ಮಾನಸಿಕ ಅಸ್ವಸ್ಥ ದಲಿತ ಯುವಕನಿಗೆ ಪೊಲೀಸ್ ಠಾಣೆಯಲ್ಲಿ ಕ್ರೂರ ದೌರ್ಜನ್ಯ

Update: 2017-02-26 07:46 GMT

ಕಯಕ್ಕೂಟ್ಟಂ,ಫೆ. 26: ಕಳ್ಳತನದ ಆರೋಪ ಹೊರೆಸಿ ನೆರೆಮನೆಯ ವ್ಯಕ್ತಿ ಹೊಡೆದು ಪೊಲೀಸರಿಗೆ ದೂರು ನೀಡಿದ ಮಾನಸಿಕ ಅಸ್ವಸ್ಥ ದಲಿತ ಯುವಕನನ್ನು ಪೊತ್ತನ್ ಕ್ಕೋಡ್ ಠಾಣೆಯಲ್ಲಿ ಪೊಲೀಸರು ಕ್ರೂರವಾಗಿ ಥಳಿಸಿದ್ದಾರೆ. ಠಾಣೆಗೆ ಹೋದ ದಲಿತ ಯುವಕನ ವೃದ್ಧ ತಾಯಿಯನ್ನು ಅಪಮಾನಿಸಿ ಪೊಲೀಸರು ಮಧ್ಯರಾತ್ರೆ ಠಾಣೆಯಿಂದ ಹೊರಗಟ್ಟಿದ್ದಾರೆ ಎಂದು ಸಂಬಂಧಿಕರು ಹಿರಿಯ ಪೊಲೀಸ್ ಆಧಿಕಾರಿಗಳಿಗೆ ದೂರು ನೀಡಿದ್ದಾರೆ. ಯುವಕನಿಗೆ ತಿರುವನಂತಪುರಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ಪೊತ್ತನಕ್ಕೋಡ್ ಮಂಞಲದ ವಿನೋದ್(30) ಪೊಲೀಸರು ಮತ್ತು ನೆರೆ ಮನೆಯ ವ್ಯಕ್ತಿಯಿಂದ ಕ್ರೂರ ದೌರ್ಜನ್ಯಕ್ಕೊಳಗಾದವರು. ಕಳೆದ ಹದಿನೇಳನೆ ತಾರೀಕಿನಂದು ಈ ಘಟನೆ ನಡೆದಿದೆ. ಅಂದು ರಾತ್ರಿ ವಿನೋದ್ ಸಹೋದರಿ ನೆರೆಮನೆಯಿಂದ ಸಾವಿರ ರೂಪಾಯಿ ಸಾಲ ಕೇಳಲು ಕಳುಹಿಸಿದ್ದರು. ಮನೆಯಿಂದ ಹೊರಗೆ ಹೋಗಿ ಕೆಲವೇ ಸಮಯದಲ್ಲಿ ವಿನೋದ ಅಳುವುದು ಕೇಳಿಸಿತ್ತು. ತಾಯಿ ಓಡಿಹೋಗಿ ನೋಡುವಾಗ ನೆರೆಮನೆಯ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಂಬಂಧಿಕರು ಸೇರಿ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ವಿನೋದ್‌ಗೆ ಹೊಡೆಯುತ್ತಿದ್ದರು.

ನಂತರ ಯುವಕನ ಮನೆಯವರು ಆತನನ್ನು ರಕ್ಷಿಸಿ ತಮ್ಮ ಮನೆಗೆ ಕರೆದು ಕೊಂಡು ಬಂದಿದ್ದರು. ರಾತ್ರಿ ಒಂಬತ್ತೂವರೆ ಗಂಟೆಗೆ ಬಂದ ಪೊಲೀಸರು 20ನೆ ತಾರೀಕಿಗೆ ಠಾಣೆಗೆ ಹಾಜರಾಗಬೇಕೆಂದು ಹೇಳಿ ಹೋಗಿದ್ದರು. ಆದರೆ 19ರಂದು ರಾತ್ರಿ ಯುವಕನ ಅನಾರೋಗ್ಯ ಉಲ್ಬಣವಾಗಿತ್ತು. ಮನೆಯಿಂದ ಹೊರಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಅಸೌಖ್ಯ ಸ್ಥಿತಿಯಲ್ಲಿರುವಂತೆಯೇ 22 ತಾರೀಕಿನಂದು ಮನೆಯಿಂದ ಪೊಲೀಸರು ಬಲವಾಗಿ ಯುವಕನನ್ನು ಎಳೆದೊಯ್ದಿದ್ದರು. ನಂತರ ಠಾಣೆಯಲ್ಲಿ ಅನಾರೋಗ್ಯ ಕಾಡುತ್ತಿದ್ದ ದಲಿತ ಯುವಕನನ್ನು ಕ್ರೂರವಾಗಿ ಥಳಿಸಿದ್ದಾರೆ. ಠಾಣೆಗೆ ಹೋದ ವೃದ್ಧ ತಾಯಿ ಶಾಂತಾರನ್ನು(65) ಅವಮಾನಿಸಿ ಹೊರಗಟ್ಟಿದ್ದಾರೆ. ಹೊಡೆದ ನಿವೃತ್ತ ಪೊಲೀಸ್ ಅಧಿಕಾರಿಗೂ ದಲಿತ ಕುಟುಂಬಕ್ಕೂ ಆಸ್ತಿವಿವಾದ ಇದೆ ಎಂದು ಊರವರು ಹೇಳುತ್ತಿದ್ದಾರೆ. ಯುವಕನಿಗೆ ಹೊಡೆದ ನೆರೆಯ ನಿವೃತ್ತ ಪೊಲೀಸ್ ಅಧಿಕಾರಿಯ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊತ್ತನ್‌ಕ್ಕೋಡ್ ಸಿ.ಐ. ಶಾಜಿ ತಿಳಿಸಿದ್ದಾರೆ. ಅದೇವೇಳೆ ಪೊಲೀಸ್ ಠಾಣೆಯಲಿ ಥಳಿಸಲಾಗಿದೆ ಎನ್ನುವ ಆರೋಪ ಸತ್ಯವಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News