ಡಾ.ರವೀಂದ್ರನಾಥ ಪೂಂಜಾ
ಮುಲ್ಕಿ, ೆ.1: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಹಾಗೂ ಚೆನ್ನೈಯ ಪ್ರಸಿದ್ಧ ವೈದ್ಯ ಕೊಡೆತ್ತೂರು ಗುತ್ತು ಡಾ.ರವೀಂದ್ರನಾಥ ಪೂಂಜ (74) ಫೆ.2 ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರರನ್ನು ಅಗಲಿದ್ದಾರೆ. 2016 ಜೂ.1 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೊಡೆತ್ತೂರು ಗುತ್ತು ಮನೆತನದ ಪರವಾಗಿ ಅನುವಂಶಿಯ ಮೊಕ್ತೇಸರರಾಗಿ ಅಧಿಕಾರವಹಿಸಿಕೊಂಡಿದ್ದರು. ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಅತೀವ ಕಾಳಜಿ ಹಾಗೂ ಆಸಕ್ತಿ ವಹಿಸಿದ್ದ ಇವರು, ಬುಧವಾರ ಕಟೀಲಿನಲ್ಲಿ ನಡೆಯುವ ಅಷ್ಟಮಂಗಳ ಪ್ರಶ್ನೆಯಲ್ಲಿ ಭಾಗವಹಿಸಿದ್ದರು.
ಮಂಗಳೂರಿನಲ್ಲಿ ಹುಟ್ಟಿ ಬಳಿಕ ಮದ್ರಾಸ್‌ನಲ್ಲಿ ಶಿಕ್ಷಣ ಪಡೆದು ವೈದ್ಯರಾಗಿದ್ದರು. ಚೆನೈ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಕರ್ನಾಟಕ ಸಂಘದದಿಂದ ಸೇವಾ ರತ್ನ ಪ್ರಶಸ್ತಿ, ತಮಿಳು ಸಂಘಂನಿಂದ ಮದರ್ ತೆರೇಸಾ ಪ್ರಶಸ್ತಿ, ವೈದ್ಯರ ಸಂಘದಿಂದ ಪ್ರಶಸ್ತಿ ಸಹಿತ ಇವರ ವೈದ್ಯಕೀಯ ಸೇವೆಗಾಗಿ ಹಲವಾರು ಪ್ರತಿಷ್ಠಿತ ಪುರಸ್ಕಾರ,ಗೌರವ ಪ್ರಶಸ್ತಿ ಸಹಿತ ಸನ್ಮಾನಗಳು ಸಂದಿವೆ.
ಸಂತಾಪ: ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.