ಅಬೂಬಕರ್ ಅದ್ಭುತ ಗೋಲು: ಕ್ಯಾಮರೂನ್ ಆಫ್ರಿಕನ್ ಚಾಂಪಿಯನ್

Update: 2017-02-06 03:31 GMT

ಲಿಬರ್‌ವಿಲ್ಲೆ, ಫೆ.6: ಬದಲಿ ಆಟಗಾರನಾಗಿ ಮೈದಾನಕ್ಕೆ ಇಳಿದ ವಿನ್ಸೆಂಟ್ ಅಬೂಬಕರ್ ಕೊನೆಕ್ಷಣದಲ್ಲಿ ಹೊಡೆದ ಅದ್ಭುತ ಗೋಲಿನಿಂದಾಗಿ ಕ್ಯಾಮರೂನ್ ತಂಡ ಆಫ್ರಿಕನ್ ಫುಟ್ಬಾಲ್ ಟೂರ್ನಿ ಗೆದ್ದುಕೊಂಡಿದೆ. ಐದನೆ ಬಾರಿಗೆ ಕ್ಯಾಮರೂನ್ ಈ ಸಾಧನೆ ಮಾಡಿದ್ದು, 2002ರ ಬಳಿಕ ಮೊದಲ ಬಾರಿಗೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈಜಿಪ್ಟ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಕ್ಯಾಮರೂನ್, ಈ ಮೊದಲು 2002, 2000, 1988 ಹಾಗೂ 1984ರಲ್ಲಿ ಈ ಗೌರವಕ್ಕೆ ಪಾತ್ರವಾಗಿತ್ತು.

ಈಜಿಪ್ಟ್ ಮಿಡ್‌ಫೀಲ್ಡರ್ ಆಟಗಾರ ಮುಹಮ್ಮದ್ ಎಲ್ನೇನಿ 22ನೆ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ 59ನೆ ನಿಮಿಷಯಲ್ಲಿ ನಿಕೋಲಸ್ ಕೌಲೊವ್, ಕ್ಯಾಮರೂನ್ ತಂಡ ಸಮಬಲ ಸ್ಥಾಪಿಸಲು ನೆರವಾದರು.

89ನೆ ನಿಮಿಷದಲ್ಲಿ ಚೆಂಡಿನ ಮೇಲೆ ಅದ್ಭುತ ನಿಯಂತ್ರಣ ಸಾಧಿಸಿದ ವಿನ್ಸೆಂಟ್ ಅಬೂಬಕರ್, ಅದನ್ನು ರಕ್ಷಣಾ ಆಟಗಾರನಿಗೆ ಪಾಸ್ ಮಾಡಿ, ಮತ್ತೆ ಚೆಂಡನ್ನು ನಿಯಂತ್ರಣಕ್ಕೆ ಪಡೆದು, ಈಜಿಪ್ಟ್‌ನ ಗೋಲ್‌ಕೀಪರ್ ಅವರನ್ನು ವಂಚಿಸಿ, ಈಜಿಪ್ಟ್ 8ನೆ ಬಾರಿಗೆ ಚಾಂಪಿಯನ್‌ಶಿಪ್ ಗೆಲ್ಲುವ ಅವಕಾಶವನ್ನು ತಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News