ಶಿಕ್ಷಕನಾಗುವ ಯುವಕನ ಕನಸು ಹೊಸಕಿಹಾಕಿದ ಸಿಆರ್‌ಪಿಎಫ್ ಗುಂಡು

Update: 2017-03-04 09:11 GMT

ಳೆದ ಕೆಲ ದಶಕಗಳಿಂದ, ಕಾಶ್ಮೀರದಲ್ಲಿ ಸ್ವಯಂಬದ್ಧತೆಗಾಗಿ ಹೋರಾಡಿದ ಸಾವಿರಾರು ಮಂದಿ ಕಣಿವೆ ನಿವಾಸಿಗಳು ಭದ್ರತಾ ಪಡೆಯಿಂದ ಹತ್ಯೆಗೀಡಾಗಿದ್ದಾರೆ; ಇಲ್ಲವೇ ಅಂಗಹೀನವಾಗಿದ್ದಾರೆ, ಚಿತ್ರಹಿಂಸೆ ಅನುಭವಿಸಿದ್ದಾರೆ. ಕಣಿವೆಯಲ್ಲಿ ವಾಸಿಸುವ ಬಹುತೇಕ ಮಂದಿಗೆ ತಾವು ಕೆಟ್ಟ ಸ್ಥಳದಲ್ಲಿ ಕೆಟ್ಟ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ ಎನಿಸುವಷ್ಟರ ಮಟ್ಟಿಗೆ ಹತಾಶರಾಗಿದ್ದಾರೆ.

ಸಾಜದ್ ಅಹ್ಮದ್ ಭಟ್ ಅವರ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಬಾರಾಮುಲ್ಲಾ ಜಿಲ್ಲೆಯ ಹರುಕುಮನೆಯಲ್ಲಿ 22 ವರ್ಷ ವಯಸ್ಸಿನ ಈ ಯುವಕ ಪ್ರಾರ್ಥನೆ ಮಾಡುತ್ತಾ ಅಥವಾ ರಾತ್ರಿ ನಕ್ಷತ್ರಗಳನ್ನು ಎಣಿಸುತ್ತಾ ಕೂರುವ ಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಗೋಡೆಗಳೇ ಸಂಗಾತಿಗಳು.

ತಂದೆ- ತಾಯಿಯ ಏಕೈಕ ಮಗ, ಕಲಿತು ಶಿಕ್ಷಕನಾಗಿ ಇತರ ಮಕ್ಕಳಿಗೆ ಬೋಧಿಸುವ ಕನಸು ಕಾಣುತ್ತಿದ್ದ. ಆದರೆ ವಿಧಿ ಈ ಹದಿಹರೆಯದ ಯುವಕನ ಭವಿಷ್ಯವನ್ನೇ ಬದಲಿಸಿತು. ಸಿಆರ್‌ಪಿಎಫ್ ಸಿಬ್ಬಂದಿ ಸಿಡಿಸಿದ ಏಕೈಕ ಗುಂಡು ಈತನ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡಿತು. ಆತನ ಎಡಗಣ್ಣನ್ನು ಬಲಿ ಪಡೆದ ಈ ಗುಂಡು ಆತನ ಬದುಕನ್ನೇ ಕತ್ತಲುಗೊಳಿಸಿತು. ಫೆಬ್ರವರಿ 10 ಆತನ ಪಾಲಿಗೆ ಕರಾಳ ದಿನ.

ಬುರ್ಹಾನ್ ವಾನಿ ಎನ್‌ಕೌಂಟರ್ ಖಂಡಿಸಿ, 2016ರಲ್ಲಿ ಇಡೀ ಕಾಶ್ಮೀರ ಕಣಿವೆ ಸಂಘರ್ಷದ ಕುದಿಬಿಂದುವಾಗಿತ್ತು. ಇದು ಅಂಥ ದೊಡ್ಡಮಟ್ಟದ ಮೊದಲ ಪ್ರತಿಭಟನೆಯೂ ಅಲ್ಲ; ಕೊನೆಯದ್ದೂ ಅಲ್ಲ. 2013ರ ಫೆಬ್ರವರಿಯಲ್ಲಿ, ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದ ಆರೋಪಿ ಅಫ್ಝಲ್ ಗುರುನನ್ನು ನೇಣುಗಂಬಕ್ಕೆ ಏರಿಸಿದ್ದನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಪ್ರತಿಭಟನೆ ತೀವ್ರಗೊಂಡು ಇಡೀ ಕಣಿವೆಯನ್ನು ಆವರಿಸಿದಾಗ, ಸಾಜದ್ ಸ್ಥಳೀಯ ಕೋಚಿಂಗ್ ಸೆಂಟರ್‌ನಲ್ಲಿ ಟ್ಯೂಷನ್‌ಗೆ ತೆರಳುತ್ತಿದ್ದ. 12ನೆ ತರಗತಿ ವಿದ್ಯಾರ್ಥಿಯಾಗಿದ್ದ ಈ ಯುವಕ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಇಸ್ಲಾಮಿಕ್ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ.

ಮಧ್ಯಾಹ್ನ 2ರ ವೇಳೆಗೆ ತರಗತಿ ಮುಗಿದಿತ್ತು. ಆದರೆ ಜನ ಘೋಷಣೆಗಳನ್ನು ಕೂಗುತ್ತಾ ದೊಡ್ಡ ಮೊವಣಿಗೆಯಲ್ಲಿ ತೆರಳುತ್ತಿದ್ದುದನ್ನು ಕಂಡ ಸಾಜದ್ ಬೇಗ ಮನೆ ಸೇರಿಕೊಳ್ಳುವ ತವಕದಲ್ಲಿದ್ದ. ಆದರೆ ಗೇಟಿನ ಹೊರಗೆ ಬಂದಾಗ, ಪ್ರತಿಭಟನಾಕಾರರು ಹಾಗೂ ಸಿಆರ್‌ಪಿಎಫ್ ಪಡೆಗಳ ಮಧ್ಯೆ ಸಿಕ್ಕಿಹಾಕಿಕೊಂಡಿರುವುದು ಗಮನಕ್ಕೆ ಬಂತು. ಅಲ್ಲಿಂದ ತಪ್ಪಿಸಿಕೊಂಡು ಅಡಗಿಕೊಳ್ಳಬೇಕು ಎಂದು ಯೋಚಿಸುವಷ್ಟರಲ್ಲಿ, ಸಿಆರ್‌ಪಿಎಫ್ ಸಿಬ್ಬಂದಿ ಟ್ರಿಗರ್ ಎಳೆದು ಸಮೂಹದತ್ತ ಗುಂಡು ಹಾರಿಸಿದ್ದರು. ಬಾರಾಮುಲ್ಲಾದಲ್ಲಿ ಅಂದು ನಾಲ್ಕು ಮಂದಿಗೆ ಗುಂಡೇಟು ತಗುಲಿತು. ಅವರ ಪೈಕಿ ಸಾಜದ್ ಒಬ್ಬರು. ಎಡಗಣ್ಣಿಗೆ ಗುಂಡು ತಾಗಿತು ಹಾಗೂ ಆತ ನಿರ್ಜನ ಬೀದಿಯಲ್ಲಿ ಬಿದ್ದ.

‘‘ನನ್ನ ಕಣ್ಣನ್ನು ಮುಟ್ಟಿನೋಡಿಕೊಂಡಾಗ, ಕಣ್ಣಿನಿಂದ ರಕ್ತ ಸುರಿಯುತ್ತಿರುವುದು ತಿಳಿಯಿತು. ನನ್ನ ಕಣ್ಣಿಗೆ ಕಲ್ಲು ತಾಗಿರಬೇಕೆಂದು ಎಣಿಸಿದೆ. ನನ್ನನ್ನು ಆಸ್ಪತ್ರೆಗೆ ಒಯ್ಯುತ್ತಿದ್ದವರು, ನನ್ನ ತಲೆ ಮುಟ್ಟಿಕೊಳ್ಳಲು ಅವಕಾಶ ನೀಡಲಿಲ್ಲ’’ ಎಂದು ಸಾಜದ್ ನೆನಪಿಸಿಕೊಳ್ಳುತ್ತಾನೆ.

ಪಕ್ಕದ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲಾಯಿತು. ಅಲ್ಲಿ ಆತನನ್ನು ಶ್ರೀನಗರದ ಶೇರ್ ಇ ಕಾಶ್ಮೀರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಸ್‌ಕೆಐಎಂಎಸ್)ಗೆ ಒಯ್ಯಲು ಸೂಚಿಸಲಾಯಿತು. ಬಹುಶಃ ಆತನ ತಲೆಯಿಂದ ರಕ್ತಸ್ರಾವವಾಗಿರಬೇಕು ಹಾಗೂ ಆತ ಮೃತಪಟ್ಟಿದ್ದಾನೆ ಎಂದು ಎಸ್‌ಕೆಐಎಂಎಸ್ ವೈದ್ಯರು ಅಭಿಪ್ರಾಯಪಟ್ಟರು.

‘‘ಆತ ಸತ್ತಿರಬೇಕು ಎಂದು ಅವರು ಹೇಳಿದರು. ಆದರೆ ದಿಢೀರನೇ ಸಾಜದ್ ಎದ್ದುನಿಂತ. ಆತನ ಮೆದುಳಿಗೆ ಗುಂಡು ಹೊಕ್ಕು ಆತ ಸತ್ತಿರಬೇಕು ಎಂಬ ವೈದ್ಯರ ಎಣಿಕೆ ಸುಳ್ಳಾಗಿತ್ತು. ತಕ್ಷಣ ಆಪರೇಷನ್ ಥಿಯೇಟರ್‌ಗೆ ಒಯ್ಯಲಾಯಿತು’’ ಎಂದು ಸಾಜದ್‌ನನ್ನು ಆಸ್ಪತ್ರೆಗೆ ಕರೆದೊಯ್ದ ಫಾರೂಕ್ ಅಹ್ಮದ್ ಮಿರ್ ವಿವರಿಸಿದರು. ಮುಂದಿನ ಆರು ತಿಂಗಳವರೆಗೆ ಸಾಜದ್ ಪ್ರಜ್ಞಾಹೀನ ಸ್ಥಿತಿಯಲ್ಲೇ ಆಸ್ಪತ್ರೆಯಲ್ಲಿದ್ದ. ಆದರೆ ಎಚ್ಚರಗೊಂಡ ಬಳಿಕವೂ ಆತ ಸಂತೋಷದಿಂದ ಇರಲು ಸಾಧ್ಯವಾಗಲಿಲ್ಲ.

‘‘ನಾನು ದಿಢೀರನೇ ಎದ್ದು ಎಡಕಣ್ಣು ಮುಟ್ಟಿನೋಡಿದೆ. ಅಲ್ಲಿ ಆಳವಾದ ರಂಧ್ರಮಾತ್ರ ಇದ್ದುದು ನನಗೆ ಆಘಾತ ತಂದಿತು’’.

ದುರಂತ ಸರಣಿ

ಸಾಜದ್‌ಗೆ ಗುಂಡೇಟು ತಗುಲಿದ್ದು, ಅವರ ಕುಟುಂಬಕ್ಕೆ ಆದ ಮೊದಲ ಆಘಾತವಲ್ಲ. 21 ವರ್ಷ ಹಿಂದೆ ಸಾಜದ್ ಅವರ ಚಿಕ್ಕಪ್ಪ (ಆತನ ಹೆಸರೂ ಸಾಜದ್) ವಿದ್ಯಾರ್ಥಿಯಾಗಿದ್ದಾಗ ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದರು. ಸರಕಾರ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಅವರ ಕುಟುಂಬ ನಂಬಿಕೆ ಕಳೆದುಕೊಂಡದ್ದು ಅಚ್ಚರಿಯೇನಲ್ಲ. ಆ ಬಳಿಕ ಅವರು ಮತಹಾಕುವ ಗೋಜಿಗೂ ಹೋಗಲಿಲ್ಲ.

ಸಾಜದ್‌ನ ತಂದೆ ಝಹೂರ್ ಅಹ್ಮದ್ ಭಟ್ (55), ಸಣ್ಣ ರೈತ. ಮಾಸಿಕ ಆದಾಯ ಸುಮಾರು 4,000 ರೂ. ಏಕೈಕ ಮಗನ ಸ್ಥಿತಿ ಕಂಡು ಖಿನ್ನತೆಗೆ ಒಳಗಾಗಿದ್ದಾರೆ. ‘‘ಆತ ನಮಗಿದ್ದ ಒಬ್ಬನೇ ಮಗ. ಆತ ಸಾಮಾನ್ಯ ಬದುಕು ಸಾಗಿಸಲೂ ಅವರು ಅವಕಾಶ ನೀಡಲಿಲ್ಲ. ಈ ಸ್ಥಿತಿಯಲ್ಲಿ ಆತನನ್ನು ಕಂಡಾಗ ಕರುಳು ಕಿತ್ತುಬರುತ್ತದೆ. ಆತನಿಗೆ ಘಟನಾವಳಿಗಳ ನೆನಪು ಇರುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಒಬ್ಬಂಟಿಯಾಗಿರುತ್ತಾನೆ ಹಾಗೂ ಬಹುತೇಕ ಅವಧಿಯಲ್ಲಿ ಮಾತನಾಡಲೂ ಬಯಸುವುದಿಲ್ಲ’’.

ಆತನ ತಾಯಿ ಮೀಮಾ ಬೇಗಂ, ಸ್ಥಳೀಯ ಶಾಲೆಯಲ್ಲಿ ಅಡುಗೆ ಕೆಲಸಕ್ಕಿದ್ದಾರೆ. ಇದರಿಂದ ಮಾಸಿಕ 1,000 ರೂ. ಆದಾಯ ಬರುತ್ತದೆ. ಮಗನ ಚಿಕಿತ್ಸೆಗೇ ಬಹುತೇಕ ಹಣ ಖರ್ಚಾಗುವುದರಿಂದ, ಕುಟುಂಬದ ಬದುಕು ಸಾಗಿಸಲು ಹೆಣಗಾಡುವ ಪರಿಸ್ಥಿತಿ ಇದೆ. ‘‘ನಮ್ಮ ವಿವಾಹವಾಗಿ ಹತ್ತು ವರ್ಷ ಬಳಿಕ ಸಾಜದ್ ಹುಟ್ಟಿದ್ದ. ನಮ್ಮನ್ನು ಬಡತನದಿಂದ ಪಾರು ಮಾಡುತ್ತಾನೆ ಎಂಬ ವಿಶ್ವಾಸದಲ್ಲಿದ್ದೆವು’’ ಎಂದು ಮೀಮಾ ಹತಾಶರಾಗಿ ನುಡಿಯುತ್ತಾರೆ. ‘‘ತಾನು ದುಡಿಯಲು ಆರಂಭಿಸಿದ ಬಳಿಕ ಉತ್ತಮ ಬದುಕು ನಮ್ಮದಾಗುತ್ತದೆ ಎಂದು ಆತ ಹೇಳುತ್ತಿದ್ದ. ಆದರೆ ದುರದೃಷ್ಟ ನೋಡಿ. ಅವರು ನಮ್ಮ ಮಗನನ್ನು ಅರ್ಧ ಕೊಂದಿದ್ದಾರೆ. ಇನ್ನರ್ಧ ಬಾಳನ್ನು ಯಾತನೆಯಲ್ಲೇ ಕಳೆಯಬೇಕು’’ ಎಂದು ಗದ್ಗದಿತರಾಗಿ ಮೀಮಾ ನುಡಿಯುತ್ತಾರೆ.

ನಿರೀಕ್ಷೆಯ ಹುಡುಕಾಟ

ಈ ದುರಂತ ನಡೆದ ಬಳಿಕ ಸಾಜದ್ ತಮ್ಮ ಧರ್ಮದಲ್ಲಿ ನೆಮ್ಮದಿ ಕಾಣುತ್ತಿದ್ದಾನೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುತ್ತಾನೆ. ಗ್ರಾಮದ ಮಸೀದಿಯಲ್ಲಿ ಆಝಾನ್ (ಪ್ರಾರ್ಥನೆಗೆ ಕರೆ) ನೀಡುತ್ತಾನೆ. ನಾಲ್ಕು ವರ್ಷಗಳ ಕಾಲ ಓದಿನಿಂದ ದೂರವಿದ್ದ ಹಿನ್ನೆಲೆಯಲ್ಲಿ, ಕಳೆದ ವರ್ಷ 12ನೆ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾನೆ.

ನನಗೆ ಸರಿಯಾಗಿ ಓದಲು ಹಾಗೂ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಾಗ್ಯೂ ಓದು ಮುಂದುವರಿಸಲು ಶಕ್ತಿಮೀರಿ ಪ್ರಯತ್ನಪಡುತ್ತಿದ್ದೇನೆ. ನಮ್ಮ ಕುಟುಂಬದ ಹಣಕಾಸು ಸ್ಥಿತಿ ಹದಗೆಟ್ಟಿದೆ. ನನಗಾಗಿ ಪೋಷಕರು ಎಷ್ಟುದಿನ ದುಡಿಯಬಲ್ಲರು? ಎನ್ನುವುದು ಆತನ ಪ್ರಶ್ನೆ.

ಒಂದಷ್ಟು ಸಂಬಳ ಸಿಗುವ ಉದ್ಯೋಗಕ್ಕೆ ಹೋಗಬೇಕು. ಎಲ್ಲ ಕೆಟ್ಟ ನೆನಪುಗಳನ್ನು ಮರೆದು, ಸಾಜದ್ ಓದು ಮುಂದುವರಿಸಿ, ಇದೀಗ ಇಮಾಮ್ ಆಗುವ ಕನಸು ಕಾಣುತ್ತಿದ್ದಾನೆ. ಪ್ರಾರ್ಥನೆ ಮಾಡು ವುದರಲ್ಲಿ ನನಗೆ ಶಾಂತಿ ಸಿಗುತ್ತದೆ ಎನ್ನುತ್ತಿದ್ದಾ

Writer - ರಕೀಬ್ ಹಮೀದ್ ನಾಯ್ಕ

contributor

Editor - ರಕೀಬ್ ಹಮೀದ್ ನಾಯ್ಕ

contributor

Similar News