ಜಿ-ಮೇಲ್ ಬಳಕೆದಾರರೇ, ಎಚ್ಚರಿಕೆ! ಸ್ವಲ್ಪ ಎಡವಿದರೂ ಈ ಹೊಸ ವಂಚನೆಯಿಂದ ಹ್ಯಾಕ್ ಆಗುತ್ತೆ ನಿಮ್ಮ ಇ-ಮೇಲ್!

Update: 2017-01-18 16:59 GMT

ಜಿಮೇಲ್ ಬಳಕೆದಾರರ ಇ-ಮೇಲ್ ಖಾತೆಗಳಿಗೆ ಕನ್ನ ಹಾಕಲು ಹ್ಯಾಕರ್‌ಗಳು ಸಜ್ಜಾಗಿದ್ದಾರೆ; ಹುಷಾರ್. ತಮ್ಮ ಗೂಗಲ್ ಖಾತೆ ವಿವರಗಳನ್ನು ನೀಡುವ ಮೂಲಕ, ಈ ಹೊಸ ತಂತ್ರದಿಂದಾಗಿ ತಂತ್ರಜ್ಞಾನ ದಿಗ್ಗಜರು ಕೂಡಾ ಬೇಸ್ತುಬಿದ್ದಿದ್ದಾರೆ.

ಇ-ಮೇಲ್ ಖಾತೆಯ ಅಡ್ರೆಸ್ ಬುಕ್‌ನಲ್ಲಿರುವ ಹೆಸರಿನಿಂದಲೇ ಇಂಥ ಹ್ಯಾಕಿಂಗ್ ಇ-ಮೇಲ್‌ಗಳು ನಿಮಗೆ ಬರುತ್ತವೆ. ಅಂಥ ಖಾತಗಳ ಜತೆ ರಾಜಿ ಮಾಡಿಕೊಂಡು ಈ ಹ್ಯಾಕಿಂಗ್ ಮೇಲ್ ಕಳುಹಿಸಲಾಗುತ್ತದೆ.

ಇಂಥ ಇ-ಮೇಲ್ ಸಾಮಾನ್ಯವಾಗಿ, ಅಟ್ಯಾಚ್‌ಮೆಂಟ್‌ನ ಚಿತ್ರವನ್ನು ಹೊಂದಿರುತ್ತದೆ. ಇದರ ಪ್ರಿವ್ಯೆ ನೋಡುವ ಸಲುವಾಗಿ ನೀವು ಅದನ್ನು ಕ್ಲಿಕ್ ಮಾಡಿದರೆ, ಹೊಸ ಟ್ಯಾಬ್ ತೋರಿಸುವ ಬದಲು, ನಿಮ್ಮನ್ನು ಮತ್ತೆ ಇ-ಮೇಲ್ ಐಡಿ ಸೈನ್ ಇನ್ ಮಾಡುವಂತೆ ಸೂಚಿಸುತ್ತದೆ. ನೀವು ಸೂಕ್ಷ್ಮವಾಗಿ ವೆಬ್‌ಸೈಟ್ ಅಡ್ರೆಸ್ ಬಾರ್ ನೋಡಿದರೆ, ನೀವು ಡಾಟಾ:ಟೆಕ್ಸಟ್/ಎಚ್‌ಟಿಎಂಎಲ್ ಎಂಬ ಟೆಕ್ಸ್ಟ್‌ಗಿಂತ ಮೊದಲು ಮಾಮೂಲಿ ಜಿಮೇಲ್ ಸೇವೆತ ಸರ್ವಿಸ್ ಲಾಗಿನ್ ವಿಳಾಸ ಗೋಚರವಾಗುತ್ತದೆ.

ಬಹುತೇಕ ಮಂದಿ ಇದು ನಿಜ ಎಂದು ತಿಳಿದು ಲಾಗಿನ್ ಮಾಡುವ ಮೂಲಕ ಹ್ಯಾಕಿಂಗ್ ಜಾಲದ ವಂಚನೆಗೆ ಒಳಗಾಗುವ ಅಪಾಯ ಇದೆ. ಆ ಲಿಂಗ್ ತೆರೆದಾಗ ಇತರ ಅಸಂಬಂದ್ಧ ಲಿಂಕ್‌ಗಳನ್ನು ತೆರೆಯುವಾಗ ಬರುವಂತೆ ಎಚ್ಚರಿಕೆ ಸಂದೇಶ ಕೂಡಾ ಬರುವುದಿಲ್ಲ.

ವರ್ಲ್ಡ್‌ಪ್ರೆಸ್‌ನ ವರ್ಲ್ಡ್‌ಫೆನ್ಸ್ ಸಿಇಓ ಮಾರ್ಕ್ ಮೌಂದೇರ್ ಮೊದಲ ಬಾರಿಗೆ ಇದನ್ನು ಪತ್ತೆ ಮಾಡಿದ್ದಾರೆ. ನಿಮ್ಮ ಜಿಮೇಲ್ ಲಾಗಿನ್ ವಿವರ ತಿಳಿದುಕೊಂಡ ತಕ್ಷಣ ನಿಮ್ಮ ಖಾತೆಗೆ ಲಾಗ್‌ಇನ್ ಆಗಿ, ನಿಮ್ಮ ಅಟ್ಯಾಚ್‌ಮೆಂಟ್‌ಗಳನ್ನು ಮತ್ತು ವಾಸ್ತವ ವಿಷಯವನ್ನು ನಮೂದಿಸಿ, ನಿಮ್ಮ ಖಾತೆದಾರರ ಲಿಸ್ಟ್‌ನಲ್ಲಿರುವವರಿಗೆ ಮೇಲ್ ಕಳುಹಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ.

ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ಫಿಶಿಂಗ್ ಇ-ಮೇಲ್ ಬರುವ ಸಾಧ್ಯತೆ ಇಲ್ಲ ಎಂದು ಅದನ್ನು ತೆರೆಯುವ ಗ್ರಾಹಕರು ಸುಲಭವಾಗಿ ಫಿಶಿಂಗ್ ಜಾಲಕ್ಕೆ ಸಿಲುಕುತ್ತಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News