ನಿಧನ: ಹಾಜಿ ಬಿ.ಕೆ ಇದ್ದಿನಬ್ಬ ಬೈಕಂಪಾಡಿ

Update: 2017-03-11 16:48 GMT

ಮಂಗಳೂರು, ಮಾ. 11: ಬೈಕಂಪಾಡಿಯ ಹಿರಿಯ ಧುರೀಣ ಹಾಜಿ ಬಿ.ಕೆ. ಇದ್ದಿನಬ್ಬ (85) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ ಬೈಕಂಪಾಡಿ ಅಂಗರಗುಂಡಿ ಸ್ವಗ್ರಹದಲ್ಲಿ ನಿಧನರಾದರು.

ಪ್ರಗತಿಪರ ಕೃಷಿಕರಾಗಿದ್ದ ಅವರು ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಕಡೆ ಪಿಡಬ್ಲ್ಯುಡಿ ಗುತ್ತಿಗೆದಾರರಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯಾಗಿದ್ದ ಅವರು, ಬೈಕಂಪಾಡಿ ಜಮಾತಿನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅನೇಕ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು.

ಅವರು ಪತ್ನಿ ಮೂವರು ಪುತ್ರರು,ಮೂವರು ಪುತ್ರಿಯರು, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮಿತಿಯಾಝ್ ಸೇರಿದಂತೆ ಮೊಮ್ಮಕ್ಕಳು,, ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಅವರ ದೊಡ್ಡಪ್ಪ.

 ಶನಿವಾರ ಮಧ್ಯಾಹ್ನ 3:30ಕ್ಕೆ ಬೈಕಂಪಾಡಿ ಜಮಾತಿನ ದಫನ ಭೂಮಿಯಲ್ಲಿ ಅವರ ಅಂತ್ಯ ಕ್ರಿಯೆ ನೆರವೇರಿಸಲಾಯಿತು.

ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಮಾಜಿ ಸಚಿವ ಜೆ.ಕ್ರಷ್ಣ ಪಾಲೆಮಾರ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮಾಜಿ ಉಪಮೇಯರ್‌ಗಳಾದ ಬಶೀರ್ ಬೈಕಂಪಾಡಿ, ಪುರುಷೋತ್ತಮ ಚಿತ್ರಾಪುರ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ತಾಲೂಕು ಪಂಚಾಯತ್ ಸದಸ್ಯ ಬಶೀರ್ ಅಹ್ಮದ್, ಕರ್ನಾಟಕ ಅಲ್ಪಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಅಬೂಬಕರ್ ಎನ್.ಬಿ., ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಿಮಾನ್, ಕರ್ನಾಟಕ ಸುನ್ನಿ ಕಲ್ಚರಲ್ ಫೋರಂನ ಅಧ್ಯಕ್ಷ ಬಿ.ಎಂ ಮಮ್ತಾಝ್ ಆಲಿ, ಕುಡುಂಬೂರು ಗುತ್ತು ಭೋಜ ಶೆಟ್ಟಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಎಂಜಿನಿಯರ್, ಕೇಂದ್ರ ಬ್ಯಾರಿ ಸಾಹಿತ್ಯ ಒಕ್ಕೂಟದ ಅಧ್ಯಕ್ಷ ರಹೀಮ್ ಟೀಕೆ, ಸಣ್ಣ ಕೈಗಾರಿಕಾ ಸಂಘದ ಮುಖಂಡ ಬಿ.ಎ. ನಝೀರ್, ಅಸ್ಗರ್ ಅಲಿ, ಡಿವೈಎಫ್‌ಐ ಮುಖಂಡ ಸಾದಿಕ್ ಕಣ್ಣೂರು, ಕಾಂಗ್ರೆಸ್ ಮುಖಂಡ ಜಲೀಲ್ ಬದ್ರಿಯಾ, ಬೈಕಂಪಾಡಿ ಜಮಾತ್ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮುಂತಾದವರು ಮೃತರ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ