ಮನುಷ್ಯನ ಕಣ್ಣುಗಳಂತೆ ಚರ್ಮವೇಕೆ ಪಾರದರ್ಶಕವಲ್ಲ...?

Update: 2017-03-02 08:45 GMT

ಗೋಚರ ಬೆಳಕು ಮಾನವ ಶರೀರವನ್ನು ಪ್ರವೇಶಿಸಿದಾಗ ಅದು ತನ್ನ ಪಥದಲ್ಲಿ ಕೊಲಾಜೆನ್ ಫೈಬರ್‌ಗಳು, ವಪೆಗಳು ಮತ್ತು ಇತರ ದೇಹಭಾಗಗಳಿಂದ ಚದುರಿಸಲ್ಪಡುತ್ತದೆ ಮತ್ತು ಈ ಹಂತದಲ್ಲಿ ಅದರ ದೃಗ್ವೈಜ್ಞಾನಿಕ ಗುಣದಲ್ಲಿ ಬದಲಾವಣೆಯಾಗುತ್ತದೆ. ಕೊಲಾಜೆನ್ ಫೈಬರ್ ಅಮಿನೋ ಆ್ಯಸಿಡ್‌ಗಳಿಂದ ರೂಪುಗೊಂಡ ಪ್ರೋಟಿನ್ ಆಗಿದೆ.

ಈ ಬದಲಾವಣೆಗಳು ಬೆಳಕಿನ ತರಂಗಾಂತರಕ್ಕಿಂತ ಹೆಚ್ಚು ದೂರದಲ್ಲಿ ನಡೆಯುವುದರಿಂದ ಬೆಳಕಿನ ಚದುರುವಿಕೆಯು ಮಹತ್ವಪೂರ್ಣವಾಗಿದೆ.

ಚರ್ಮದ ಮೂಲಕ ಕಳುಹಿಸಲಾದ ಬೆಳಕಿನ ಚಿತ್ರವು ಈ ಚದುರುವಿಕೆಯಿಂದಾಗಿ ವ್ಯಾಪಕ ಬೆರೆಯುವಿಕೆಗೆ ಒಳಗಾಗುತ್ತದೆ, ಹೀಗಾಗಿ ಗೋಚರ ಬೆಳಕಿನಲ್ಲಿ ಮಾನವ ಪಾರದರ್ಶಕನಾಗಿರುವುದಿಲ್ಲ ಅಥವಾ ನಮ್ಮ ಚರ್ಮವು ಪಾರದರ್ಶಕತೆಯನ್ನು ಪ್ರದರ್ಶಿಸುವುದಿಲ್ಲ.

ಮಾನವನ ಕಣ್ಣುಗಳ ಕಾರ್ನಿಯಾದಲ್ಲಿ ಕೊಲಾಜೆನ್ ಫೈಬರ್‌ಗಳು ಮತ್ತು ಮಸೂರದಲ್ಲಿ ಸ್ಫಟಿಕೀಯ ಪ್ರೋಟಿನ್ ಇವೆಯಾದರೂ ಅವು ಗೋಚರ ಬೆಳಕಿಗೆ ಪಾರದರ್ಶಕವಾಗಿವೆ.

ಫೈಬರ್‌ಗಳು ಮತ್ತು ಪ್ರೋಟಿನ್‌ಗಳು ದಟ್ಟವಾಗಿ ತುಂಬಿರುವುದು ಮತ್ತು ಅಲ್ಪ ವ್ಯಾಪ್ತಿಯ ವ್ಯವಸ್ಥೆ ಎಂದು ಕರೆಯಲಾಗುವ ಪ್ರಕ್ರಿಯೆ ಇದಕ್ಕೆ ಕಾರಣ. ಈ ವ್ಯವಸ್ಥೆಯಲ್ಲಿ ಸಣ್ಣ ಪ್ರದೇಶದಲ್ಲಿರುವ ಎಲ್ಲ ಫೈಬರ್‌ಗಳು ಅಥವಾ ಪ್ರೋಟಿನ್‌ಗಳು ಒಂದೇ ಬಗೆಯ ದೃಷಿಕೋನವನ್ನು ಹೊಂದಿರುತ್ತವೆ, ಆದರೆ ಚರ್ಮದಲ್ಲಿಯ ಕೊಲಾಜೆನ್ ಫೈಬರ್‌ಗಳು ಹೀಗಿರುವುದಿಲ್ಲ.

ದಟ್ಟವಾಗಿ ತುಂಬಿರುವುದೆಂದರೆ ದೃಗ್ವೈಜ್ಞಾನಿಕ ಬದಲಾವಣೆಗಳು ಬೆಳಕಿನ ತರಂಗಾಂತರಕ್ಕಿಂತ ಕಡಿಮೆ ದೂರಲ್ಲಿ ಸಂಭವಿಸುತ್ತವೆ. ಪರಿಣಾಮವಾಗಿ ಬೆಳಕು ಪ್ರಾಥಮಿಕವಾಗಿ ಎದುರಿನ ದಿಕ್ಕಿನತ್ತ ಅಂದರೆ ರೆಟಿನಾದತ್ತ ಚದುರಲ್ಪಡುತ್ತವೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News