ದುಬೈ: ಜ.27ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋಟ್ಸ್ ಮೀಟ್- 2017’

Update: 2017-01-23 08:16 GMT

ದುಬೈ, ಜ.23: ಬ್ಯಾರೀಸ್ ಕಲ್ಚರಲ್ ಫೋರಮ್(ಬಿಸಿಎಫ್) ದುಬೈ ಇದರ ವಾರ್ಷಿಕ ಕ್ರೀಡಾಕೂಟ ‘ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋಟ್ಸ್ ಮೀಟ್- 2017’ ಜ.27ರಂದು ಯುಎಇ ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕ್ರೀಡಾಂಗಣದಲ್ಲಿ ಜರಗಲಿದೆ.

ಕ್ರೀಡಾಕೂಟದಲ್ಲಿ ಯುಎಇ ಹಾಗೂ ಇತರ ಗಲ್ಫ್ ದೇಶಗಳ ಸುಮಾರು 1000 ಕನ್ನಡಿಗರು ಹಾಗೂ ಕನ್ನಡೇತರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಥ್ರೋ ಬಾಲ್, ಹಗ್ಗಜಗ್ಗಾಟ, ಬ್ಯಾಡ್ಮಿಂಟನ್, ಫೂಸ್ಬಾಲ್, ಬಿಲಿಯಾರ್ಡ್ಸ್, ರೇಸ್, ರಿಲೇ, ಮಹಿಳೆಯರಿಗಾಗಿ, ಪಾಕ ಸ್ಪರ್ಧೆ, ಮೆಹಂದಿ, ಇತ್ಯಾದಿ ಸ್ಪರ್ಧೆಗಳು, ಮಕ್ಕಳಿಗಾಗಿ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಡಿದೆ.

ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತುಂಬೆ ಗ್ರೂಪ್ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಭಾಗವಹಿಸುವರು.

ಅತಿಥಿಗಳಾಗಿ ಝೈನ್ ಇಂಟರ್‌ನ್ಯಾಶನಲ್ ಇದರ ಅಧ್ಯಕ್ಷ ಹಾಗೂ ಬಿಸಿಎಫ್ ಪ್ರಧಾನ ಸಲಹೆಗಾರ ಝಫರುಲ್ಲಾ ಖಾನ್ ಹಾಗೂ ಬಿಸಿಎಫ್ ಸಲಹೆಗಾರ ಬರ್ಶಾ ಗ್ರೂಪ್ ಆಫ್ ಕಂಪೆನೀಸ್‌ನ ಎಂ.ಡಿ. ಫತಾವುಲ್ಲಾ ಸಾಹೇಬ್ ತೋನ್ಸೆ ಭಾಗವಹಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸುವವರು ಹಲವಾರು ಆಕರ್ಷಕ ರಾಫೆಲ್ ಡ್ರಾ ಬಹುಮಾನಗಳನ್ನೂ ಗೆಲ್ಲುವ ವಿಶೇಷ ಅವಕಾಶವಿದೆ. ಉಪಾಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ.

ಸ್ಪರ್ಧೆಯ ವಿವರ ಮತ್ತು ಮಾಹಿತಿಗಾಗಿ ರಫೀಕ್ ಮುಲ್ಕಿ: 050-5156284
ಅಫೀಖ್ ಹುಸೈನ್: 050-5883943
 ನವಾಝ್ ಕೋಟೆಕ್ಕಾರ್: 050-8417475
ಅಬ್ದುಲ್ ಗಫೂರ್‌ಃ 056-7556166

ಅನ್ನು ಸಂಪರ್ಕಿಸುವಂತೆ ಬಿಸಿಎಫ್ ಸ್ಪೋರ್ಟ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಜಿಪ ಹಾಗೂ ತಂಡದ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News