ನೂತನ ಪೆಲೆಸ್ತೀನ್ ದೇಶಕ್ಕೆ ಪೂರ್ವ ಜೆರುಸಲೇಮ್ ರಾಜಧಾನಿಯಾಗಲಿ: ಚೀನಾ ಅಧ್ಯಕ್ಷ

Update: 2017-01-23 04:01 GMT

ಬೀಜಿಂಗ್, ಜ.23: ನೂತನ ಪೆಲೆಸ್ತೀನ್ ದೇಶವನ್ನು ಅತಿಶೀಘ್ರವಾಗಿ ಸ್ಥಾಪಿಸಬೇಕು ಮತ್ತು 1967ರ ಯುದ್ಧದ ಪೂರ್ವದಲ್ಲಿದ್ದ ಗಡಿಗೆ ಅನುಸಾರವಾಗಿ ನೂತನ ದೇಶ ಸ್ಥಾಪನೆಯಾಗಬೇಕು. ಪೂರ್ವ ಜೆರುಸಲೇಮ್ ಇದರ ರಾಜಧಾನಿಯಾಗಲಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಸಲಹೆ ಮಾಡಿದ್ದಾರೆ.

ಮಧ್ಯಪ್ರಾಚ್ಯದ ಆರ್ಥಿಕ ಹಾಗೂ ರಾಜಕೀಯ ಸಂಘರ್ಷ ಸರಿಪಡಿಸಲು ಬೀಜಿಂಗ್ ಅಗತ್ಯ ನೆರವು ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೈರೊ ಮೂಲದ ಅರಬ್‌ ಲೀಗ್‌ನಲ್ಲಿ ಮಾತನಾಡಿದ ಅಧ್ಯಕ್ಷರು, ಪೆಲೆಸ್ತೀನ್ ಸಮಸ್ಯೆಯನ್ನು ಮೂಲೆಗುಂಪು ಮಾಡಬಾರದು ಎಂದು ಸೂಚಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಚೀನಾ ಸಹಕಾರ ನೀಡಲಿದೆ. ಹೊಸ ಪೆಲೆಸ್ತೀನ್ ದೇಶಕ್ಕೆ ಪೂರ್ವ ಜೆರುಸಲೇಂ ರಾಜಧಾನಿಯಾಗಬೇಕು ಎಂದು ಹೇಳಿದ್ದಾರೆ.

ಪೆಲೆಸ್ತೀನ್‌ಗೆ 7.6 ದಶಲಕ್ಷ ಡಾಲರ್ ನೆರವನ್ನು ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಘೋಷಿಸಿದರು.
ಜೆರುಸಲೇಂನ ಮೈತ್ರಿ ದೇಶವಾಗಿರುವ ಅಮೆರಿಕ, ಪೆಲೆಸ್ತೀನ್- ಇಸ್ರೇಲ್ ಬಿಕ್ಕಟ್ಟನ್ನು ಶಮನಗೊಳಿಸಿ ಶಾಂತಿ ಸ್ಥಾಪನೆ ಮಾಡುವ ಪ್ರಯತ್ನ ವಿಫಲವಾಗಿತ್ತು. ಪೆಲೆಸ್ತೀನ್ ಜನರ ಕಾನೂನುಬದ್ಧ ಹಿತಾಸಕ್ತಿಯನ್ನು ಕಾಪಾಡುವುದು ಅರಬ್ ಲೀಗ್ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿ ಎಂದು ಕ್ಸಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News