾಗಾಗಿ ನೀವು ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆಯೆಂಬುದನ್ನು ಸರಿಯಾಗಿ ಯೋಚಿಸಿ ನಂತರ ಮರುಸ್ವೈಪ್ ಮಾಡಬೇಕಾಗುತ್ತದೆ.

ಮುಖ್ಯವಾದು ದೇನೆಂದರೆ, ನೀವು ಸ್ವೈಪ್ ಮಾಡುವ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದರೂ ಆ ರೆಸ್ಟೋರೆಂಟ್ ನಿಮ್ಮ ಬ್ಯಾಂಕ್ ಖಾತೆಯನ್ನು ನೋಡಲು ಸಾಧ್ಯವಿಲ್ಲ. ಅವರಿಗೆ ಸಿಗುವ ಮಾಹಿತಿಯೆಂದರೆ ಕೇವಲ ನಿಮ್ಮ ಹೆಸರು ಮತ್ತು ನಿಮ್ಮ ಕಾರ್ಡ್‌ನ ಕೊನೆಯ ನಾಲ್ಕು ಸಂಖ್ಯೆಗಳು.

ಹಾಗಾಗಿ ಸ್ವೈಪ್ ಯಂತ್ರದ ಮುಖಾಂತರ ನ್ಯೂಯಾರ್ಕ್‌ನಿಂದ ದತ್ತಾಂಶವು ಭಾರತದಲ್ಲಿರುವ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಮತ್ತೆ ಮರಳುವುದಾದರೂ ವ್ಯವಸ್ಥೆಯ ಜೊತೆ ಅದು ಎಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ, ಯಾಕೆಂದರೆ ಅಲ್ಲಿಂದ ಮರಳುವ ದತ್ತಾಂಶವು ಕೇವಲ ಹೌದು ಅಥವಾ ಇಲ್ಲ ಎಂದಷ್ಟೇ ಆಗಿರುತ್ತದೆ.

ಆಧಾರ್ ಕೂಡಾ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಅದು ಕೂಡಾ ‘‘ಹೌದು’’ ಅಥವಾ ‘‘ಇಲ್ಲ’’ ಎಂಬ ದೃಢೀಕರಣವನ್ನು ಮಾತ್ರ ಕಳುಹಿಸುತ್ತದೆ. ದತ್ತಾಂಶದ ವ್ಯಾವಹಾರಿಕ ಹರಿವು ಕೂಡಾ ಅದೇ ಮಾದರಿಯಲ್ಲಿರುತ್ತದೆ. ಉದಾಹರಣೆಗೆ, ಸ್ಥಳೀಯ ರೇಶನ್ ಅಂಗಡಿಯಲ್ಲಿ ನೀವು ನಿಮ್ಮ ಬೆರಳಚ್ಚು ಸ್ವೈಪ್ ಮಾಡಿದರೆ ಅದು ಆಧಾರ್‌ನ ಕೇಂದ್ರ ಡೇಟಾಬೇಸ್‌ಗೆ ತಲುಪುತ್ತದೆ. ಈ ವ್ಯವಸ್ಥೆಯು ಆಧಾರನ್ನು ಖಾಸಗಿ ಕ್ಷೇತ್ರ ಸೇರಿದಂತೆ ಬಾಹ್ಯ ಸೇವಾ ಪೂರೈಕೆದಾರರಿಗೆ ಸಂಪರ್ಕಿಸುವ ‘‘ಇಕೆವೈಸಿ’’ ಅಥವಾ ‘‘ನಿಮ್ಮ ಗ್ರಾಹಕರನ್ನು ಅರಿಯಿರಿ’’ ವ್ಯವಸ್ಥೆಗೆ ಪೂರಕವಾಗಿದೆ.

ಗಮನಹರಿಸಬೇಕಾದ ಎರಡು ಅಂಶಗಳು

ಆಧಾರ್ ವ್ಯವಸ್ಥೆಯನ್ನು ಆರಂಭಿಸಿರುವ ಉದ್ದೇಶ ಸರಕಾರಿ ಸಂಸ್ಥೆಗಳು ಅಥವಾ ಖಾಸಗಿ ಕಂಪೆನಿಗಳಲ್ಲಿ ದೃಢೀಕರಣಕ್ಕಾಗಿ ನಿಮ್ಮ ಗುರುತನ್ನು ಸಾಬೀತುಪಡಿಸುವಲ್ಲಿರುವ ಘರ್ಷಣೆಯನ್ನು ಕಡಿಮೆ ಮಾಡುವುದು. ವಾಸ್ತವದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಆಧಾರ್ ದೃಢೀಕರಣ ಹೊಸ ಪರಿಕಲ್ಪನೆಯೇನಲ್ಲ- ಅದು ಐದು ವರ್ಷಗಳಿಂದಲೂ ಆಧಾರ್ ಚರ್ಚೆಯ ಭಾಗವಾಗಿಯೇ ಇದೆ ಮತ್ತು ಅದನ್ನು ಆಧಾರ್ ಜಾಲತಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಗಮನ ನೀಡಲು ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಮೊದಲನೆಯದು ಬ್ಯಾಂಕ್, ಇದರ ಉದ್ದೇಶ ಏನೆಂದರೆ ಆಧಾರ್ ಬ್ಯಾಂಕ್‌ಲ್ಲಿ ನಿಮ್ಮನ್ನು ಪ್ರಮಾಣೀಕರಿಸಲು ನೆರವಾಗುತ್ತದೆ ಮತ್ತು ಆ ಮೂಲಕ ಬ್ಯಾಂಕ್ ಖಾತೆ ತೆರೆಯಲು ಸಹಾಯವಾಗುತ್ತದೆ. ಇನ್ನು ಆಧಾರ್ ಮೂಲಕ ಮಾಡಬಹುದಾದ ಪಾವತಿ ವ್ಯವಸ್ಥೆಯೂ ಇದೆ ಆದರೆ ಅದು ಪ್ರತ್ಯೇಕ ವಿಷಯ.

ಎರಡನೆಯದಾಗಿ ಗಮನಹರಿಸಬೇಕಾದ ಕ್ಷೇತ್ರವೆಂದರೆ ದೂರಸಂಪರ್ಕ. ಇತರ ವಿಷಯಗಳ ಜೊತೆಗೆ ಒಂದು ಮುಖ್ಯ ಕಾರಣವೆಂದರೆ ನೀವು ಪ್ರತೀ ಬಾರಿ ಹೊಸ ದೂರವಾಣಿ ಸಂಪರ್ಕಕ್ಕೆ ಅರ್ಜಿ ಹಾಕಿದಾಗ ಮಾಡಬೇಕಾದ ಒಂದು ರಾಶಿ ಕಾಗದ ವ್ಯವಹಾರಗಳನ್ನು ಕಡಿಮೆ ಮಾಡಲು ಮತ್ತು ಭದ್ರತೆಯ ಕಾಳಜಿಯನ್ನು ನಿವಾರಿಸುವ ಜೊತೆಗೆ ಹೊಸ ದೂರವಾಣಿ ಸಂಖ್ಯೆಯನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿದೆ.

ಎರಡೂ ಸಂದರ್ಭಗಳಲ್ಲಿ ಒಂದು ನಿರ್ಣಾಯಕ ನಿಯಮವಿದೆ: ನೀವು ಬಯಸಿದಲ್ಲಿ ಮಾತ್ರ ನೀವು ಆಧಾರನ್ನು ಸ್ವ-ದೃಢೀಕರಣಕ್ಕೆ ಬಳಸಬಹುದು. ಸೇವೆಯನ್ನು ಒದಗಿಸುವವರು ನಿಮ್ಮ ಅನುಮತಿಯಿಲ್ಲದೆ ನಿಮ್ಮ ದತ್ತಾಂಶಗಳನ್ನು ಅಂದರೆ ವಿವರಗಳನ್ನು ಪಡೆದುಕೊ ಳ್ಳುವಂತಿಲ್ಲ.

ಆ ಮಟ್ಟಿಗೆ ಈ ವ್ಯವಹಾರವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಿಂದ ಸ್ವಲ್ಪ ಭಿನ್ನವಾಗಿದೆ. ಮೊದಲನೆಯದರಲ್ಲಿ ನೀವು ಬಯಸಿದರೂ ಹೆಚ್ಚುವರಿ ವಿವರಗಳು ಮರುಹರಿಯುವ ಯಾವುದೇ ವ್ಯವಸ್ಥೆ ಅಥವಾ ಪ್ರಕ್ರಿಯೆಯಿಲ್ಲ.

ಆದರೆ ಆಧಾರ್ ದೃಢೀಕರಣವು ನಿಮ್ಮ ಭೌಗೋಳಿಕ ಮಾಹಿತಿಗಳು ಮರುಹರಿಯಲು ಅವಕಾಶ ನೀಡುತ್ತದೆ. ನೀವು ಸ್ವ-ದೃಢೀಕರಣಕ್ಕೆ ಅನುಮತಿ ನೀಡಿ ನಿಮ್ಮ ಬೆರಳಚ್ಚನ್ನು ಸ್ಕ್ಯಾನರ್ ಮೇಲಿಟ್ಟಾಗ, ಅದು ಡೇಟಾಬೇಸ್‌ನಲ್ಲಿ ಸಂಗ್ರಹವಾಗಿರುವ ನಿಮ್ಮ ಆಧಾರ್ ಸಂಖ್ಯೆ ಮತ್ತು ಬೆರಳಚ್ಚನ್ನು ಹೋಲಿಕೆ ಮಾಡುತ್ತದೆ ಮತ್ತು ಅದು ಸರಿಯಾಗಿದ್ದರೆ ಸೇವಾದಾರರಿಗೆ ನಿಮ್ಮ ಭೌಗೋಳಿಕ ಮಾಹಿತಿಯನ್ನು ಒದಗಿಸುತ್ತದೆ.

ಆಧಾರ್‌ಗೆ ಹೆಸರು ನೋಂದಾಯಿಸುವಾಗ ನೀವು ನಿಮ್ಮ ಬೆರಳಚ್ಚು ಮತ್ತು ಕಣ್ಣ ಪೊರೆಯ ಕ್ಷಪ್ರತಿಯನ್ನು ನೀಡಿರುತ್ತೀರಿ. ಕಂಪ್ಯೂಟರ್ ಅದೇ ಬೆರಳಚ್ಚನ್ನು ಪರಿಶೀಲಿಸುತ್ತದೆ ಮತ್ತು ಮಾಸ್ಟರ್ ಕಾರ್ಡ್ ವ್ಯವಹಾರದಂತೆ, ನೀವು ನೀವೇ ಎಂಬುದನ್ನು ದೃಢಪಡಿಸುತ್ತದೆ. ಭೌಗೋಳಿಕ ಮಾಹಿತಿ ಕೂಡಾ ಈ ವ್ಯವಸ್ಥೆಯಲ್ಲಿ ಸೇರುತ್ತದೆ ಆದರೆ ಯಾವುದೇ ಹೆಚ್ಚುವರಿ ಬದಲಾವಣೆಗಳಿಲ್ಲದೆ. ಭೌಗೋಳಿಕ ಮಾಹಿತಿಯು ಕೇವಲ ನಿಮ್ಮ ಹೆಸರು, ಪ್ರಾಯ, ಲಿಂಗ, ವಾಸಸ್ಥಳ ಮತ್ತು ದೂರವಾಣಿ ಸಂಖ್ಯೆಯನ್ನು ಹೊಂದಿರುತ್ತದೆ. ಇದನ್ನು ನೀವು ಹೇಗೂ ನೀಡುತ್ತೀರಿ.

ಸೇವಾದಾರರು ನಿಮ್ಮ ದತ್ತಾಂಶದ ಇತರ ಯಾವುದೇ ಭಾಗವನ್ನು ವೀಕ್ಷಿಸಲು ಸಾಧ್ಯವೇ? ಇಲ್ಲ.

ಮುಖ್ಯವಾಗಿ ಈ ವ್ಯವಹಾರವು ಎರಡೂ ಕಡೆಗಳಿಂದಲೂ ಸುರಕ್ಷಿತವಾಗಿದೆ. ಹಿಂದೆಲ್ಲಾ ನೀವು ಕಾಗದದ ಮೂಲಕ ನೀಡಿದ ಪುರಾವೆಗಳು ಯಾರ ಕೈಸೇರುತ್ತದೆ ಎಂಬ ಕಲ್ಪನೆ ನಿಮಗಿರಲಿಲ್ಲ ಮತ್ತು ಸೇವಾದಾರರಿಗೆ ಆ ದಾಖಲೆಗಳು ನಿಜವಾದುವುಗಳೇ ಎಂಬುದನ್ನು ಹೇಳಲು ಸಾಧ್ಯವಿರಲಿಲ್ಲ.

ಇದೇ ರೀತಿ ಇಕೆವೈಸಿ ಪ್ರಕ್ರಿಯೆಯನ್ನು ಕೂಡಾ ಇತರ ಗುರುತು ಪರಿಶೀಲನಾ ವಿಷಯಗಳಿಗೆ ವಿಸ್ತರಿಸಬಹುದಾಗಿದೆ, ಅದು ಸರಕಾರಿಯಾಗಿರಲಿ ಅಥವಾ ಖಾಸಗಿಯಾಗಿರಲಿ.

ಭದ್ರತಾ ಕಾಳಜಿ

ಭದ್ರತೆಯ ಬಗ್ಗೆ ಮಾನ್ಯವಾದ ಪ್ರಶ್ನೆಗಳಿವೆ. ಆದರೆ ಈ ಕಳವಳವು ಕಾಗದವನ್ನು ಬಳಸುವಾಗ ಮತ್ತು ಡಿಜಿಟಲ್ ಸಹಿ ಅಥವಾ ಡಿಜಿಟಲ್ ಪರಿಶೀಲನೆಯಿಲ್ಲದಿರುವಾಗ ಹೆಚ್ಚಾಗಿರುತ್ತದೆ. ಆಧಾರ್‌ನ ಡೇಟಾಬೇಸ್‌ನ ರಚನೆ ಅತ್ಯುತ್ತಮವಾಗಿದ್ದು, ಕೇವಲ ವ್ಯವಹಾರವನ್ನು ದೃಢೀಕರಿಸುವುದಾಗಿದ್ದರೂ ಬಾಹ್ಯ ಸೇವಾದಾರರ ಜೊತೆ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ರೀತಿಯಲ್ಲಿ ಅದನ್ನು ರಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಶೇಷ ಗುರುತು ಪ್ರಾಧಿಕಾರದ ಮಾಜಿ ಪ್ರಧಾನ ನಿರ್ದೇಶಕ ಮತ್ತು ಯೋಜನಾ ನಿರ್ದೇಶಕರಾದ ಮತ್ತೀಗ ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿಯ ಮುಖ್ಯಸ್ಥರಾಗಿರುವ ಆರ್.ಎಸ್ ಶರ್ಮಾ ಅವರು ಬರೆದ ಲೇಖನವನ್ನು ಓದಿ.

ಇನ್ನು ಆಧಾರ್ ಅನ್ನು ಸೇರಿಸಲು ಮತ್ತು ಡೇಟಾಬೇಸ್ ಹಂಚಿಕೊಳ್ಳಲು ದೂರವಾಣಿ ಸಂಖ್ಯೆ ಮತ್ತು ಪಾನ್ ಕಾರ್ಡ್ ಸೇರಿದಂತೆ ಅನೇಕ ದಾರಿಗಳಿವೆ.

ಆಧಾರ್‌ನಂತಹ ಡೇಟಾಬೇಸ್ ಹ್ಯಾಕ್ ಮಾಡಲಾಗುತ್ತದೆಯೇ? ಅದು ಕಷ್ಟ ಆದರೆ ಆ ಸಾಧ್ಯತೆಯಿದೆ ಎಂದು ಯೋಚಿಸುವುದು ಸುರಕ್ಷಿತ. ಆ ಕಾರ್ಯ ಅದನ್ನು ನಿರ್ವಹಿಸುತ್ತಿರುವ ತಾಂತ್ರಿಕ ವರ್ಗದ್ದಾಗಿದೆ ಮತ್ತು ಅಲ್ಲೇನಾದರೂ ಲೋಪವಾದರೆ ಹ್ಯಾಕ್ ಆಗಲೂಬಹುದು.

ವಿಸ್ತಾರವಾಗಿ ಹೇಳುವುದಾದರೆ, ಇಂದು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸವಾಲಿರುವುದು ಅಂಥಾ ಸೂಕ್ಷ್ಮ ಡೇಟಾಬೇಸನ್ನು ನಿರ್ವಹಿಸುವವರ ಕೈಯಲ್ಲಿ ಮತ್ತು ಖಂಡಿತವಾಗಿಯೂ, ಅದನ್ನು ನಡೆಸುವವರ ಉದ್ದೇಶದಲ್ಲಿ.

Writer - ಗೋವಿಂದ್ರಾಜ್ ಎತಿರಾಜ್

contributor

Editor - ಗೋವಿಂದ್ರಾಜ್ ಎತಿರಾಜ್

contributor

Similar News