×
Ad

ಮಹಿಳೆಯರ ಸ್ವಾಭಿಮಾನದ ಬದುಕಿಗೆ ನೆರವಾದ ಬೀಡಿ ಉದ್ಯಮ

Update: 2017-01-07 22:52 IST

ರಾಜ್ಯದಲ್ಲಿ ಸುಮಾರು ಹತ್ತು ಲಕ್ಷದಷ್ಟು ಬೀಡಿ ಕಾರ್ಮಿಕರಿದ್ದರೂ ಕೂಡ ಅದರಲ್ಲಿ ಅರ್ಧದಷ್ಟು ಜನ ಕರಾವಳಿ ಭಾಗದವರೇ ಆಗಿದ್ದಾರೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸುಮಾರು ನಾಲ್ಕು ಲಕ್ಷದಷ್ಟು ಜನ ಬೀಡಿಕಾರ್ಮಿಕರಿದ್ದಾರೆ. ಬೀಡಿ ಕಟ್ಟುವವರು ಶೇ.90ಕ್ಕಿಂತಲೂ ಹೆಚ್ಚಾಗಿ ಮಹಿಳೆಯರೇ ಆಗಿದ್ದಾರೆ. ಮುಸ್ಲಿಂ ಸಮುದಾಯಗಳಲ್ಲಿ ಮಹಿಳೆಯರಿಗೆ ಹೊರಗೆ ಹೋಗಿ ದುಡಿಯಲು ಅವಕಾಶ ವಿರಳವಾಗಿರುವುದರಿಂದ ಸ್ವಯಂ ಬದುಕಿಗಾಗಿ ಮುಸ್ಲಿಂ ಮಹಿಳೆಯರು ಆಯ್ದುಕೊಂಡಿದ್ದು ಬೀಡಿ ಉದ್ಯಮವನ್ನು.

ಬೀಡಿ ನಿಷೇಧದ ಹಿಂದೆ ಸಿಗರೇಟು, ಗುಟ್ಕಾ ಮಾಫಿಯಾದ ಕೈವಾಡವಿದೆ ಎಂಬ ಮಾತು ಕೇಳಿ ಬರುತ್ತಿದೆ. ಬೀಡಿ ನಿಷೇಧ ಮಾಡಿದ್ದೇ ಆದಲ್ಲಿ ಸಿಗರೇಟು, ಗುಟ್ಕಾಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಸಿಗರೇಟ್ ಮಾಫಿಯಾದವರದ್ದು. ನಿಜ ಹೇಳಬೇಕೆಂದರೆ ಸಿಗರೇಟು ಉದ್ಯಮಕ್ಕೆ ಬೀಡಿ ಉದ್ಯಮವನ್ನು ಹೋಲಿಸಲೇಬಾರದು. ಸಿಗರೇಟ್, ಗುಟ್ಕಾಗಳಂತಹ ಉತ್ಪನ್ನಗಳು ತಯಾರಾಗುವುದು ಯಂತ್ರಗಳ ಮೂಲಕ. ಅಲ್ಲಿ ಕಾರ್ಮಿಕರ ಬಳಕೆ ಕಡಿಮೆ. ಆದರೆ ಬೀಡಿ ಉದ್ಯಮ ಶೇ.100 ರಷ್ಟು ಕಾರ್ಮಿಕರನ್ನೇ ಅವಲಂಬಿಸಿದೆ. ಹೀಗಾಗಿ ಬೀಡಿ ಉದ್ಯಮ ಬಂದ್ ಆದಲ್ಲಿ ದೇಶದ ಲಕ್ಷಾಂತರ ಜನರು ನಿರುದ್ಯೋಗಿಗಳಾಗುತ್ತಾರೆ.

ಮುಂಚೆಲ್ಲಾ ದಿನಕ್ಕೆ ಒಂದೂವರೆಯಿಂದ ಎರಡು ಸಾವಿರ ತನಕ ಬೀಡಿ ಕಟ್ಟುತ್ತಿದ್ದೆ. ಆದರೆ ಈಗ ದಿನಕ್ಕೆ ಐನೂರು ಕಟ್ಟುವುದೇ ಕಷ್ಟದ ಕೆಲಸ ಆಗಿದೆ. ಕಣ್ಣು ಕೂಡ ಸರಿಯಾಗಿ ಕಾಣಿಸದೇ ಇರುವುದರಿಂದ ಬೀಡಿಗೆ ನೂಲು ಹಾಕಲು ಕಷ್ಟ ಆಗುತ್ತದೆ. ನೋಟು ನಿಷೇಧದಿಂದಾಗಿ ಬೀಡಿ ಬ್ರಾಂಚಿನಲ್ಲಿ ನಮಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ, ಕೇಳಿದರೆ ಮುಂದಿನ ವಾರ ಕೊಡುತ್ತೇವೆ ಚಿಲ್ಲರೆ ಇಲ್ಲ ಅಂತಾರೆ. ಸಂಬಳ ಸಿಗದೇ ಇರೋದ್ರಿಂದ ಊಟ ಮಾಡೋಕು ಕಷ್ಟ ಆಗಿದೆ. ನಿನ್ನೆ ಊಟಕ್ಕೆ ಅಕ್ಕಿ ಇರಲಿಲ್ಲ, ಹಾಗಾಗಿ ಅರ್ಧ ಕೆ.ಜಿ. ಬೆಳ್ತಿಗೆ ಅಕ್ಕಿ ಮತ್ತು ಅರ್ಧ ಕೆ.ಜಿ ಕೆಂಪಕ್ಕಿ ಹಾಕಿ ಅನ್ನ ಮಾಡಿ ತಿಂದಿದ್ದೇವೆ. ಹೀಗೆಯೇ ಆದಲ್ಲಿ ನಾವು ಮುಂದಿನ ದಿನಗಳಲ್ಲಿ ಬದುಕೋದಾದರೂ ಹೇಗೆ..?’’ ಎಂದು ಮರು ಪ್ರಶ್ನಿಸುತ್ತಾರೆ ಮಂಗಳೂರಿನ ಬೋಳಾರದ ಹಿರಿಯ ಮಹಿಳಾ ಬೀಡಿ ಕಾರ್ಮಿಕರೊಬ್ಬರು.. ಹೀಗೆ ಅವರು ಮನದ ಮಾತನ್ನು ಹಂಚಿಕೊಂಡಾಗ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಪಡಿತರ ಚೀಟಿಯಲ್ಲಿ ನಿಮಗೆ ಅನ್ನಭಾಗ್ಯದ ಅಕ್ಕಿ ಸಿಗಲ್ವೇ ಎಂದು ಕೇಳಿದಾಗ ‘‘ ನಮಗೆ ಸ್ವಂತ ಮನೆಯಿಲ್ಲ, ನಾವು ಬಾಡಿಗೆ ಮನೆಯಲ್ಲಿರೋದು ನಮಗೆ ಎಪಿಎಲ್ ಕಾರ್ಡ್ ಕೊಟ್ಟಿದ್ದಾರೆ, ನಾವೇನು ಶ್ರೀಮಂತರು ಅನ್ಕೊಂಡಿದಾರೆ ಅನ್ಸುತ್ತೆ.’’ ಎಂದು ವ್ಯಂಗ್ಯವಾಗಿ ಹೇಳಿ ಬೇಸರಿಸಿಕೊಳ್ತಾರೆ.

ಮೊದಲೇ ಬಡಕುಟುಂಬ ಈ ನೋಟು ಬದಲಾವಣೆಯಿಂದಾಗಿ ಮನೆಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದು ಇವರ ಈ ಒಂದು ಮನೆಯಂತಲ್ಲ. ಇಂತಹ ಅದೆಷ್ಟೋ ಬಡ ಕುಟುಂಬಗಳ ಕಷ್ಟಗಳು ಇನ್ನೂ ಸಮಾಜದ ಕಣ್ಣಿಗೆ ಬಿದ್ದಿಲ್ಲ. ದೇಶದಲ್ಲಿ ಅಭಿವೃದ್ದಿಯ ಹೆಸರಿನ ‘ಬಲವಾದ’ ಕೂಗು ಹೆಚ್ಚುತ್ತಿರುವುದರಿಂದ ಸಾಮಾನ್ಯ ಜನರ ಪಾಡು ಸಮಾಜದ ಮುಖ್ಯವಾಹಿನಿಗೆ ತಲುಪಿಸುವಲ್ಲಿ ಜೀವಪರ ಮನಸ್ಸುಗಳು ಮತ್ತು ಮಾಧ್ಯಮಗಳು ಸೋತಿವೆಯೇನೋ ಎಂದು ಕೆಲವೊಮ್ಮೆ ಅನಿಸುತ್ತದೆ.

ಕರಾವಳಿ ಕರ್ನಾಟಕದಲ್ಲಿ ಮಹಿಳೆಯರ ಸ್ವಾವಲಂಬನೆಯ ಬದುಕಿನ ಹಿಂದೆ ಬೀಡಿಯ ಪಾತ್ರ ಮಹತ್ತರವಾಗಿದೆ. ಬಹುತೇಕ ಮಹಿಳೆಯರು ಬೀಡಿಯಿಂದಲೇ ಬದುಕು ಕಟ್ಟಿಕೊಂಡು ಸಮಾಜದಲಿ್ಲ ತನ್ನ ತನವನ್ನು ನಿರೂಪಿಸಿದ್ದಾರೆ.

ರಾಜ್ಯದಲ್ಲಿ ಸುಮಾರು ಹತ್ತು ಲಕ್ಷದಷ್ಟು ಬೀಡಿ ಕಾರ್ಮಿಕರಿದ್ದರೂ ಕೂಡ ಅದರಲ್ಲಿ ಅರ್ಧದಷ್ಟು ಜನ ಕರಾವಳಿ ಭಾಗದವರೇ ಆಗಿದ್ದಾರೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸುಮಾರು ನಾಲ್ಕು ಲಕ್ಷದಷ್ಟು ಜನ ಬೀಡಿಕಾರ್ಮಿಕರಿದ್ದಾರೆ. ಬೀಡಿ ಕಟ್ಟುವವರು ಶೇ.90ಕ್ಕಿಂತಲೂ ಹೆಚ್ಚಾಗಿ ಮಹಿಳೆಯರೇ ಆಗಿದ್ದಾರೆ. ಮುಸ್ಲಿಂ ಸಮುದಾಯಗಳಲ್ಲಿ ಮಹಿಳೆಯರಿಗೆ ಹೊರಗೆ ಹೋಗಿ ದುಡಿಯಲು ಅವಕಾಶ ವಿರಳವಾಗಿರುವುದರಿಂದ ಸ್ವಯಂ ಬದುಕಿಗಾಗಿ ಮುಸ್ಲಿಂ ಮಹಿಳೆಯರು ಆಯ್ದುಕೊಂಡಿದ್ದು ಬೀಡಿ ಉದ್ಯಮವನ್ನು. ಇಂದಿಗೂ ಕೂಡ ಕರಾವಳಿ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಬೀಡಿ ಕಾರ್ಮಿಕರೇ ಆಗಿದ್ದಾರೆ. ಬೀಡಿಕಟ್ಟಿಯೇ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟವರಿದ್ದಾರೆ, ಸ್ವತಃ ತಾವೇ ಬೀಡಿ ಕಟ್ಟಿ ಮದುವೆ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಸಾಕಷ್ಟು ಜನರಿಗೆ ಜೀವನಾಧಾರವಾಗಿದ್ದ ಬೀಡಿ ಉದ್ಯಮ ಇಂದು ಅಡ ಕತ್ತರಿಯ ಮೇಲೆ ನಿಂತಿದೆ. ಬೀಡಿಯನ್ನು ನಂಬಿ ಜೀವನ ಸಾಗಿಸುತ್ತಿದ್ದವರ ಭವಿಷ್ಯದ ಮೇೆ ತೂಗುಗತ್ತಿಯು ನೇತಾಡುವಂತಿದೆ.

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆಗೆ(ಕೋಟ್ಪಾ) ತಿದ್ದುಪಡಿಯನ್ನು ಕಳೆದ ಎಪ್ರಿಲ್ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರ ಪರಿಣಾಮವಾಗಿ ಬೀಡಿಯನ್ನೇ ನಂಬಿದ್ದ ಸಾಕಷ್ಟು ಕುಟುಂಬಗಳು ಇಕ್ಕಟ್ಟಿಗೆ ಸಿಲುಕಿವೆ. ಸರಕಾರ ಬೀಡಿ ಉದ್ಯಮವನ್ನೇ ನಿಷೇಸುವ ಯೋಚನೆಯಲ್ಲಿದೆ. ಒಂದು ವೇಳೆ ಬೀಡಿ ಉದ್ಯಮವನ್ನೇ ನಿಷೇಸಿದ್ದೇ ಆದಲ್ಲಿ ಅದನ್ನೇ ನಂಬಿರುವ ರಾಜ್ಯದ ಸುಮಾರು ಹತ್ತು ಲಕ್ಷದಷ್ಟು ಬೀಡಿ ಕಾರ್ಮಿಕರ ಭವಿಷ್ಯ ಬೀಡಿಯಂತೆಯೇ ಉರಿದುಹೋಗಲಿದೆ. ಸರಕಾರ ಕೂಡ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ಯೋಚನೆಯಲ್ಲಿಲ್ಲ. ಬೀಡಿ ಕಾರ್ಮಿಕರಲ್ಲಿ ಬಹುಪಾಲು ಜನ ಪ್ರಾಥಮಿಕ, ಪ್ರೌಢಶಿಕ್ಷಣ ಕಲಿತವರಷ್ಟೇ ಆಗಿರುವುದರಿಂದ ಅವರಿಗೆ ಕರೆದು ಉದ್ಯೋಗ ನೀಡುವವರು ಸಿಗುವುದು ಕಷ್ಟ. ಹಾಗಾಗಿ ಸರಕಾರ ಬೀಡಿ ಉದ್ಯಮವನ್ನು ನಿಷೇಧ ಮಾಡುವುದೇ ಆದಲ್ಲಿ ಆ ಕಾರ್ಮಿಕರಿಗೆ ಪರ್ಯಾಯ ಅಥವಾ ಸ್ವಯಂ ಉದ್ಯೋಗ ನೀಡಿದ ಬಳಿಕವಷ್ಟೇ ನಿಷೇಧಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಬೀಡಿಯನ್ನೇ ನಂಬಿರುವ ಲಕ್ಷಾಂತರ ಕುಟುಂಬಳು ಬೀದಿಪಾಲಾಗುವ ಸಾಧ್ಯತೆಗಳಿವೆ.

ಬೀಡಿ ನಿಷೇಧದ ಹಿಂದೆ ಸಿಗರೇಟು, ಗುಟ್ಕಾ ಮಾಫಿಯಾದ ಕೈವಾಡವಿದೆ ಎಂಬ ಮಾತು ಕೇಳಿ ಬರುತ್ತಿದೆ. ಬೀಡಿ ನಿಷೇಧ ಮಾಡಿದ್ದೇ ಆದಲ್ಲಿ ಸಿಗರೇಟು, ಗುಟ್ಕಾಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಸಿಗರೇಟ್ ಮಾಫಿಯಾದವರದ್ದು. ನಿಜ ಹೇಳಬೇಕೆಂದರೆ ಸಿಗರೇಟು ಉದ್ಯಮಕ್ಕೆ ಬೀಡಿ ಉದ್ಯಮವನ್ನು ಹೋಲಿಸಲೇಬಾರದು. ಸಿಗರೇಟ್, ಗುಟ್ಕಾಗಳಂತಹ ಉತ್ಪನ್ನಗಳು ತಯಾರಾಗುವುದು ಯಂತ್ರಗಳ ಮೂಲಕ. ಅಲ್ಲಿ ಕಾರ್ಮಿಕರ ಬಳಕೆ ಕಡಿಮೆ. ಆದರೆ ಬೀಡಿ ಉದ್ಯಮ ಶೇ.100 ರಷ್ಟು ಕಾರ್ಮಿಕರನ್ನೇ ಅವಲಂಬಿಸಿದೆ. ಹೀಗಾಗಿ ಬೀಡಿ ಉದ್ಯಮ ಬಂದ್ ಆದಲ್ಲಿ ದೇಶದ ಲಕ್ಷಾಂತ ಜನರು ನಿರುದ್ಯೋಗಿಗಳಾಗುತ್ತಾರೆ.

ಬೀಡಿ ಸೇವನೆಯಿಂದಾಗಿ ಕ್ಯಾನ್ಸರ್ ಬರುತ್ತದೆ ಎಂಬ ಮಾತಿದೆ ಎಂದು ಹಿರಿಯ ಬೀಡಿ ಕಾರ್ಮಿಕರಲ್ಲಿ ಒಬ್ಬರು ‘‘ಅದೆಲ್ಲಾ ಸುಳ್ಳು ಸುದ್ದಿ, ನಾನು ಹಿಂದಿನಿಂದಲೂ ಬೀಡಿ ಕಟ್ಟುತ್ತಿದ್ದೇನೆ. ನಮ್ಮ ಮನೆಯವರು ಕೂಡ ಬೀಡಿ ಸೇದುತ್ತಾರೆ, ಅವರಿಗೆ ಯಾರಿಗೂ ಕೂಡ ಕ್ಯಾನ್ಸರ್ ಬಂದಿಲ್ಲ. ಬೀಡಿ ಸೇವನೆಯಿಂದಾಗಿ ಕ್ಯಾನ್ಸರ್ ಬಂದಿರುವವರನ್ನು ನಮಗೆ ತೋರಿಸಿಕೊಡಿ ಎಂದು ಹೇಳುವವರು ಬೀಡಿಯನ್ನು ನಿಷೇಧ ಮಾಡಲಿಕ್ಕೋಸ್ಕರ ಕ್ಯಾನ್ಸರ್ ಬರುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.’’ ಎಂದು ಮುಗ್ಧವಾಗಿ ಉತ್ತರಿಸುತ್ತಾರೆ. ಇಂತಹ ಪೊಳ್ಳು ನೆಪವೊಡ್ಡಿ ಬೀಡಿ ಉದ್ಯಮವನ್ನೇ ಮುಚ್ಚಲು ಹೊರಟಿರುವ ಕೇಂದ್ರ ಸರಕಾರದ ಕ್ರಮಗಳಿಂದಾಗಿ ಇಡೀ ಬೀಡಿ ಉದ್ಯಮವೇ ತಯಾರಿಕೆಯನ್ನು ಬಹುತೇಕ ಸ್ತಗಿತಗೊಳಿಸಿದ್ದು ಬಡವರ ಬದುಕೇ ಇಂದು ಉರಿಯತೊಡಗಿದೆ. ರಾಜ್ಯದಲ್ಲಿ ಸುಮಾರು 400 ರಷ್ಟು ಬೀಡಿ ಕಂಪೆನಿಗಳು ಮಾತ್ರ ಇಂದು ಬೀಡಿ ತಯಾರಿಕೆಯಲ್ಲಿ ತೊಡಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಸದ್ಯ ಬೀಡಿಗೆ ಕೊರತೆ ಉಂಟಾಗಿಲ್ಲ.

ಈ ಹಿಂದೆ ಸರಕಾರ ಬೀಡಿ ಕಾರ್ಮಿಕರಿಗೆ ಕೆಲವೊಂದು ಸವಲತ್ತುಗಳನ್ನು ಕೊಡುತ್ತಿತ್ತು. ಪಿಂಚಣಿ ಸೌಲಭ್ಯದ ಜೊತೆಗೆ ಪಾಸ್‌ಬುಕ್ ಹೊಂದಿರುವ ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಜೊತೆಗೆ ಇನ್ನಿತರ ಸೌಲಭ್ಯ ದೊರಕುತ್ತಿತ್ತು. ಆದರೆ ಕಳೆದ ವರ್ಷಗಳಿಂದ ಈ ಎಲ್ಲಾ ಸೌಲಭ್ಯಗಳನ್ನು ಸ್ತಗಿತಗೊಳಿಸಲಾಗಿದೆ. ಇದರ ಹಿಂದೆ ಬೀಡಿ ಉದ್ಯಮ ನಿಷೇಧದ ಛಾಯೆ ಕೂಡ ಇದೆಯೆನ್ನುವುದು ಬೀಡಿ ಕಾರ್ಮಿಕರ ಮುಖಂಡರ ಅಂಬೋಣ.

ರಾಜ್ಯದಲ್ಲಿ ಒಟ್ಟಾರೆಯಾಗಿ ಸುಮಾರು ಹತ್ತು ಸಾವಿರದಷ್ಟು ಬೀಡಿ ಕಾರ್ಮಿಕರಿದ್ದು ಅವರದೇ ಆದ ಹಲವಾರು ಯೂನಿಯನ್‌ಗಳು ಇದ್ದರೂ ಕೂಡ ರಾಜಕೀಯವಾಗಿ ಬಲಿಷ್ಠವಾಗಲು ಇನ್ನು ಸಾಧ್ಯವಾಗಿಲ್ಲ. ಚುನಾವಣಾ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಉಲ್ಲೇಖಿಸಿ ಅವರನ್ನು ಓಲೈಸುವಲ್ಲಿ ಯಶಸ್ವಿಯಾದ್ರೂ ಕೂಡ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಅನುಷ್ಠಾನ ತರುವಲ್ಲಿ ವಿಲವಾಗಿದೆ. ಬೀಡಿ ಕಾರ್ಮಿಕರ ಪರವಾಗಿ ಸದ್ಯ ಹೋರಾಟ ಮಾಡುವ ಪಕ್ಷವೆಂದರೆ ಅದು ಸಿಪಿಎಂ ಮಾತ್ರ. ಇದು ಬೀಡಿ ಕಾರ್ಮಿಕರಿಗೂ ಗೊತ್ತಿರುವಂತಹ ವಿಚಾರ. ಆದರೆ ಚುನಾವಣೆಗಳಲ್ಲಿ ಮಾತ್ರ ಸಿಪಿಎಂ ಪಕ್ಷ ಅಕವಾಗಿ ಸದಸ್ಯರನ್ನು ಹೊಂದಿರುವ ಕರಾವಳಿ ಭಾಗದಲ್ಲಿ ಹೀನಾಯವಾಗಿ ಸೋಲುತ್ತದೆ. ಕಾರ್ಮಿಕ ವರ್ಗದ ಪರವಿರುವ ಪಕ್ಷಕ್ಕೆ ಕಾರ್ಮಿಕರೇ ಬೆಂಬಲ ನೀಡದಿರುವುದು ಮತ್ತು ಕಾರ್ಮಿಕವರ್ಗದವರನ್ನು ಸರಿಯಾಗಿ ಓಲೈಸದೆ ತಳಮಟ್ಟದಲ್ಲಿ ಗುರಿಯನ್ನು ಮುಟ್ಟದೆ ವಿಲವಾಗಿರುವುದರಿಂದಾಗಿ ಆ ವರ್ಗದವರು ಬಿಜೆಪಿ ಮತ್ತು ಕಾಂಗ್ರೆಸ್ಸಿಗರಿೆ ಮತ ಹಾಕಲು ಕಾರಣವಿರಬಹುದು.

ಏನೇ ಆಗಲಿ ಒಂದು ಕಾಲದಲ್ಲಿ ಮಂಗಳೂರು ಬೀಡಿಗಳೆಂದರೆ ತುಂಬಾ ಹೆಸರುವಾಸಿಯಾಗಿತ್ತು. ಆದರೆ ಈಗ ಬೀಡಿ ಉತ್ಪಾದನೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ. ಇದಕ್ಕೆ ಬದಲಾದ ಜೀವನ ಪದ್ದತಿ ಮತ್ತು ಈಗಿನ ತಲೆಮಾರು ಶಿಕ್ಷಣದ ಕಡೆಗೆ ಹೆಚ್ಚು ಒಲವು ಕೊಡುವುದರಿಂದ ಬೀಡಿ ಕಟ್ಟುವವರ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಬಹುದು.

Writer - ಅವಿನಾಶ್ ಕಡೇಶಿವಾಲಯ

contributor

Editor - ಅವಿನಾಶ್ ಕಡೇಶಿವಾಲಯ

contributor

Similar News