ಫೈನಾನ್ಸ್ ಕಂಪನಿಯಲ್ಲಿ ಮತ್ತೆ ಲೂಟಿ, 32 ಕೆ.ಜಿ. ಚಿನ್ನದೊಂದಿಗೆ ಪರಾರಿ

Update: 2017-02-10 03:43 GMT

ಗುರುಗ್ರಾಮ, ಫೆ.10: ಇಲ್ಲಿನ ಮಣಪ್ಪುರಂ ಫೈನಾನ್ಸ್ ಕಚೇರಿಯನ್ನು ಲೂಟಿ ಮಾಡಿರುವ ದರೋಡೆಕೋರರು, ಸುಮಾರು 9 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ. ಚಿನ್ನದೊಂದಿಗೆ ಪರಾರಿಯಾಗಿದ್ದಾರೆ.

ಕಂಪನಿಯ ಚಿನ್ನದ ಸಾಲ ವಿಭಾಗದಲ್ಲಿ ದಾಸ್ತಾನು ಇದ್ದ ಚಿನ್ನವನ್ನು ಗುರುವಾರ ಲೂಟಿ ಮಾಡಲಾಗಿದೆ. ಇದು ಕಳೆದ ಆರು ತಿಂಗಳಲ್ಲಿ ಕಂಪನಿಯ ವಿವಿಧ ಶಾಖೆಗಳಿಂದ ಲೂಟಿ ಮಾಡುತ್ತಿರುವ ಆರನೇ ಘಟನೆಯಾಗಿದೆ. ಗುರುವಾರ ಮಧ್ಯಾಹ್ನ ಎಂಟು ಮಂದಿಯ ಗುಂಪು ನ್ಯೂ ರೈಲ್ವೆ ರೋಡ್ ಶಾಖೆಯ ಮೇಲೆ ದಾಳಿ ಮಾಡಿ, 32 ಕೆ.ಜಿ. ಚಿನ್ನ ಹಾಗೂ 78 ಲಕ್ಷ ರೂಪಾಯಿ ನಗದು ಲೂಟಿ ಮಾಡಿದೆ.

ಕೇರಳದ ತ್ರಿಶ್ಶೂರ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಣಪ್ಪುರಂ ಫೈನಾನ್ಸ್, 25 ರಾಜ್ಯಗಳಲ್ಲಿ 3,200 ಶಾಖೆಗಳನ್ನು ಹೊಂದಿದೆ. ಜನವರಿ 5ರಂದು ಬ್ಯಾಂಕಿನ ಛತ್ತೀಸ್‌ಗಢ ಶಾಖೆಯನ್ನು ಲೂಟಿ ಮಾಡಲಾಗಿತ್ತು. ಬಳಿಕ ಕೊಲ್ಕತ್ತಾ, ಥಾನೆ, ನಾಗಪುರ ಹಾಗೂ ಜಲಂಧರ್ ಶಾಖೆಗಳನ್ನು ಲೂಟಿ ಮಾಡಲಾಗಿತ್ತು. ಸುಮಾರು 40 ಕೋಟಿ ರೂಪಾಯಿ ಮೌಲ್ಯದ 150 ಕೆ.ಜಿ. ಚಿನ್ನವನ್ನು 2016ರಿಂದೀಚೆಗೆ ಲೂಟಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News