ವಯಸ್ಕರ ಮಿದುಳು ಮತ್ತು ತಲೆಬುರುಡೆಯ ತೂಕ 1.3-1.5 ಕೆ.ಜಿ ಇದ್ದರೂ ಅದೇಕೆ ನಮಗೆ ಭಾರವೆನಿಸುವುದಿಲ್ಲ..?

Update: 2017-02-10 09:12 GMT

ವಯಸ್ಕರ ಮಿದುಳು ಸರಾಸರಿ 1.3ರಿಂದ 1.5 ಕೆ.ಜಿ. ತೂಗುತ್ತದೆ. ಇದು ಹೊರಗಿನ ವಾತಾವರಣದಲ್ಲಿನ ತೂಕ. ಆದರೆ ಮಿದುಳು ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅಥವಾ ಸಿಎಸ್‌ಎಫ್ (ಮಿದುಳುಬಳ್ಳಿಯ ದ್ರವ)ನಲ್ಲಿ ತೇಲುತ್ತಿರುವುದರಿಂದ ಅದು ಕೇವಲ 50 ಗ್ರಾಂ ಮಾತ್ರ ತೂಗುತ್ತದೆ ಮತ್ತು ಇದು ನಮಗೆ ಭಾರವೆನಿಸುವುದಿಲ್ಲ. ವಯಸ್ಕರ ಮಿದುಳಿನಲ್ಲಿ ಸುಮಾರು 200 ಶತಕೋಟಿ ನರಕೋಶಗಳಿರುತ್ತವೆ.

ಪ್ಯಾರಾನೇಸಲ್ ಏರ್ ಸೈನಸ್ ಅಥವಾ ಮೂಗಿನ ಸುತ್ತಲಿನ ಎಲುಬುಗಳಲ್ಲಿಯ ಕುಳಿಗಳಿಂದಾಗಿ ತಲೆಬುರುಡೆಯ ತೂಕವೂ ನಮ್ಮ ಅನುಭವಕ್ಕೆ ಬರುವುದಿಲ್ಲ.

ಸಿಎಸ್‌ಎಫ್ ಸ್ವಚ್ಛ,ಬಣ್ಣರಹಿತ ಮತ್ತು ಪಾರದರ್ಶಕ ದ್ರವವಾಗಿದ್ದು,ಪ್ರಮಾಣದಲ್ಲಿ ಸುಮಾರು 150 ಎಂಎಲ್ ಇರುತ್ತದೆ. ಅದು ಶೇ.99.13ರಷ್ಟು ನೀರು ಮತ್ತು ಶೇ.0.87ರಷ್ಟು ಆರ್ಗಾನಿಕ್ ಮತ್ತು ಇನಾರ್ಗಾನಿಕ್ ವಸ್ತುಗಳನ್ನು ಒಳಗೊಂಡಿರುತ್ತದೆ.

ಸಿಎಸ್‌ಎಫ್ ಮಿದುಳು ಮತ್ತು ಮಿದುಳುಬಳ್ಳಿಗಳಿಗೆ ಗಾಯಗಳಿಂದ ರಕ್ಷಣೆ ನೀಡುತ್ತದೆ ಮತ್ತು ಮೆಟಾಬಾಲಿಕ್ ವೇಸ್ಟ್(ಚಯಾಪಚಯ ತ್ಯಾಜ್ಯ) ಅನ್ನು ನಿವಾರಿಸುತ್ತದೆ. ಮೆನಿಂಜೈಟಿಸ್‌ನಂತಹ ಮಿದುಳು ರೋಗಗಳನ್ನು ಪತ್ತೆ ಹಚ್ಚಲು ಸಿಎಸ್‌ಫ್ ಪರೀಕ್ಷೆ ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News