ನಕ್ಷತ್ರಗಳೇಕೆ ಹೊಳೆಯುತ್ತವೆ....?

Update: 2017-02-08 09:11 GMT

ರಾತ್ರಿಯಲ್ಲಿ ಆಕಾಶದಲ್ಲಿ ನಕ್ಷತ್ರಗಳದ್ದೇ ಸಾಮ್ರಾಜ್ಯ.ಗ್ರಹಗಳು ಒಂದೇ ರೀತಿಯಲ್ಲಿ ಬೆಳಗುತ್ತ ಗಂಭೀರತೆಯನ್ನು ಕಾಯ್ದುಕೊಂಡರೆ ನಕ್ಷತ್ರಗಳು ಮಾತ್ರ ಮಿನುಗುತ್ತಿರುತ್ತವೆ. ಜಲಜನಕದ ವಿವಿಧ ಪರಮಾಣು ರೂಪ(ಐಸೊಟೋಪ್)ಗಳ ನಡುವಿನ ನಿರಂತರ ಪರಮಾಣು ಸಮ್ಮಿಳನ ಕ್ರಿಯೆ ಈ ಮಿನುಗುವಿಕೆಗೆ ಕಾರಣವಾಗಿದೆ. ಇಲ್ಲಿ ಜಲಜನಕದ ಪರಮಾಣುಗಳು ಹೀಲಿಯಮ್‌ನ ಪರಮಾಣುಗಳ ಜೊತೆ ಸಮ್ಮಿಳನಗೊಳ್ಳುತ್ತಿರುತ್ತವೆ.

ಪರಮಾಣು ಸಮ್ಮಿಳನ ಕ್ರಿಯೆಯು ಭಾರೀ ಪ್ರಮಾಣದ ಪ್ರಕಾಶಮಾನವಾದ,ಉಷ್ಣ ಶಕ್ತಿಯನ್ನು ಸೃಷ್ಟಿಸುತ್ತದೆ.

ಈ ಕ್ರಿಯೆಯಲ್ಲಿ ಎರಡು ಪರಮಾಣುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಬಳಿಕ ಪರಸ್ಪರ ಸಮ್ಮಿಳನಗೊಂಡು ದೊಡ್ಡ ದ್ರವ್ಯರಾಶಿಯಾಗುತ್ತವೆ. ಅಂದ ಹಾಗೆ ಇಂತಹ ಪರಮಾಣು ಸಮ್ಮಿಳನ ನಡೆಯಲು ಒಂದು ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ಮತ್ತು ಅಗಾಧ ಒತ್ತಡ ಅಗತ್ಯವಿದೆ.

ಸೂರ್ಯನಂತೆ ಎಲ್ಲ ನಕ್ಷತ್ರಗಳೂ ತಮ್ಮ ವಾತಾವರಣದಲ್ಲಿ ಜಲಜನಕ ಮತ್ತು ಹೀಲಿಯಂ ಹೊಂದಿವೆ. ಪರಮಾಣು ಸಮ್ಮಿಳನದಲ್ಲಿ ಉತ್ಪತ್ತಿಯಾದ ಉಷ್ಣತೆ ಹೆಚ್ಚುತ್ತ ಹೋದಂತೆ ಬೆಳಕು ಕೂಡ ಇನ್ನಷ್ಟು ಉಜ್ವಲ ಮತ್ತು ಇನ್ನಷ್ಟು ನೀಲಿ ಬಣ್ಣದ್ದಾಗುತ್ತದೆ. ನಕ್ಷತ್ರಗಳ ಮೇಲ್ಮೈ ತಾಪಮಾನ ಬೇರೆ ಬೇರೆಯಾಗಿರುವುದರಿಂದ ಅವು ಬೇರೆ ಬೇರೆ ಸ್ಪೆಕ್ಟ್ರಮ್‌ಗಳನ್ನು ಹೊಂದಿರುತ್ತವೆ. ಹೀಗಾಗಿ ಎಲ್ಲ ನಕ್ಷತ್ರಗಳು ಒಂದೇ ಬಣ್ಣದಲ್ಲಿರುವುದಿಲ್ಲ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News