8 ಕೋಟಿ ರೂ. ಕೊಟ್ಟ ಮೊಬೈಲ್ ನಂಬರ್ ಬಳಸಲು ಸಾಧ್ಯವಿಲ್ಲ !

Update: 2017-02-26 04:18 GMT

ದುಬೈ, ಫೆ.26: ಡಿ5 ದುಬೈ ವಾಹನ ನಂಬರ್ ಪ್ಲೇಟನ್ನು 33 ದಶಲಕ್ಷ ದಿರ್ಹಮ್ (60 ಕೋಟಿ ರೂಪಾಯಿ)ಗೆ ಖರೀದಿಸಿ ಸುದ್ದಿಯಾಗಿದ್ದ ಉದ್ಯಮಿ ಬಲ್ವಿಂದರ್ ಸಹ್ನಿ ಇದೀಗ ಎಂಟು ಕೋಟಿ ರೂಪಾಯಿ (45 ಲಕ್ಷ ದಿರ್ಹಂ)ಗೆ ವಿಶಿಷ್ಟ ಡಿಯು ಮೊಬೈಲ್ ನಂಬರ್ ಖರೀದಿಸಿ ಮತ್ತೆ ಸುದ್ದಿ ಮಾಡಿದ್ದಾರೆ. ಆದರೆ ಈ ಸಂಖ್ಯೆಯನ್ನು ವೈಯಕ್ತಿಕ ಉಪಯೋಗಕ್ಕೆ ಬಳಸುವಂತಿಲ್ಲ ಎಂದು ಅವರು ಫ್ಯಾನ್ಸಿ ಸಂಖ್ಯೆ ಖರೀದಿಸಿದ ಎರಡೇ ಗಂಟೆಗಳಲ್ಲಿ ಖಲೀಜ್ ಟೈಮ್ಸ್‌ಗೆ ವಿವರಿಸಿದ್ದಾರೆ.

"ನಾನು ಈ ಸಂಖ್ಯೆಯನ್ನು ಎಂದೂ ಬಳಸುವುದಿಲ್ಲ. ಇಂದು ರಾತ್ರಿ 8:30ಕ್ಕೆ ಈ ಸಂಖ್ಯೆ ನನಗೆ ಸಿಕ್ಕಿದೆ. ಎರಡು ಗಂಟೆ ಒಳಗಾಗಿ ನನಗೆ 1000 ಕರೆಗಳು ಬಂದಿವೆ" ಎಂದು ಅವರು ಹೇಳಿದರು.

ಕಳೆದ ವರ್ಷ ಸಾಹ್ನಿ ದುಬಾರಿ ಬೆಲೆಯ ನಂಬರ್‌ ಪ್ಲೇಟ್ ಖರೀದಿಸಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಈ ಬಾರಿಯ ಹರಾಜಿನಿಂದ ಬಂದ ಹಣವನ್ನು ದತ್ತಿ ಕಾರ್ಯಕ್ಕೆ ವಿನಿಯೋಗಿಸುವ ಕಾರಣದಿಂದ, ದುಬೈಗೆ ತಮ್ಮ ಗಳಿಕೆಯಲ್ಲಿ ಸಾಧ್ಯವಾದಷ್ಟನ್ನೂ ನೀಡಲು ಬಯಸಿ ನಂಬರ್ ಖರೀದಿಸಿದ್ದಾಗಿ ಹೇಳಿದ್ದಾರೆ.

"ಉಪಾಧ್ಯಕ್ಷ ಅಹ್ಮದ್ ಅಬ್ದುರ್ರಹೀಮ್ ಕರೆ ಮಾಡಿ ಈ ವಿಷಯ ತಿಳಿಸಿದರು. ನಾನು ನಂಬರ್ ಖರೀದಿಸುವ ಉದ್ದೇಶದಿಂದ ತೆರಳಿದೆ. ದತ್ತಿ ಕಾರ್ಯಕ್ಕಾಗಿ ಹಣ ವಿನಿಯೋಗವಾಗುವುದರಿಂದ ಎಷ್ಟು ಮೌಲ್ಯಕ್ಕಾದರೂ ಖರೀದಿಸಲು ನಿರ್ಧರಿಸಿದ್ದೆ'' ಎಂದು 058-8888888 ಸಂಖ್ಯೆಯನ್ನು ಖರೀದಿಸಿದ ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News