ಅಬ್ದುಲ್ ಅಝೀಝ್

Update: 2017-02-17 18:26 GMT

ವಿಟ್ಲ, ೆ.17: ಉದ್ಯಮಿ, ಸಮಾಜಸೇವಕ, ಉಕ್ಕುಡ ನಿವಾಸಿ ಅಬ್ದುಲ್ ಅಝೀಝ್ ಟಿ.ಎಚ್.ಎಂ.ಎ.(50) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ 9:30ಕ್ಕೆ ಉಕ್ಕುಡದ ಸ್ವಗೃಹದಲ್ಲಿ ನಿಧನರಾದರು.

ದಿನಸಿ ಅಂಗಡಿ ವ್ಯಾಪಾರಿಯಾಗಿದ್ದ ಇವರು ಕಲ್ಲಿನ ಕೋರೆ ಹೊಂದಿದ್ದರು. ವಿಟ್ಲ ಗ್ರಾಪಂ ಸದಸ್ಯರಾಗಿ, ಉಕ್ಕುಡ ಪಬ್ಲಿಕ್ ಸ್ಕೂಲ್ ಸ್ಥಾಪಕಾಧ್ಯಕ್ಷರಾಗಿ, ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಕಾರ್ಯಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಜಂಇಯ್ಯತುಲ್ ಲಾಹ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಉಕ್ಕುಡ ಎಸ್.ವೈ.ಎಸ್.ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ