ಕೆ.ಸಿ.ಎಫ್ ರಿಯಾದ್ ಝೋನಲ್ ವತಿಯಿಂದ 'ಕೆ.ಸಿ.ಎಫ್ ಡೇ'

Update: 2017-02-21 05:32 GMT

ರಿಯಾದ್, ಫೆ.21: ಕೆ.ಸಿ.ಎಫ್ ರಿಯಾದ್ ಝೋನಲ್ ವತಿಯಿಂದ 'ಕೆ.ಸಿ.ಎಫ್ ಡೇ' ಕಾರ್ಯಕ್ರಮ  ನೋಫಾ ಇಸ್ತಿರಾಹ್ ನಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಝ್ವಿ (ಹಝ್ರತ್) ಕಾವಳಕಟ್ಟೆಯವರು ಉದ್ಘಾಟಿಸಿ,  ಮಾತನಾಡಿದ ಅವರು ಕೆ.ಸಿ.ಎಫ್ ಈವರೆಗೆ ಮಾಡುತ್ತಾ ಬಂದಿರುವ ಧಾರ್ಮಿಕ, ಶೈಕ್ಷಣಿಕ, ಸಾಂತ್ವನ ಕಾರ್ಯವನ್ನು ಶ್ಲಾಘಿಸಿದರು, ಅಹ್ಲ್ ಸುನ್ನತ್ ವಲ್ ಜಮಾಅ ಈ ಕಾಲದಲ್ಲಿ ಅತ್ಯವಶ್ಯ ಎಂಬುದನ್ನು ಸಹಾಬಿವರ್ಯರು ಹಾಗೂ ಮಹಾನುಭಾವ ಅವುಲಿಯಾಗಳ ಚರಿತ್ರೆ ಮೂಲಕ ಪುರಾವೆ ಸಹಿತ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ಣ ವಹಿಸಿದ್ದರು.

ಸಮಾರಂಭದಲ್ಲಿ ಸಮಾಜ ಸೇವಕ ನೋರ್ಕಾ ಕನ್ಸಲ್ ಟೆಂಟ್ ಜನರಲ್ ಶಿಹಾಬ್ ಕೊಟ್ಟುಕಾಡ್ ರನ್ನು ಸನ್ಮಾನಿಸಲಾಯಿತು ಹಾಗೂ ಐಸಿಎಫ್ ಪ್ರತಿನಿಧಿ  ಕಬೀರ್ ಅನ್ವರಿ ಪ್ರಾಸ್ತಾವಿಕಾವಾಗಿ ಮಾತನಾಡಿದರು.

ಅಸ್ಸುಫ್ಫಃ ದ್ವಿತೀಯ ಚಾಲನೆ: ಕೆ.ಸಿ.ಎಫ್ ಎಜ್ಯುಕೇಶನಲ್ ವಿಂಗ್ ಚೆಯರ್ ಮೆನ್ ಅಬ್ದುಲ್ಲಾ ಸಖಾಫಿ ನಿಂತಿಕಲ್ಲು ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಲಾನಾ ಡಾ: ಹಝ್ರತ್ ಕಾವಳಕಟ್ಟೆಯವರು ಬುಖಾರಿ ಹದೀಸ್ ಸಭಿಕರಿಗೆ ಓದಿಕೊಡುವ ಮೂಲಕ ಅಸ್ಸುಫ್ಫಃ ದ್ವಿತೀಯ ಹಂತಕ್ಕೆ ಚಾಲನೆ ನೀಡಿದರು. ಅಸ್ಸುಫ್ಫಃ ಮೊದಲ ಹಂತದ ರ್ಯಾಂಕ್ ವಿಜೇತರಿಗೆ ಹಾಗೂ ಭೋಧಕರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

'ಕಾರ್ಯಕರ್ತರ ಒಂದು ದಿನ' ಎಂಬ ತರಬೇತಿ ಶಿಬಿರದ ಬಗ್ಗೆ ಅಬ್ದುಲ್ ರಶೀದ್ ಮದನಿ, ರಂತಡ್ಕರವರು ಪ್ರಾಸ್ತಾವಿಕ ಭಾಷಣ ಮಾಡಿದರು, ನಂತರ ಕೆ.ಸಿ.ಎಫ್ ಸೌದಿ ರಾಷ್ಟೀಯ ಅಧ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ರವರು ಕೆ.ಸಿ.ಎಫ್ ಕಾರ್ಯಕರ್ತರು ತಮ್ಮ ದೈನಿಂದಿನ ಚಟುವಟಿಕೆಗಳು ಹೇಗಿರಬೇಕು ಎಂಬ ವಿಷಯದಲ್ಲಿ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ 'ಕೆ.ಸಿ.ಎಫ್ ಅನಿವಾಸಿಗಳ ಆದರ್ಶ ಸಂಘಟನೆ' ಎಂಬ ವಿಷಯದಲ್ಲಿ ಕೆ.ಸಿ.ಎಫ್ ರಿಯಾದ್ ಸಂಘಟನಾ ಚೆಯರ್ ಮೆನ್ ಸಿದ್ದೀಕ್ ಸಖಾಫಿ ಪೆರುವಾಯಿ ಮಾತನಾಡಿದರು.

ವೇದಿಕೆಯಲ್ಲಿ ಕೆ.ಸಿ.ಎಫ್ ರಿಯಾದ್ ಝೋನಲ್ ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್, ಕೆ.ಸಿ.ಎಫ್ ರಿಯಾದ್  ಪಿ.ಆರ್ ವಿಂಗ್ ಚೆಯರ್ ಮೆನ್ ನಿಝಾಮುದ್ದೀನ್ ಉಸ್ಮಾನ್, ಕೆ.ಸಿ.ಎಫ್ ರಿಯಾದ್ ರಿಲೀಫ್ ಚೆಯರ್ ಮೆನ್ ರಮೀಝ್ ಕುಳಾಯಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ ಅಬ್ದುಲ್ ರಶೀದ್ ಉರುವಾಲು ಪದವು 2017 ರ ಹೊಸ ಕೆ.ಸಿ.ಎಫ್ ಗಾನ" ಹಾಡಿದರು. ಕೆ.ಸಿ.ಎಫ್ ರಿಯಾದ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿ, ಇಲ್ಯಾಸ್ ಲತೀಫಿ ಕಿರಾಅತ್ ಪಠಿಸಿದರು. ಕೆ.ಸಿ.ಎಫ್ ರಿಯಾದ್ ಜೊತೆ ಕಾರ್ಯದರ್ಶಿ ಬಶೀರ್ ತಲಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಹಸೈನಾರ್ ಕಾಟಿಪಳ್ಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News