ನಿಧನ: ರಘು ಪುರುಷ ಸಜಂಕಿಲ

Update: 2017-03-01 12:30 GMT

ಕಾಸರಗೋಡು, ಮಾ.1: ಖ್ಯಾತ ಪ್ರಸಾದನ ಕಲಾವಿದ ರಘು ಪುರುಷ ಸಜಂಕಿಲ (೭೮)  ಮಂಗಳವಾರ  ರಾತ್ರಿ ಹೃದಯಾಘಾತದಿಂದ ನಿಧನರಾದರು.

ಸುಮಾರು ಐವತ್ತು ವರ್ಷಕ್ಕೂ ಮಿಕ್ಕಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದ ಇವರು ಮಣಿ ಸಾಮಗ್ರಿಗಳ ತಯಾರಿಯಲ್ಲಿ ಪ್ರಸಿದ್ಧರಾದವರು.

ಪೈವಳಿಕೆಯ ಗಣೇಶ ಕಲಾವೃಂದದಲ್ಲಿ ಕೆಲಸ ನಿರ್ವಹಿಸಿದ ಇವರು ಅನೇಕ ತೆಂಕುತಿಟ್ಟಿನ ಮೇಳಗಳಿಗೆ ಕಿರೀಟ, ಮಣಿ ಸಾಮಗ್ರಿಗಳನ್ನು ತಯಾರಿಸಿಕೊಟ್ಟವರು. ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ