‘ಮ್ಯಾನ್ ಹೋಲ್’ಗಳಲ್ಲಿ ಜೀವ ಹರಣ..!

Update: 2017-03-10 18:43 GMT

ಮಾನ್ಯರೆ,

‘ಸಿಲಿಕಾನ್ ಸಿಟಿ’ ‘ಗಾರ್ಡನ್ ಸಿಟಿ’ ಎಂದು ಕರೆಯಿಸಿಕೊಳ್ಳುವ ಬೆಂಗಳೂರು ನಗರವನ್ನು ಭವಿಷ್ಯದಲ್ಲಿ ‘ಮ್ಯಾನ್ ಹೋಲ್ ನಗರಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಬೆಂಗಳೂರಿನಲ್ಲಿ 2.25 ಲಕ್ಷ ಮ್ಯಾನ್ ಹೋಲ್‌ಗಳಿವೆ. ಆದರೆ ಜಲಮಂಡಳಿಯಲ್ಲಿ ಸ್ವಚ್ಛತಾ ಕಾರ್ಮಿಕರು ಇರುವುದು 125. ಗುತ್ತಿಗೆ ಕಾರ್ಮಿಕರು 300. ಆದರೆ ಇವರ ಜೀವಕ್ಕೆ ರಕ್ಷಣೆ, ಭದ್ರತೆ ಕೊಡುವವರು ಯಾರೂ ಇಲ್ಲ. 2008ರಿಂದ 2017ರ ಫೆಬ್ರವರಿಯವರೆಗೆ ರಾಜ್ಯದಲ್ಲಿ 60ಕ್ಕಿಂತಲೂ ಹೆಚ್ಚು ಮಂದಿ ಮ್ಯಾನ್ ಹೋಲ್‌ಗೆ ಬಲಿಯಾಗಿದ್ದಾರೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಮಂದಿ ಜೀವ ಕಳೆದುಕೊಂಡಿದ್ದಾರೆ. ಇವರ ಜೀವಕ್ಕೆ ಬೆಲೆಯೇ ಇಲ್ಲವೇ..?

ಒಳಚರಂಡಿ, ಮ್ಯಾನ್‌ಹೋಲ್ ಇತ್ಯಾದಿಗಳನ್ನು ಶುಚಿಗೊಳಿಸಲು ಯಾವುದೇ ವ್ಯಕ್ತಿಯನ್ನು ಬಳಸುವುದಿಲ್ಲ ಎಂದು ಜಲಮಂಡಳಿ ಐದು ವರ್ಷಗಳ ಹಿಂದಷ್ಟೇ ಹೈಕೋರ್ಟ್‌ಗೆ ಮಾತು ಕೊಟ್ಟಿತ್ತು. ಈ ಮಾತನ್ನು ಮರೆತ ಜಲಮಂಡಳಿ ಇದೀಗ ಮತ್ತೆ ಜೀವ ಬಲಿ ಪಡೆದಿದೆ. ಹಾಗಾದರೆ ಜಲಮಂಡಳಿಗೆ ಯಾವ ಶಿಕ್ಷೆ ಕೊಡಬೇಕು..? ಯಾರು ಶಿಕ್ಷೆ ಕೊಡಬೇಕು..?

ಕೋರ್ಟ್ ಆದೇಶವನ್ನ್ನು ಮೀರಿ ಮ್ಯಾನ್ ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಜಲಮಂಡಳಿಯ ಹಿರಿಯ ಅಧಿಕಾರಿಗಳನ್ನ್ನು ಕೂಡಲೇ ವಜಾಗೊಳಿಸಬೇಕು. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡಬೇಕು. ಆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು.

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News