ಸುರಕ್ಷತೆ ಖಾತರಿಗೆ ವಾಟ್ಸ್ ಆಪ್ ನಿಂದ ಹೊಸ ವೆರಿಫಿಕೇಷನ್

Update: 2017-02-11 16:18 GMT

ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಸುರಕ್ಷತೆ ಖಾತರಿಪಡಿಸುವ ದೃಷ್ಟಿಯಿಂದ ಎರಡು ಹಂತದ ಹೊಸ ವೆರಿಫಿಕೇಶನ್ ವ್ಯವಸ್ಥೆಯನ್ನು ಆರಂಭಿಸಿದೆ. ಕಳೆದ ಹಲವು ತಿಂಗಳುಗಳಿಂದ ವಾಟ್ಸ್ ಆಪ್ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಾ ಬಂದಿತ್ತು.

"ಈ ಹೊಸ ಫೀಚರ್ ಆರಂಭಿಸಿದ ಬಳಿಕ, ನಿಮ್ಮ ಫೋನ್‌ನಂಬರ್ ದೃಢೀಕರಣದ ಜತೆಗೆ ನೀವು ಆಯ್ಕೆ ಮಾಡಿದ ಆರು ಅಂಕಿಗಳ ಪಾಸ್‌ಕೋಡ್ ಕೂಡಾ ಒಳಗೊಂಡಿರಬೇಕಾಗುತ್ತದೆ ಎಂದು ವಾಟ್ಸ್ ಅಪ್ ಪ್ರಕಟಣೆ ಹೇಳಿದೆ.

ಬಳಕೆದಾರರು ತಮ್ಮ ಎರಡು ಹಂತಗಳ ದೃಢೀಕರಣ ಪ್ರಕ್ರಿಯೆ ಆರಂಭಿಸಿಕೊಳ್ಳಲು ಸೆಟ್ಟಿಂಗ್‌ಗೆ ಹೋಗಿ ಅಕೌಂಟ್ ವಿವರಗಳಿಗೆ ಕ್ಲಿಕ್ ಮಾಡಿ, ಟೂ ಸ್ಟೆಪ್ ವೆರಿಫಿಕೇಶನ್ ಎಂಬ ಆಪ್ಷನ್ ಆಯ್ಕೆ ಮಾಡಬೇಕಾಗುತ್ತದೆ. ಈ ಹೊಸ ವ್ಯವಸ್ಥೆಯು ಎಲ್ಲ 120 ಕೋಟಿ ವಾಟ್ ಅಪ್ ಬಳಕೆದಾರರಿಗೂ ಮುಕ್ತವಾಗಿದ್ದು, ಎಲ್ಲ ಐಫೋನ್, ಆಂಡ್ರಾಯ್ಡಾ, ವಿಂಡೋಸ್ ಬಳಕೆದಾರರಿಗೆ ಈ ಸೇವೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News