ನಿಧನ: ಕೆ.ಅಹ್ಮದ್ ಕುಂಞಿ
Update: 2017-02-22 17:37 IST
ಮಂಗಳೂರು, ಫೆ.22: ಸೋಮೇಶ್ವರ ಉಚ್ಚಿಲ ನಯಾಪಟ್ಣ ನಿವಾಸಿ ಕೆ. ಅಹ್ಮದ್ ಕುಂಞಿ ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅಹ್ಮದ್ ಕುಂಞಿ ಉಚ್ಚಿಲ ಜುಮಾ ಮಸೀದಿಯ ಆಡಳಿತ ಕಮಿಟಿ ಸದಸ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದ ಮೃತರು ಪತ್ನಿ, 8 ಗಂಡು ಮತ್ತು 2 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.