ಯು.ವಿ.ಗೋವಿಂದ

Update: 2017-01-21 18:25 GMT

ಉಪ್ಪಿನಂಗಡಿ, ಜ.21: ಕಾಸರಗೋಡಿನ ಪಳ್ಳಂಗೋಡು ಎಂಬಲ್ಲಿ ನಾಲ್ಕು ದಶಕಗಳ ಕಾಲ ಕಾಂಪೌಂಡರ್ ಆಗಿದ್ದುಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ‘ಕಾಂಪೌಂಡರ್’ ಗೋವಿಂದ ಎಂದೇ ಚಿರಪರಿಚಿತರಾಗಿದ್ದ ಯು.ವಿ.ಗೋವಿಂದ (90) ಶಾಂತಿನಗರದ ತನ್ನ ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಮೂಲತಃ ಸುಳ್ಯ ತಾಲೂಕಿನ ಉಬರಡ್ಕದವರಾದ ಇವರು ಮಡಿಕೇರಿಯಲ್ಲಿ ಕಾಂಪೌಂಡರ್ ತರಬೇತಿ ಪಡೆದು, ಆರೋಗ್ಯ ಸೇವೆ ನೀಡುವಲ್ಲಿ ತೊಡಗಿಸಿಕೊಂಡವರು. ಅಲ್ಲದೇ, ಕೃಷಿಕರಾಗಿಯೂ ಗುರುತಿಸಿಕೊಂಡಿರುವ ಇವರು ಕಳೆದ 12 ವರ್ಷಗಳ ಹಿಂದೆ ಕೋಡಿಂಬಾಡಿ ಗ್ರಾಮದ ಶಾಂತಿನಗರಕ್ಕೆ ವಾಸ್ತವ್ಯ ಬದಲಾಯಿಸಿದ್ದು, ವಯೋ ಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಯು.ಜಿ.ರಾಧಾ ಸೇರಿದಂತೆ ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ