‘ಹನಿ ಟ್ರ್ಯಾಪಿಂಗ್’ ದಂಧೆಗೆ ಕಡಿವಾಣ ಹಾಕಿ

Update: 2017-01-13 19:04 GMT

ಮಾನ್ಯರೆ,
ರಾಜಧಾನಿಯಲ್ಲಿ ಹಣ ಸುಲಿಗೆ ಮಾಡಲು ವಂಚಕರು ದಿನನಿತ್ಯ ವಿವಿಧ ರೀತಿಯ ಮಾರ್ಗಗಳನ್ನ್ನು ಬಳಸುತ್ತಾರೆ, ತಂತ್ರಗಳನ್ನೂ ರೂಪಿಸುತ್ತಾರೆ. ಇದಕ್ಕೊಂದು ಉದಾಹರಣೆ ‘ಹನಿ ಟ್ರ್ಯಾಪಿಂಗ್’.

ಹುಡುಗಿಯರನ್ನು ಮುಂದಿಟ್ಟುಕೊಂಡು ಹನಿ ಟ್ರ್ಯಾಪಿಂಗ್ ಮೂಲಕ ಜನರನ್ನು ಯಾಮಾರಿಸಿ, ಬೆದರಿಸಿ ಹಣ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ. ಇದು ಹೆಚ್ಚಾಗಿ ಆನ್‌ಲೈನ್ ಮುಖಾಂತರವೇ ನಡೆಯುತ್ತಿರುವುದು ಗಮನಾರ್ಹ. ಉದ್ಯೋಗ ಮಾಡದೇ ಬಿಟ್ಟಿಯಾಗಿ ಹಣ ಮಾಡಲು ಹನಿ ಟ್ರ್ಯಾಪಿಂಗ್ ದಂಧೆ ಮಾಡಲಾಗುತ್ತಿದೆ. ಹಿಂದೆ ಹನಿ ಟ್ರ್ಯಾಪಿಂಗ್ ಮೂಲಕ ರಾಜಕಾರಣಿಗಳ ಅಸಲಿ ಮುಖವನ್ನು ಬಯಲಿಗೆಳೆಯಲಾಗುತ್ತಿತ್ತು. ಇದೀಗ ಹನಿ ಟ್ರ್ಯಾಪಿಂಗ್ ದುಡ್ಡು ಮಾಡುವ ದಂಧೆಯಾಗಿ ಬೆಳೆಯುತ್ತಿದ್ದು, ಬೆಂಗಳೂರು ಪೊಲೀಸರು ಇದನ್ನ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಯುವಕರು ಈ ದಂಧೆಗೆ ಬಲಿಯಾಗುತ್ತಿದ್ದು, ತಾವು ಇಂತಹ ಪ್ರಕರಣಗಳಿಗೆ ಬಲಿಯಾಗಿ ಹಣ ಕಳೆದುಕೊಂಡರೂ ಮರ್ಯಾದೆಗೋಸ್ಕರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಕೂಡಾ ಇಂತಹ ಪ್ರಕರಣಗಳು ಬೆಳಕಿಗೆ ಬರದಿರಲು ಕಾರಣ. ಈ ದಂಧೆ ಕುರಿತು ಜಾಗೃತಿ ಮೂಡಿಸುವ ಮೂಲಕ ಹನಿ ಟ್ರ್ಯಾಪಿಂಗ್‌ಗೆ ಕಡಿವಾಣ ಹಾಕಬೇಕಾಗಿದೆ. ಜೊತೆಗೆ ವಂಚಕರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಕಳುಹಿಸಬೇಕಾಗಿದೆ.

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News