×
Ad

ದೇಶಿಯವಾಗಿ ಮೇಲ್ದರ್ಜೆಗೇರಿಸಿದ ಮೊದಲ ಹಾಕ್ ಎಂಕೆ132 ವಿಮಾನ ಅನಾವರಣ

Update: 2017-01-26 18:34 IST

ಬೆಂಗಳೂರು,ಜ.26: ಸರಕಾರಿ ಸ್ವಾಮ್ಯದ ಎಚ್‌ಎಎಲ್ ಗಣರಾಜ್ಯೋತ್ಸವ ದಿನದ ಮುನ್ನಾದಿನವಾದ ಬುಧವಾರ ದೇಶೀಯವಾಗಿ ಮೇಲ್ದರ್ಜೆಗೇರಿಸಲಾದ ಮೊದಲ ಹಾಕ್ ಎಂಕೆ 132 ವಿಮಾನವನ್ನು ಅನಾವರಣಗೊಳಿಸಿತು.

 ಇದು ಎಚ್‌ಎಎಲ್‌ನಲ್ಲಿ ತಯಾರಾದ 100ನೇ ಹಾಕ್ ವಿಮಾನವಾಗಿದ್ದು, ‘ಮೇಕ್ ಇನ್ ಇಂಡಿಯಾ’ಗುರುತನ್ನು ಹೊಂದಿರುವ ಮೂಲಕ ನಮಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಸಂಸ್ಥೆಯ ಸಿಎಂಡಿ ಟಿ.ಸುವರ್ಣ ರಾಜು ಅವರು ಇಲ್ಲಿ ಹೇಳಿಕೆಯಲ್ಲಿ ತಿಳಿಸಿದರು.

  ಎಚ್‌ಎಎಲ್ ಸ್ವಾವಲಂಬನೆಯನ್ನು ಸಾಧಿಸಲು ಹಾಕ್ ಎಂಕೆ 132 ವಿಮಾನವನ್ನು ದೇಶೀಯವಾಗಿ ಮೇಲ್ದರ್ಜೆಗೇರಿಸುವ ಕಾರ್ಯಕ್ರಮವನ್ನು ರೂಪಿಸಿತ್ತು ಮತ್ತು ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಸಂಸ್ಥೆಯು ದಾಖಲೆ ಅವಧಿಯಲ್ಲಿ ಮೇಲ್ದರ್ಜೆ ಗೇರಿಸಿದ ತನ್ನದೇ ಆದ ವಿಮಾನವನ್ನು ಹೊರತಂದಿದೆ ಎಂದ ಅವರು,ವಿಮಾನದಲ್ಲಿದ್ದ ಆಮದು ಮಾಡಲಾದ ಮಿಷನ್ ಕಂಪ್ಯೂಟರ್ ಮತ್ತು ಡಾಟಾ ಟ್ರಾನ್ಸ್‌ಫರ್ ಯುನಿಟ್‌ಗಳ ಜಾಗದಲ್ಲಿ ಎಚ್‌ಎಎಲ್ ವಿನ್ಯಾಸಗೊಳಿಸಿ,ಅಭಿವೃದ್ಧಿಗೊಳಿಸಿರುವ ಸಾಧನಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News