ಭದ್ರತೆಗೆ ವೆಚ್ಚ ಮಾಡಲು ಭಾರತ ಸಿದ್ದವಾಗಲಿ...

Update: 2017-01-11 18:48 GMT

ಗಡಿ ಭದ್ರತಾ ಪಡೆಯ ಕಾನ್‌ಸ್ಟೇಬಲ್ ತೇಜ್ ಬಹಾದ್ದೂರ್ ಯಾದವ್ ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಧರಿಗೆ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಅಂತರ್ಜಾಲದಲ್ಲಿ ಪ್ರಸಾರ ಮಾಡಿರುವ ವೀಡಿಯೊ ರೂಪದ ದೂರು ನಿಸ್ಸಂಶಯವಾಗಿ ತೊಂದರೆ ಸೃಷ್ಟಿಸುವಂತಹದ್ದು. ಹೀಗೆ ವೀಡಿಯೊವನ್ನು ಪ್ರಸಾರ ಮಾಡುವುದು ಕೇವಲ ಬಿಎಸ್‌ಎಫ್ ಮಾತ್ರವಲ್ಲ ಇತರ ಯಾವುದೇ ಪೊಲೀಸ್ ಪಡೆಯ ನೀತಿ ಮತ್ತು ನಿಯಮಗಳ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿ ಬಿಎಸ್‌ಎಫ್ ತೇಜ್ ಬಹಾದ್ದೂರ್ ತನ್ನ 20 ವರ್ಷದ ಸೇವೆಯಲ್ಲಿ ನಿಭಾಯಿಸಲು ಅತ್ಯಂತ ಕಷ್ಟ ಜವಾನನಾಗಿದ್ದ ಎಂದು ಹೇಳುವಾಗ ಅದು ನಿಮ್ಮ ದಿಕ್ಕುತಪ್ಪಿಸಲು ಯತ್ನಿಸುತ್ತಿಲ್ಲ. ಆದರೆ, ಈತ ತನ್ನ ರಾಜಕೀಯ ಸಿದ್ಧಾಂತವನ್ನು ಹೇರುವ ಸಲುವಾಗಿ ಸೇನೆಯನ್ನು ಬಳಸುವ ನೂತನ ರಾಜಕೀಯ ಸಂಸ್ಕತಿಯ ಸೃಷ್ಟಿಯಾಗಿದ್ದಾನೆ.

ನೋಟು ಅಮಾನ್ಯತೆ ಅಥವಾ ಇತರ ಯಾವುದೇ ಅಂಥಾ ವಿಷಯಗಳ ಬಗ್ಗೆ ದೂರುವ ಜನರಿಗೆ ಗಡಿರೇಖೆಯಲ್ಲಿ ಕಾವಲು ಕಾಯುವ ಯೋಧರ ಕಷ್ಟಗಳೇನು ಎಂಬುದನ್ನು ನೆನಪಿಸಲು ಇದೊಂದು ಪರಿಕಲ್ಪನೆಯಾಗಿದೆ. ಹಾಗಾಗಿ, ಜವಾನನ್ನು ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಶ್ನಿಸುವ ಬದಲು ಗೃಹ ಸಚಿವ ರಾಜನಾಥ ಸಿಂಗ್ ಮತ್ತವರ ಸಹಮಂತ್ರಿ ಕಿರಣ್ ರಿಜಿಜು ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಜವಾನರ ಕಲ್ಯಾಣದತ್ತ ತಮ್ಮ ಬದ್ಧತೆಯನ್ನು ತೋರಿಸಲು ಹೆಣಗಾಡುತ್ತಿದ್ದಾರೆ. ಅದಾಗ್ಯೂ, ಈ ದೇಶದ ಪೊಲೀಸರು ಮತ್ತು ಅರೆಸೈನಿಕ ಪಡೆಯ ಸಿಬ್ಬಂದಿ ನಿಜವಾಗಿಯೂ ಕಠಿಣವಾಗಿದ್ದಾರೆ ಎಂಬುದನ್ನು ಹೇಳಬೇಕಾದ ಅಗತ್ಯವಿದೆ. ಈ ದೇಶದ ದರ್ಜೆಯನ್ನು ಪರಿಗಣಿಸಿದರೆ ಅವರು ಆಶಿಸಿದಂಥಾ ಉದ್ಯೋಗವೇ ದೊರಕಿರುತ್ತದೆ-ಉತ್ತಮ ವೇತನ ಪಡೆಯುವ ಮತ್ತು ನಿವೃತ್ತರಾದ ನಂತರ ಪಿಂಚಣಿ ಪಡೆಯುವಂಥಾ.

ಆದರೆ ಅವರು ಕೆಲಸ ಮಾಡುವ ಪರಿಸ್ಥಿತಿ ಕೂಡಾ ಭಾರತೀಯ ಸೇನೆಗೆ ಹೋಲಿಸಿದರೆ ಬಹಳ ಕಠಿಣವಾಗಿರುತ್ತದೆ. ಸಿಆರ್‌ಪಿಎಫ್ ಅಂತೂ ಚುನಾವಣಾ ಸಂದರ್ಭವನ್ನು ನಿಭಾಯಿಸುವುದರಿಂದ ಹಿಡಿದು ಛತ್ತೀಸ್‌ಗಡದಲ್ಲಿ ಮಾವೋವಾದಿಗಳ ವಿರುದ್ಧ ಹೋರಾಡುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದಿಗಳನ್ನು ಸದೆಬಡಿಯುವಂಥಾ ಎಲ್ಲಾ ಆಕಸ್ಮಿಕಗಳೊಂದಿಗೂ ಸೆಣಸಾಡಬೇಕಾಗುತ್ತದೆ. ಅವರಿಗೆ ವಿಶ್ರಾಂತಿಗೆ ಮತ್ತು ತರಬೇತಿಗೆ ಅತ್ಯಂತ ಕಡಿಮೆ ಸಮಯ ದೊರೆಯುತ್ತದೆ ಮತ್ತು ಬಹಳಷ್ಟು ಬಾರಿ ಜವಾನರಿಗೆ ತಮ್ಮ ವಾರ್ಷಿಕ ರಜೆ ಕೂಡಾ ಸಿಗುವುದಿಲ್ಲ. ಇವೆಲ್ಲದರ ಮಧ್ಯೆಯೂ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ನ ಗಾತ್ರವು ವರ್ಷ ಕಳೆದಂತೆ ದೊಡ್ಡದಾಗುತ್ತಾ ಸಾಗಿದೆ. 2004ರಲ್ಲಿ ಬಿಎಸ್‌ಎಫ್ 2,10,000 ಸೈನಿಕರನ್ನು ಹೊಂದಿತ್ತು. ಇಂದು ಆ ಸಂಖ್ಯೆ 2,60,000ಕ್ಕೆ ತಲುಪಿದೆ. ಇನ್ನು 2004ರಲ್ಲಿ 2,30,000 ಇದ್ದ ಆರ್‌ಪಿಎಫ್ ಪಡೆ ಇಂದು ಸುಮಾರು 3,10,000ಕ್ಕೆ ಏರಿದೆ. ಈ ಸಂಸ್ಥೆಗಳ ವ್ಯವಹಾರಗಳ ಜವಾಬ್ದಾರಿಯು ಗೃಹ ಇಲಾಖೆ ಮತ್ತು ಸಂಬಂಧಪಟ್ಟ ಪಡೆಗಳ ಹಿರಿಯ ಅಧಿಕಾರಿಗಳ ಮೇಲೆ ಇರುತ್ತದೆ. ಆಂತರಿಕ ಭದ್ರತಾ ವ್ಯವಸ್ಥೆಗೆ ಉತ್ತಮ ತರಬೇತಿ ಪಡೆದ, ಉತ್ತಮ ಪಡೆಬೇಕಾದರೆ ಅದನ್ನು ಖಾತರಿಪಡಿಸಲು ಜನಬಲದ ಗಾತ್ರವನ್ನು ತಮ್ಮ ಮಂತ್ರಿಗಳಿಗೆ ಸೂಚಿಸುವಂತೆ ಸಚಿವಾಲಯಕ್ಕೆ ತಿಳಿಸುವ ಕರ್ತವ್ಯವು ಸೇನೆಯ ನಾಯಕತ್ವದ್ದಾಗಿದೆ. ಜನರನ್ನು ನೇಮಕ ಮಾಡಿ ನಂತರ ಅವರನ್ನು ಅರೆಹೊಟ್ಟೆಯಲ್ಲಿ ಇರಿಸುವುದು ಅವರ ನೈತಿಕ ಸ್ಥೈರ್ಯ ಮತ್ತು ಸಿಬ್ಬಂದಿಯ ದೈಹಿಕ ದೃಢತೆಯ ಮೇಲೆ ಪರಿಣಾಮ ಬೀರುತ್ತದೆ. ಸೇನೆಯು ತನ್ನ ಜವಾನರ ಕಾಳಜಿ ವಹಿಸುತ್ತದೆ.

ಉದಾಹರಣೆಗೆ ಎಲ್ಲಾ ಸೈನಿಕರು ವರ್ಷದಲ್ಲಿ ಎರಡೂವರೆ ತಿಂಗಳು ರಜೆಯನ್ನು ಪಡೆಯುತ್ತಾರೆ ಮತ್ತು ಅವರನ್ನು ಅದನ್ನು ಪಡೆದುಕೊಳ್ಳುವಂತೆ ಅವರ ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಾರೆ. ಮತ್ತೆ, ಸೇನೆಯು ಸರದಿ ವ್ಯವಸ್ಥೆಯನ್ನು ಅನುಸರಿಸುತ್ತದೆ ಇದರಿಂದ ಪ್ರತೀ ಕಾರ್ಯಾಚರಣಾ ನಿಯೋಜನೆಯ ನಂತರ ಆ ಬೆಟಾಲಿಯನ್ನನ್ನು ಶಾಂತ ಪ್ರದೇಶಕ್ಕೆ ನಿಯುಕ್ತಿ ಮಾಡಲಾಗುತ್ತದೆ ಅಲ್ಲಿ ಜವಾನರು ಸ್ವಲ್ಪ ಮಟ್ಟಿನ ಸಾಂಸಾರಿಕ ಜೀವನದ ಆನಂದ ಪಡೆಯಬಹುದಾಗಿದೆ. ಎರಡನೆಯದಾಗಿ ಭಾರತೀಯ ಸೇನೆಯ ಆಹಾರ ಸಾಮಗ್ರಿಗಳನ್ನು ಕೇಂದ್ರ ಅರೆಸೇನಾ ಪಡೆಯಂತೆ (ಸಿಪಿಎಂಎಫ್) ಸ್ಥಳೀಯವಾಗಿ ಖರೀದಿಸಲಾಗುವುದಿಲ್ಲ. ಅದರ ಸಂಗ್ರಹಣೆ ಮತ್ತು ಹಂಚಿಕೆಯು ಕೇಂದ್ರೀಯ ಮಟ್ಟದಲ್ಲಿ ನಡೆಯುತ್ತದೆ ಮತ್ತು ವಿತರಣೆ ಕೂಡಾ ಆದಷ್ಟು ಉದಾರವಾಗಿರುತ್ತದೆ-ಅಂದರೆ, ನಿರ್ದಿಷ್ಟ ಪ್ರಮಾಣದಲ್ಲಿ ಮಾಂಸ, ಗೋಧಿ, ಅಕ್ಕಿ, ಬೇಳೆ, ಮೊಟ್ಟೆಗಳು ಮತ್ತು ತರಕಾರಿಗಳನ್ನು ನೀಡಲಾಗುತ್ತದೆ. ಇದರಲ್ಲಿ ಕೇಂದ್ರ ಮಟ್ಟದಲ್ಲಿ ಹಗರಣಗಳು ನಡೆದಿರಬಹುದು. ಅದರೆ ಜವಾನನಿಗೆ ತಲುಪಬೇಕಾಗಿರುವುದು ತಲುಪುತ್ತದೆ ಮತ್ತು ಅಧಿಕಾರಿಗಳು ಅದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಸಿಪಿಎಂಎಫ್ ಜವಾನರು ಮತ್ತು ಭಾರತೀಯ ಸೇನಾ ಯೋಧರ ಮಧ್ಯೆ ಇರುವ ನಿಜವಾದ ವ್ಯತ್ಯಾಸವಿರುವುದು ಅವರು ಪಡೆಯುವ ನಾಯಕತ್ವದ ಗುಣಮಟ್ಟದಲ್ಲಿ-ಮತ್ತು ಅದೇ ಅನೇಕ ಇತರ ಸಮಸ್ಯೆಗಳಿಗೆ ಮೂಲವಾಗಿದೆ.

ಮೂವತ್ತು ಯೋಧರ ಪಡೆಯನ್ನು ತನ್ನ ಸೇವೆಯ ಆರಂಭದಲ್ಲಿ ಮುನ್ನಡೆಸಲು ಆರಂಭಿಸುವ ಲೆಫ್ಟಿನೆಂಟ್ ಅವರ ಜೊತೆ ಗಡಿರೇಖೆಯ ಸಮೀಪ ಕಾರ್ಯಾಚರಣೆ ನಡೆಸುತ್ತಾನೆ ಮತ್ತು ಚೀನಾ ಜೊತೆಗಿನ ವಾಸ್ತವ ನಿಯಂತ್ರಣ ರೇಖೆಯ ಸಮೀಪವೂ ಗಸ್ತು ತಿರುಗುತ್ತಾನೆ. ಆತ ಕಂಪೆನಿ ಕಮಾಂಡರ್ ಆಗಿ, ಬೆಟಾಲಿಯನ್ ಕಮಾಂಡರ್ ಆಗಿ ಭಡ್ತಿ ಪಡೆಯುತ್ತಾನೆ ಮತ್ತು ಮುಂದೆ ಒಂದು ಬ್ರಿಗೇಡ್, ವಿಭಾಗ ಅಥವಾ ಒಂದು ಸೇನೆಯನ್ನು ಕಮಾಂಡ್ ಮಾಡಬಹುದು. ಹಾಗಾಗಿ ಅತ್ಯಂತ ಉನ್ನತ ಅಧಿಕಾರಿಗಳು ಕೂಡಾ ಕೊನೆಯ ಹಂತದ ಜವಾನನ ಸಮಸ್ಯೆಗಳ ಬಗ್ಗೆ ತಿಳಿದಿರುತ್ತಾರೆ. ವಂಚಕರು ನಡೆಸುವ ಮೋಸದ ವ್ಯವಹಾರಗಳ ಬಗ್ಗೆಯೂ ಆತನಿಗೆ ತಿಳಿದಿರುತ್ತದೆ ಮತ್ತು ಶಿಸ್ತನ್ನು ಪ್ರತಿಷ್ಠಾಪಿಸಲು ಕಠಿಣ ಸೇನಾ ನ್ಯಾಯ ವ್ಯವಸ್ಥೆಯ ಬೆಂಬಲವೂ ಆತನಿಗಿರುತ್ತದೆ. ಆದರೆ ಕೊನೆಯದಾಗಿ ಆತ ಈ ಯೋಧರನ್ನು ಯುದ್ಧದಲ್ಲೂ ಮುನ್ನಡೆಸಬೇಕು ಎಂಬುದು ಆತನಿಗೆ ತಿಳಿದಿರುತ್ತದೆ ಹಾಗಾಗಿ ಕೇವಲ ಶಿಸ್ತು ಮಾತ್ರವಲ್ಲ ನಾಯಕತ್ವದ ಗುಣಮಟ್ಟವೂ ಇಲ್ಲಿ ಗಣನೆಗೆ ಬರುತ್ತದೆ. ಇದು ಸಿಪಿಎಂಎಫ್‌ಗಿಂತ ಬಹಳ ಭಿನ್ನವಾಗಿದೆ. ಇಲ್ಲಿ ಡಿಐಜಿಗಿಂತ ಉನ್ನತ ಪದವಿಯನ್ನು ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಗಳು ಅಲಂಕರಿಸಿರುತ್ತಾರೆ. ಇವರು ಅಕ್ಷರಶಃ ಆ ಕ್ಷೇತ್ರದ ಬಗ್ಗೆ ಅತ್ಯಂತ ಕನಿಷ್ಠ ಜ್ಞಾನ ಮತ್ತು ಅನುಭವವನ್ನು ಹೊಂದಿದ್ದರೂ ಕಮಾಂಡಿಂಗ್ ಸ್ಥಾನವನ್ನು ಅಲಂಕರಿಸಿರುತ್ತಾರೆ. ಸಿಪಿಎಂಎಫ್ ಜವಾನರನ್ನು ಬಹಳಷ್ಟು ಬಾರಿ ಸಣ್ಣ ತಂಡಗಳಲ್ಲಿ ನಿಯೋಜಿಸಲಾಗುತ್ತದೆ ಇದರಿಂದ ಕಮಾಂಡಿಂಗ್ ಮತ್ತು ನಿಯಂತ್ರಣ ಕಷ್ಟಕರವಾಗುತ್ತದೆ.

ರಾಜ್‌ನಾಥ್ ಸಿಂಗ್ ಮತ್ತು ಇತರರು ತಮಗೆ ಜವಾನರ ಬಗ್ಗೆ ಕಾಳಜಿಯಿದೆ ಎಂದು ಎಷ್ಟೇ ವಾದಿಸಿದರೂ ನಿಜವಾಗಿ ಹೇಳಬೇಕೆಂದರೆ ಬಿಎಸ್‌ಎಫ್ ಮತ್ತು ಪ್ರಮುಖವಾಗಿ ಸಿಆರ್‌ಎಫ್‌ಗೆ ಸಿಗುವುದು ಮಾತ್ರ ಅಳಿದುಳಿದ ಭಾಗವೇ. ಬಿಎಸ್‌ಎಫ್‌ನ ನಿಯೋಜಿಸುವ ಪ್ರದೇಶಗಳು ಹಲವು ಬಾರಿ ತೀವ್ರ ದುಸ್ತರವಾಗಿರುತ್ತದೆ ಆದರೆ ಅವರಿಗೆ ಸೇನಾ ಜವಾನರಷ್ಟು ಉತ್ತಮ ದರ್ಜೆಯ ಆಹಾರ ಸಾಮಗ್ರಿ ಅಥವಾ ರಜೆ ಮತ್ತು ವಿಶ್ರಾಂತಿ ಸಿಗುವುದಿಲ್ಲ. ಇನ್ನು ಆರ್‌ಪಿಎಫ್ ಜವಾನರು, ಬದಲಾಯಿಸುತ್ತಲೇ ಇರುವ ಅವರ ನಿಯೋಜನೆಯನ್ನು ಕುರಿತು ವ್ಯಂಗ್ಯವಾಗಿ ತಮ್ಮ ಪಡೆಯನ್ನು, ಚಲ್ತೆ ರಹೋ ಪ್ಯಾರೇ ಫೋರ್ಸ್ (ಆರ್‌ಪಿಎಫ್) ನಡೆಯುತ್ತಲೇ ಇರಿ ಪ್ರೀತಿಯ ಜವಾನರೆ ಎಂದು ಹೆಸರಿಸುತ್ತಾರೆ. ಇದೆಲ್ಲವೂ, ಸಾಮಾನ್ಯ ನಾಗರಿಕ ಪೊಲೀಸಿಗೆ ಹೋಲಿಸಿದಾಗ ಪೇಲವವಾಗಿ ಕಾಣುತ್ತದೆ. ನಾವಿಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಯ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಅತ್ಯಂತ ಕಡಿಮೆ ಸವಲತ್ತು ಪಡೆಯುವ ಸಾಮಾನ್ಯ ಕಾನ್‌ಸ್ಟೇಬಲ್ ಬಗ್ಗೆ ಮಾತನಾಡುತ್ತಿದ್ದೇವೆ. ಗುಡಿಸಲಿನಂಥಾ ಮನೆಗಳಲ್ಲಿ ವಾಸಿಸುವ ಇವರ ಪೊಲೀಸ್ ಠಾಣೆಗಳಲ್ಲೂ ಕೂಡಾ ಮೂಲಸೌಕರ್ಯದ, ಸದೃಢ ಕಟ್ಟಡದ ಮತ್ತು ಇತರ ಸವಲತ್ತುಗಳ ಕೊರತೆಯಿರುತ್ತದೆ. ತೇಜ್ ಬಹಾದ್ದೂರ್ ಯಾದವ್‌ನ ದೂರಿನಿಂದ ಪಡೆಯುವ ಸರಳ ಸಂದೇಶವೆಂದರೆ ನಿಮಗೆ ಭದ್ರತೆ ಬೇಕಾದರೆ ಅದಕ್ಕೆ ಪಾವತಿಸಲು ಸಿದ್ಧರಾಗಿರಿ.

Writer - ಮನೋಜ್ ಜೋಶಿ

contributor

Editor - ಮನೋಜ್ ಜೋಶಿ

contributor

Similar News