ಒಮನ್‌ನಲ್ಲಿ ಭಾರೀ ಮಳೆ

Update: 2017-02-26 09:00 GMT

ಮಸ್ಕತ್,ಫೆ. 26: ಸಣ್ಣ ವಿರಾಮದ ಬಳಿಕ ಒಮನ್‌ನ ಉತ್ತರ ಪ್ರಾಂತದಲ್ಲಿ ಭಾರೀ ಮಳೆ ಸುರಿದಿದೆ. ರುಸ್ತಾಖ್, ನಖಲ್ ಸಹಿತ ಸಮೀಪ ಪ್ರದೇಶಗಳು ಮಳೆಯಿಂದಾಗಿ ಶನಿವಾರ ಜಲಾವೃತವಾಗಿವೆ. ಮಧ್ಯಾಹ್ನದ ಬಳಿಕ ಮಳೆಸುರಿದಿದೆ.

ಮಳೆ ನೀರಿನಿಂದಾಗಿ ಹಲವು ಕಡೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಆದರೆ ಎಲ್ಲಿಯೂ ಅನಾಹುತಗಳಾದ ಸುದ್ದಿಗಳು ವರದಿಯಾಗಿಲ್ಲ.

ಭಾರೀ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಶನಿವಾರ ಬೆಳಗ್ಗೆಯೇ ಹವಾಮಾನ ನಿರೀಕ್ಷಣಾ ಕೇಂದ್ರ ಎಚ್ಚರಿಕೆ ನೀಡಿತ್ತು. ಮುಸಾಂದಂ, ಅಲ್ ಹಜರ್ ಪರ್ವತಗಳ ಪರಿಸರಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಗಾಳಿ ಮಳೆಯಾಗಿದೆ. ಈ ತಿಂಗಳ ಆರಂಭದಲ್ಲಿ ಮಸ್ಕತ್‌ನ ವಿವಿಧ ಕಡೆಗಳು ಸಹಿತ ಒಮನ್‌ನ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು. ಮಂಜುಕವಿದ ವಾತಾವರಣ ನಿರ್ಮಾಣವಾಗಿತ್ತುಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News