ಬಿಎಸ್‌ವೈ-ರಾಯಣ್ಣ ಬ್ರಿಗೇಡ್ ನಡುವೆ ಮುಸುಕಿನ ಗುದ್ದಾಟ

Update: 2017-01-10 14:55 GMT

ಬೆಂಗಳೂರು, ಜ. 10: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿರುವ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ಅವರನ್ನ್ನು ಬಿಜೆಪಿ ಸದಸ್ಯತ್ವದಿಂದ ಅಮಾನತ್ತು ಮಾಡಲಾಗಿದೆ.

ಮಂಗಳವಾರ ಈ ಸಂಬಂಧ ಬಿಜೆಪಿಯ ಬೆಂಗಳೂರು ಮಹಾ ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ ‘ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, 3ದಿನಗಳೊಳಗೆ ಉತ್ತರ ನೀಡಲು ಪತ್ರಬರೆಯಲಾಗಿತ್ತು. ಆದರೆ, ಇದುವರೆಗೂ ತಮ್ಮಿಂದ ಪ್ರತಿಕ್ರಿಯೆ ಬಂದಿಲ್ಲ. ಆದುದರಿಂದ ಈ ತಕ್ಷಣದಿಂದಲೇ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತುಗೊಳಿಸಲಾಗಿದೆ’ ಎಂದು ಆದೇಶ ಹೊರಡಿಸಿದ್ದಾರೆ.

ಮಂಗಳವಾರ ಈ ಸಂಬಂಬಿಜೆಪಿಯಬೆಂಗಳೂರುಮಹಾನಗರಬಿಜೆಪಿಅ್ಯಕ್ಷ ಪಿ.ಎನ್.ಸದಾಶಿವ ‘ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, 3ದಿನಗಳೊಳಗೆ ಉತ್ತರ ನೀಡಲು ಪತ್ರಬರೆಯಲಾಗಿತ್ತು. ಆದರೆ, ಇದುವರೆಗೂ ತಮ್ಮಿಂದ ಪ್ರತಿಕ್ರಿಯೆ ಬಂದಿಲ್ಲ. ಆದುದರಿಂದ ಈ ತಕ್ಷಣದಿಂದಲೇ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತುಗೊಳಿಸಲಾಗಿದೆ’ ಎಂದು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಡುವಿನ ಜಗಳ ಮತ್ತಷ್ಟು ತಾರಕಕ್ಕೇರುವ ಎಲ್ಲ ಸೂಚನೆಗಳಿವೆ. ಜ.26ಕ್ಕೆ ಬಾಗಲಕೋಟೆ, ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾರಂಭದ ಅಂಗವಾಗಿ ಬುಧವಾರ(ಜ.11) ಬನಶಂಕರಿ 2ನೆ ಹಂತದಲ್ಲಿನ ಶ್ರೀಹರಿ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.

ಆ ಸಭೆಯಲ್ಲಿ ಬ್ರಿಗೇಡ್ ಗೌರವಾಧ್ಯಕ್ಷ ವಿರೂಪಾಕ್ಷಪ್ಪ, ಮುಖ್ಯ ಅತಿಥಿಗಳಾದ ಕೆ. ಎಸ್.ಈಶ್ವರಪ್ಪ ಪಾಲ್ಗೊಳ್ಳಲಿದ್ದು, ಆ ಚಟುವಟಿಕೆಗಳಲ್ಲಿ ವೆಂಕಟೇಶ್‌ಮೂರ್ತಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಮಾನತ್ತು ಮಾಡಲಾಗಿದೆ ಎಂದು ಗೊತ್ತಾಗಿದೆ.

ಕುರುಬರ ಸಂಘ ಹಿರಿಯ ಮುಖಂಡರೂ ಆಗಿರುವ ವೆಂಕಟೇಶ್‌ಮೂರ್ತಿ, ಮೂರು ಬಾರಿ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಮೇಯರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಈ ಮಧ್ಯೆ ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಆಗಿಯೂ ವೆಂಕಟೇಶ್‌ಮೂರ್ತಿ ಕೆಲಸ ಮಾಡುತ್ತಿದ್ದರು.

ಕುರುಬರ ಸಂಘ ಹಿರಿಯ ಮುಖಂಡರೂ ಆಗಿರುವ ವೆಂಕಟೇಶ್‌ಮೂರ್ತಿ, ಮೂರು ಬಾರಿ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಮೇಯರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಈ ಮ್ಯೆರಾಯಣ್ಣಬ್ರಿಗೇಡ್‌ಪ್ರಾನ ಕಾರ್ಯದರ್ಶಿ ಆಗಿಯೂ ವೆಂಕಟೇಶ್‌ಮೂರ್ತಿ ಕೆಲಸ ಮಾಡುತ್ತಿದ್ದರು. ‘ತಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ಯಾವುದೇ ರೀತಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ತನಗೆ ಯಾವುದೇ ಮುನ್ಸೂಚನೆ ನೀಡದೆ ತನ್ನನ್ನು ಅಮಾನತ್ತು ಮಾಡಿದ್ದು ಈ ಬಗ್ಗೆ ಸ್ಪಷ್ಟಣೆ ಕೋರುವೆ. ದಲಿತ, ಹಿಂದುಳಿದವರ ಅಭಿವೃದ್ಧಿ ದೃಷ್ಟಿಯಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ತುಂಬಾ ಹಿಂದಿನಿಂದಲೇ ಗುರುತಿಸಿಕೊಡಿದ್ದೇನೆ. ಆ ಚಟುವಟಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’

-ವೆಂಕಟೇಶ್‌ಮೂರ್ತಿ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News